ಇತರ ಕ್ರೀಡೆಗಳು ಸಾಧಕರಿಗೆ ನಮನ

ಪ್ಯಾರಾಲಿಂಪಿಯನ್ ದೇವೇಂದ್ರ ಝಾಝರಿಯಾ

ಜೀವನದಲ್ಲಿ ಎಲ್ಲವನ್ನು ಪಡೆದು ಏನನ್ನೂ ಸಾಧಿಸದವರು ಕೆಲವರಾದರೆ, ತಮ್ಮ ವಿಕಲತೆಗಳನ್ನು ಮೀರಿ ವಿಜೃಂಭಿಸಿದವರು ಇನ್ನು ಕೆಲವರು. ಕ್ರೀಡಾರಂಗದಲ್ಲಂತೂ ಇಂಥ ಅನೇಕ ದೃಷ್ಟಾಂತಗಳನ್ನು ಕಾಣಬಹುದು. ನಮ್ಮ ಇಂದಿನ ಸ್ಟಾರ್ ದೇವೇಂದ್ರ ಝಾಝರಿಯಾ. ಒಂದು ಕೈಯನ್ನು ಕಳಕೊಂಡಿದ್ದರೂ ಜ್ಯಾವೆಲಿನ್ ಥ್ರೋದಲ್ಲಿ ವಿಶ್ವ ದಾಖಲೆ ಸ್ಥಾಪಿಸಿ ಸತತ 2 ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಪ್ರಥಮ ಭಾರತೀಯ ಇವರು.

Advertisement
Advertisement

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಜನಿಸಿದ ದೇವೇಂದ್ರ ಜಾಜರಿಯಾ ಕುಟುಂಬ ಆರ್ಥಿಕವಾಗಿ ಇನ್ನೂ ಹಿಂದುಳಿದಿತ್ತು. ತನ್ನ ಪ್ರಾಯದ ಎಲ್ಲ ಹುಡುಗರಂತೆ ಶಾಲೆಗೆ ಹೋಗುತ್ತಿದ್ದ ಬಾಲಕ ಆಗಲೇ ತುಂಬಾ ಚುರುಕು. ರಜೆಯಲ್ಲಂತೂ ಬೆಳಗ್ಗೆ ಆಟಕ್ಕೆ ಮೈದಾನಕ್ಕಿಳಿದರೆ ಮತ್ತೆ ಬರುವುದು ಸಂಜೆಯೇ. ಇಂಥ ಬಾಲಕನ ಜೀವನದ ದುರ್ದಿನ ಬಲು ಬೇಗ ಬಂತು. ಒಂದು ಭಾನುವಾರ ಮನೆ ಹತ್ತಿರದ ಮರದ ಕೊಂಬೆ ಕಡಿಯುತ್ತಿದ್ದ ಬಾಲಕನ ಕೈ 11,000 ವಾಟ್ಸ್ ನ ಇಲೆಕ್ಟ್ರಿಕ್ ವೈರ್ ಗೆ ತಾಗುತ್ತದೆ. ದೇವೇಂದ್ರ ಪ್ರಜ್ಞೆ ತಪ್ಪಿ ಕೆಳಗೆ ಬೀಳುತ್ತಾನೆ. ಸುಟ್ಟು ಹೋದ ಕೈಯ ಕಮಟು ವಾಸನೆ ಸುತ್ತಲೂ ಅಡರುತ್ತದೆ. ಗ್ರಾಮಸ್ಥರು, ಹೆತ್ತವರು ಓಡೋಡಿ ಬಂದರು. ಚಲನೆಯಿಲ್ಲದೆ ಬಿದ್ದಿದ್ದ ದೇಹ ದೇವೇಂದ್ರ ಕಥೆ ಮುಗಿಯಿತೆಂದೇ ಎಲ್ಲರೂ ಭಾವಿಸುವಂತೆ ಮಾಡಿತು.

