ದೇಶ-ವಿದೇಶ ಪ್ರಮುಖ

ಕಾಶ್ಮೀರ ವಿಚಾರದಲ್ಲಿ ಸೋಲೊಪ್ಪಿಕೊಂಡ ಪಾಕ್: ಮೋದಿ ಇರುವ ವರೆಗೂ ನಾವೇನೂ ಮಾಡಲಾಗದು ಎಂದ ಇಮ್ರಾನ್ ಖಾನ್

(ಚಿತ್ರ ಕೃಪೆ: ಯುರೇಶಿಯನ್ ಟೈಮ್ಸ್)

ಇಸ್ಲಾಮಾಬಾದ್:

ಕಾಶ್ಮೀರ ವಿಚಾರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗೆ ತಲೆಬಾಗಿ ಕೊನೆಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೋಲೊಪ್ಪಿಕೊಂಡಿದ್ದಾರೆ.

ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಿದ ಮೋದಿ ಸರಕಾರದ ನಡೆಯಿಂದ ಆಘಾತಗೊಂಡಿರುವ ಪಾಕಿಸ್ತಾನ ಹಲವು ಬಾರಿ ಅಂತಾರಾಷ್ಟ್ರೀಯ ವೇದಿಕೆಗಳನ್ನು ವಿಷಯ ಪ್ರಸ್ತಾಪಿಸಲು ಯತ್ನಿಸಿದರೂ ಯಶಸ್ವಿಯಾಗಿಲ್ಲ. ಪ್ರತಿಯೊಂದು ಕಡೆಯೂ ಹಿನ್ನಡೆಯನ್ನೇ ಅನುಭವಿಸಿದೆ.

ಭಾರತದಲ್ಲಿ ಪ್ರಧಾಣನಿ ಮೋದಿ ಅವರ ನಾಯಕತ್ವ ಇರುವ ವರೆಗೂ ಕಾಶ್ಮೀರ ವಿಚಾರದಲ್ಲಿ ಪಾಕ್‌ ಏನೂ ಮಾಡಲಾಗದು ಎಂಬ ಸತ್ಯವನ್ನು ಇಮ್ರಾನ್ ಖಾನ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಬೆಲ್ಜಿಯಂನ ಟಿವಿ ಚಾನೆಲ್ ಒಂದರ ಜತೆಗೆ ಮಾತನಾಡಿದ ಇಮ್ರಾನ್ ಖಾನ್, ‘ಭಾರತ ಸರಕಾರದಿಂದ ಈ ರೀತಿಯ ಕ್ರಮವನ್ನು ನಾನು ಎಂದೂ ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದ್ದಾರೆ.

ಭಾರತದಲ್ಲಿ ಎಲ್ಲಿಯ ವರೆಗೆ ಮೋದಿ ಅವರು ಪ್ರಧಾನಿಯಾಗಿರುತ್ತಾರೋ, ಅಲ್ಲಿಯವರೆಗೂ ನಾವೇನೂ ಮಾಡಲಾಗದು. ಮೋದಿ ಅವರು ಅತ್ಯಂತ ಬಲಿಷ್ಠ ನಾಯಕರಾಗಿದ್ದು, ಕಾಶ್ಮೀರ ವಿವಾದವನ್ನು ಅವರು ಶಾಶ್ವತವಾಗಿ ಬಗೆಹರಿಸುವ ಭರವಸೆಯಿದೆ ಎಂದು ಇಮ್ರಾನ್ ಖಾನ್ ತಿಳಿಸಿದರು.

ಸ್ವಾತಂತ್ರ್ಯ ಹೋರಾಟದ ವೇಳೆ ಭಾರತದ ನಾಯಕ ಜವಾಹರಲಾಲ್ ನೆಹರೂ ಅವರು ಕಾಶ್ಮೀರಿಗಳಿಗೆ ಎಲ್ಲ ಹಕ್ಕುಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು; ಆದರೆ ಏನನ್ನೂ ಮಾಡಿಲ್ಲ. ಆದರೆ ಅಂದು ಅವರು ಹೇಳಿದ್ದನ್ನೆಲ್ಲ ಇಂದಿನ ಭಾರತದ ಪ್ರಧಾನಿ ಮಾಡಿ ತೋರಿಸುತ್ತಿದ್ದಾರೆ’ ಎಂದು ಪಾಕ್ ಪ್ರಧಾನಿ ಹೇಳಿದರು.

2019ರ ಆಗಸ್ಟ್‌ ನಲ್ಲಿ ಭಾರತ ಸರಕಾರ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಕಾಶ್ಮೀರವನ್ನು ಪುನಾರಚನೆ ಮಾಡಿದಾಗ ಮೊದಲಿಗೆ ಪಾಕ್‌ ಆಘಾತಗೊಂಡಿತು. ನಂತರ ಪ್ರತಿಭಟನೆ ವ್ಯಕ್ತಪಡಿಸಿತು. ಆ ಬಳಿಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಲು ಯತ್ನಿಸಿ ಅಲ್ಲಿಯೂ ಹಿನ್ನಡೆ ಅನುಭವಿಸಿತು. ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿಯೂ ಒಂದು ಹಂತದಲ್ಲಿ ಪಾಕ್‌ ಬೆದರಿಕೆ ಒಡ್ಡಿತು. ಆದರೆ ಈಗ ಅವೆಲ್ಲವೂ ವಿಫಲವಾಗಿ, ಇಮ್ರಾನ್ ಖಾನ್ ಸೋಲೊಪ್ಪಿಕೊಂಡಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಸನ್ನಿ ಲಿಯೋನ್ ಮತ್ತೊಂದು ದುಬಾರಿ ಕಾರು ಖರೀದಿ

Harshitha Harish

ಅಡಿಕೆ ಮಾರುಕಟ್ಟೆ ತೇಜಿ: ಕ್ಯಾಂಪ್ಕೋಗೆ 32.10 ಕೋಟಿ ರೂ ಲಾಭ

Upayuktha

ದ.ಕ, ಉಡುಪಿ ಜಿಲ್ಲೆಗಳಲ್ಲಿ ಇಂದು ಕೊರೊನಾ ಪಾಸಿಟಿವ್ ಇಲ್ಲ; ಕಾಸರಗೋಡಿನಲ್ಲಿ 9 ಪಾಸಿಟಿವ್

Upayuktha