ಗ್ರಾಮಾಂತರ ಸಮುದಾಯ ಸುದ್ದಿ ಸ್ಥಳೀಯ

ರಾಮನೈವೇದ್ಯಕ್ಕೆ ಭತ್ತದ ಭಕ್ತಿ: ಕುಂಬಳೆ ಸೀಮೆಯಲ್ಲಿ ಭಕ್ತಿಯ ಬೇಸಾಯಕ್ಕಿಳಿದ ಶಿಷ್ಯವೃಂದ

ಕುಂಬಳೆ: ಶ್ರೀರಾಮ ನೈವೇದ್ಯಕ್ಕಾಗಿ ಭತ್ತದ ಭಕ್ತಿಯ ಮೂಲಕ ಶ್ರೀರಾಮಚಂದ್ರಾಪುರ ಮಠದ ಶಿಷ್ಯವೃಂದದವರು ಮುಳ್ಳೇರಿಯ ಮಂಡಲದ ಕುಂಬಳೆ ಸೀಮಾ ವ್ಯಾಪ್ತಿಯಲ್ಲಿ ಭತ್ತದ ಬೇಸಾಯದ ಅಭಿಯಾನ ಆರಂಭಿಸಿದ್ದಾರೆ. ತನ್ಮೂಲಕ ಬೇಸಾಯಕ್ಕೆ ಕೆಲವೊಂದು ಗದ್ದೆಗಳು ಸಜ್ಜಾಗಿದ್ದು, ಭತ್ತದ ಪೈರುಗಳಿಂದ ಕಂಗೊಳಿಸಲಿದೆ. ಶ್ರೀಮಠದ ಶಿಷ್ಯವೃಂದದವರು ಉತ್ಸಾಹದಿಂದ ಶ್ರಮದಾನದ ಮೂಲಕ ಈ ಸೇವಾಕಾರ್ಯಕ್ಕೆ ಇಳಿದಿದ್ದು, ವಿವಿಧ ಗದ್ದೆಗಳ ಮಾಲಕರು ಜೊತೆಗೂಡಿದ್ದಾರೆ.

ಏತಡ್ಕ, ಬಡಗಮೂಲೆ, ಕಾನತ್ತಿಲ, ಕನ್ನೆಪ್ಪಾಡಿ, ಪೆರ್ಣೆ, ಕಿನ್ನಿಂಗಾರು ಇತ್ಯಾದಿ ಕೇಂದ್ರಗಳಲ್ಲಾಗಿ ಸುಮಾರು 3.5 ಎಕ್ರೆ ಸ್ಥಳಗಳಲ್ಲಿ ಭತ್ತದ ಬೇಸಾಯದ ಕಾರ್ಯ ಆರಂಭವಾಗಿದೆ. ಪ್ರಸ್ತುತ ಸನ್ನಿವೇಶಕ್ಕೆ ಹೊಂದಿಕೊಂಡು ಶ್ರೀ ಮಠದ ಶಿಷ್ಯವೃಂದದವರು ಗದ್ದೆಗಿಳಿದು ಕಾಡುಗಳನ್ನು ಕಡಿಯುವುದು, ಗೊಬ್ಬರ ಹಾಕುವುದು, ನೇಜಿ ನೆಡುವುದು ಇತ್ಯಾದಿ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಂದು ಸ್ಥಳಗಳಲ್ಲಿಯೂ ಯೋಜನೆ ಬಗ್ಗೆ ತಿಳಿಸಿದಾಗ ರಾಮನ ಸೇವೆಗೆ ಈ ಭೂಮಿ ಬಳಕೆಯಾಗುವುದಾದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೆ ಏನಿದೆ ಎಂಬ ಉದ್ಗಾರ ಭೂಮಿ ಕೊಟ್ಟವರಿಂದ ಬಂದಿದೆ ಎಂಬುದಾಗಿ ಸಂಘಟಕರು ತಿಳಿಸಿದ್ದಾರೆ.

ಸೇವಾಕಾರ್ಯದ ಕುರಿತು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಮಠದಲ್ಲಿ ಎಷ್ಟು ಬಗೆಯ ಸೇವೆಗಳಿದ್ದರೂ ಈ ಸೇವೆ ಅತಿವಿಶಿಷ್ಟವಾದುದು, ನೇರವಾಗಿ ಶ್ರೀರಾಮದೇವರಿಗೇ ಅದು ನೈವೇದ್ಯವಾಗಿ ಸಲ್ಲುವುದಲ್ಲವೇ? ಎಂಬುದಾಗಿ ಶ್ರೀರಾಮ ನೈವೇದ್ಯದ ಬಗ್ಗೆ ಸಂದೇಶವನ್ನೂ ನೀಡಿರುತ್ತಾರೆ.

******

ಮಠದಲ್ಲಿ ಎಷ್ಟು ಬಗೆಯ ಸೇವೆಗಳಿದ್ದರೂ ಈ ಸೇವೆ ಅತಿವಿಶಿಷ್ಟವಾದುದು, ನೇರವಾಗಿ ಶ್ರೀರಾಮದೇವರಿಗೇ ಅದು ನೈವೇದ್ಯವಾಗಿ ಸಲ್ಲುವುದಲ್ಲವೇ?
– ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಹಿರಿಯ ನಾಯಕ, ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನ

Upayuktha

ಕಟೀಲು ಮೇಳದ ಯಕ್ಷಗಾನ: ಬೋಂದೆಲ್ ದೆಪ್ಪುಣಿಗುತ್ತು ಮುಗಿಪು ಮನೆತನದ ವಜ್ರ ಮಹೋತ್ಸವ ಬಯಲಾಟ ಸೇವೆ ಫೆ.8ಕ್ಕೆ

Upayuktha

ರಾಜ್ಯ ಸರ್ಕಾರದ ಸಾಧನೆ: ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

Upayuktha

Leave a Comment

error: Copying Content is Prohibited !!