ಆದರೆ ದೇವೇಂದ್ರ ನಿಧಾನಕ್ಕೆ ಕಣ್ಣು ತೆರೆದ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಎಡಗೈ ಸಂಪೂರ್ಣ ಸುಟ್ಟು ಹೋಗಿತ್ತು. ಬದುಕಬೇಕಿದ್ದರೆ ಕೈ ಕತ್ತರಿಸಲೇಬೇಕಿತ್ತು. ವಿದ್ಯುತ್ ಆಘಾತಕ್ಕೆ ಒಳಗಾದ ದೇಹದ ಮೊದಲಿನ ಶಕ್ತಿ ಬರಲು ಸಾಧ್ಯವೇ ಇಲ್ಲವೆಂದು ವೈದ್ಯರು ಹೇಳಿದರು. ಸುಧಾರಿಸಿಕೊಂಡ ಬಾಲಕ ಮನೆಗೆ ಬರುತ್ತಾನೆ.

ವರುಷಗಳು ಉರುಳುತ್ತವೆ. ಮೊದಲೇ ಕ್ರೀಡೆಯಲ್ಲಿ ಆಸಕ್ತ ಬಾಲಕ ಆಟದಲ್ಲಿ ಮತ್ತೆ ತೊಡಗುತ್ತಾನೆ. ತನ್ನಿಷ್ಟದ ಜ್ಯಾವೆಲಿನ್ ಕೈಗೆತ್ತಿಕೊಳ್ಳುತ್ತಾನೆ. ಶಾಲೆಯ ದೈಹಿಕ ಶಿಕ್ಷಕರ ತರಬೇತಿಯಷ್ಟೇ ಆತನಿಗೆ. ಅಭ್ಯಾಸ ದೈನಂದಿನ ದಿನಚರಿಯಾಗುತ್ತದೆ. 14 ವರ್ಷವಾಗುತ್ತಲೇ ಎಲ್ಲರೂ ತಿರುಗಿ ನೋಡುವ ಸಾಧನೆ ಮಾಡುತ್ತಾನೆ ದೇವೇಂದ್ರ. ಮನೆಯಲ್ಲೆ ಮಾಡಿದ ಜ್ಯಾವೆಲಿನ್ ನಲ್ಲಿ ಅಭ್ಯಾಸ ಮಾಡಿದ್ದ ದೇವೇಂದ್ರ ದೈಹಿಕವಾಗಿ ಪರಿಪೂರ್ಣ ಸಹಸ್ಪರ್ಧಿಗಳನ್ನೆಲ್ಲ ಹಿಂದಿಕ್ಕಿ ಜಿಲ್ಲಾ ಚಾಂಪಿಯನ್ ಆಗುತ್ತಾನೆ.

1997-ದೇವೇಂದ್ರ ಶಾಲೆಯ ಸ್ಕೂಲ್ ಡೇ.ಅಂದಿನ ಅತಿಥಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಆರ್.ಡಿ. ಸಿಂಗ್. ಸ್ಕೂಲ್ ಡೇ ಗಾಗಿ ನಡೆದ ಕ್ರೀಡಾ ಸ್ಪರ್ಧೆಗಳನ್ನು ವೀಕ್ಷಿಸಿದ ಸಿಂಗ್ ದೇವೇಂದ್ರ ಪ್ರತಿಭೆಯನ್ನು ಗುರುತಿಸುತ್ತಾರೆ. ತನ್ನ ಜೊತೆ ಕರೆದೊಯ್ಯುವ ಸಿಂಗ್ ಈತನಿಗೆ ಸೂಕ್ತ ತರಭೇತಿ ನೀಡುತ್ತಾರೆ.ತನ್ನ ದೈಹಿಕ ವಿಕಲತೆಯನ್ನು ಮರೆತ ದೇವೇಂದ್ರ ಜ್ಯಾವೆಲಿನ್ ತ್ರೋನಲ್ಲಿ ಮಿಂಚಲಾರಂಭಿಸುತ್ತಾನೆ.

2002 ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ FESPIC ಗೇಮ್ಸ್ ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಪದಕ ಗೆಲ್ಲುತ್ತಾನೆ.

