ದೇಶ-ವಿದೇಶ ಪ್ರಮುಖ

ಪಂಜಾಬಿ ಸಾಹಿತಿ ಅಮೃತಾ ಪ್ರೀತಂ ಜನ್ಮ ಶತಮಾನೋತ್ಸವಕ್ಕೆ ಗೂಗಲ್‌ನಿಂದ ವಿಶೇಷ ಡೂಡಲ್‌

ಹೊಸದಿಲ್ಲಿ: ಪಂಜಾಬಿ ಲೇಖಕಿ, ಪ್ರಬಂಧಕಾರ್ತಿ ಮತ್ತು ಕವಯಿತ್ರಿ ಅಮೃತಾ ಪ್ರೀತಂ ಅವರ ಜನ್ಮಶತಮಾನೋತ್ಸವವನ್ನು ಗೂಗಲ್ ವಿಶೇಷ ಡೂಡಲ್ ಮೂಲಕ ಆಚರಿಸಿಕೊಳ್ಳುತ್ತಿದೆ.

ಪಂಜಾಬಿ ಭಾಷೆಯಲ್ಲಿ 20ನೇ ಶತಮಾನದ ಪ್ರಮುಖ ಕವಯಿತ್ರಿ ಎಂಬ ಖ್ಯಾತಿಗೆ ಪಾತ್ರರಾದ ಅಮೃತಾ ಪ್ರೀತಂ, ಕಟುವಾದ ಕವಿತೆ ‘ಅಜ್‌ ಆಖಾಂ ವಾರಿಸ್ ಶಾಹ್ ನು’ ದಿಂದ ಪ್ರಸಿದ್ಧರಾದವರು. 1947ರ ಹತ್ಯಾಕಾಂಡವನ್ನು ಈ ಕವಿತೆ ಕಟುವಾಗಿ ವಿಮರ್ಶಿಸುತ್ತದೆ.

28 ಕಾದಂಬರಿಗಳನ್ನು ಅಮೃತಾ ಪ್ರೀತಂ ಪ್ರಕಟಿಸಿದ್ದು 1950ರಲ್ಲಿ ಪ್ರಕಟಿತ ‘ಪಿಂಜರ್’ (ಅಸ್ಥಿ ಪಂಜರ) ಅತ್ಯುತ್ತಮ ಕಾದಂಬರಿ ಎಂದು ಪರಿಗಣಿತವಾಗಿದೆ. ದೇಶ ವಿಭಜನೆಯ ಹಿನ್ನೆಲೆಯಲ್ಲಿ ಬರೆದ ಕಾದಂಬರಿ ಇದು. ಈ ಕಾದಂಬರಿ ಆಧರಿತ ಚಲನಚಿತ್ರ ‘ಪಿಂಜರ್’ 2003ರಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಯಿತು.

ಗೂಗಲ್ ಪ್ರಕಟಿಸಿದ ಡೂಡಲ್‌ನಲ್ಲಿ ಪ್ರೀತಂ ಕಪ್ಪು ಗುಲಾಬಿಗಳ ಗೊಂಚಲಿನ ಮುಂದೆ ಕಳಿತುಕೊಡು ಡೈರಿ ಬರೆಯುತ್ತಿರುವಂತೆ ಚಿತ್ರಿಸಲಾಗಿದೆ. ಕಪ್ಪು ಗುಲಾಬಿಗಳು ಅವರ ಜೀವನ ವೃತ್ತಾಂತ (ಆಟೋಬಯಾಗ್ರಫಿ) ‘ಕಾಲಾ ಗುಲಾಬ್’ನ ಪ್ರತೀಕವಾಗಿವೆ.

ಪಂಜಾಬಿ ಭಾಷೆಯಷ್ಟೇ ಅಲ್ಲ, ಹಿಂದಿ ಮತ್ತು ಉರ್ದುವಿನಲ್ಲೂ ಪ್ರೀತಂ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. 1986ರಲ್ಲಿ ಅವರನ್ನು ರಾಜ್ಯಸಭೆ ಸದಸ್ಯರಾಗಿ ನಾಮ ನಿರ್ದೇಶನಗೊಳಿಸಲಾಗಿತ್ತು.

1981ರಲ್ಲಿ ಭಾರತೀಯ ಜ್ಞಾನಪೀಠ ಸಾಹಿತ್ಯ ಪ್ರಶಸ್ತಿ ಹಾಗೂ 2005ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

2004ರಲ್ಲಿ ಜೀವಮಾನದ ಸಾಧನೆಗಾಗಿ ಸಾಹಿತ್ಯ ಅಕಾಡೆಮಿ ನೀಡುವ ಸಾಹಿತ್ಯ ಅಕಾಡೆಮಿ ಫೆಲೋಶಿಪ್‌ ಪುರಸ್ಕಾರವನ್ನು ಪಡೆದಿದ್ದರು.

Related posts

ರಾಜ್ಯದಲ್ಲಿಂದು 84 ಮಂದಿಗೆ ಪಾಸಿಟಿವ್; ಒಂದೇ ದಿನದಲ್ಲಿ ಅತ್ಯಧಿಕ

Upayuktha

ಮಳೆ ಹಾನಿ ಪರಿಹಾರ: ಕರ್ನಾಟಕಕ್ಕೆ ಕೇಂದ್ರದಿಂದ 1,200 ಕೋಟಿ ರೂ ಮಂಜೂರು

Upayuktha

ಗಾನಲೀನರಾದ ನಾದಬ್ರಹ್ಮ ಎಸ್ಪಿ ಬಾಲಸುಬ್ರಹ್ಮಣ್ಯಂ

Upayuktha News Network