ತನ್ನ ಸಾಧನೆಗೆ ಎಲ್ಲೆಡೆಯಿಂದಲೂ ಪ್ರಶಂಸೆಗೊಳಪಡುವ ದೇವೇಂದ್ರ ಅಥೆನ್ಸ್ ಪ್ಯಾರಾ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುತ್ತಾನೆ.62.15 ಮೀಟರ್ ದೂರ ಜ್ಯಾವೆಲಿನ್ ಎಸೆದು 59.77.ಮೀಟರ್ ಗಳ ಹಳೆಯ ದಾಖಲೆ ಮುರಿದು ಹೊಸ ವಿಶ್ವ ದಾಖಲೆ ಸ್ಥಾಪಿಸುತ್ತಾನೆ.ಮುರಳೀಕಾಂತ್ ಪೆಟ್ಕರ್ ನಂತರ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಪ್ರಥಮ ಭಾರತೀಯ ದೇವೇಂದ್ರ ಜಾಜರಿಯಾ

ಮತ್ತೊಂದು ಅದ್ಭುತ ಪ್ರದರ್ಶನ ನೀಡುವ ದೇವೇಂದ್ರ ಫ್ರಾನ್ಸ್ ನ ಲಿಯಾನ್‌ನಲ್ಲಿ ನಡೆದ IPC ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ F46 ಜ್ಯಾವೆಲಿನ್ ತ್ರೋದಲ್ಲಿ ಚಿನ್ನ ಗೆಲ್ಲುತ್ತಾರೆ.

2014 ರ ಇಂಚಿಯಾನ್(ದ.ಕೊರಿಯಾ) ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಬೆಳ್ಳಿ ಲಭಿಸುತ್ತದೆ.

2015 ರ ದೋಹಾ IC ಅಥ್ಲೆಟಿಕ್ಸ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಂದು ಚಿನ್ನ ದೇವೇಂದ್ರ ಪಾಲಿಗಾಗುತ್ತದೆ.
ದುಬೈಯಲ್ಲಿ ನಡೆದ IPC ಅಥ್ಲೆಟಿಕ್ಸ್ ಏಷ್ಯಾ-ಓಷಿಯಾನಾ ಚಾಂಪಿಯನ್ ಶಿಪ್ ನಲ್ಲಿ ಚಿನ್ನ.
ದೇವೇಂದ್ರ ಜೀವನದ ಅತ್ಯಂತ ಹೆಮ್ಮೆಯ ಕ್ಷಣ 2016 ರ ರಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಸಂಭವಿಸುತ್ತದೆ. F46 ಜ್ಯಾವೆಲಿನ್ ತ್ರೋದಲ್ಲಿ ಚಿನ್ನ ಗೆದ್ದ ದೇವೇಂದ್ರ ಸತತ ಎರಡು ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಪ್ರಥಮ ಭಾರತೀಯನೆಂಬ ಹಿರಿಮೆಗೆ ಪಾತ್ರರಾಗುತ್ತಾರೆ.
ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ವೃತ್ತಿ ನಿರ್ವಹಿಸುತ್ತಿರುವ ದೇವೇಂದ್ರ ಪತ್ನಿ ಮಂಜು ಕೂಡ ಮಾಜಿ ಕಬಡ್ಡಿ ಆಟಗಾರ್ತಿ.
ದೇವೇಂದ್ರ ಸಾಧನೆಗೆ ಅರ್ಜುನ ಪ್ರಶಸ್ತಿ ಲಭಿಸುತ್ತದೆ. FICCI ವರ್ಷದ ಕ್ರೀಡಾ ತಾರೆ ಮತ್ತು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಕೂಡ ಲಭಿಸುತ್ತದೆ. ಭಾರತ ಸರ್ಕಾರ 2012 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಆ ಗೌರವಕ್ಕೆ ಪಾತ್ರರಾದ ಪ್ರಥಮ ಪ್ಯಾರಾ ಒಲಿಂಪಿಯನ್ ಎನಿಸಿಕೊಳ್ಳುತ್ತಾರೆ.

ದೃಢಸಂಕಲ್ಪಕ್ಕೆ ಯಾವುದೇ ನ್ಯೂನತೆಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ದೇವೇಂದ್ರ ಝಾಝರಿಯಾರೇ ‌ನಿದರ್ಶನ. ಛಲ, ಕಠಿಣ ಪರಿಶ್ರಮ, ಬದ್ಧತೆಗಳೇ ನಮ್ಮನ್ನು ಯಶಸ್ಸಿನೆಡೆಗೆ ಒಯ್ಯುವುವೆಂದು ಮತ್ತೊಮ್ಮೆ ಸಾಬೀತಾಯಿತು. ದೈಹಿಕ ವಿಕಲತೆಯೇ ತಮ್ಮ ಸಾಧನೆಯ ಹಾದಿಗೆ ಅಡ್ಡಿ ಎಂದು ಭಾವಿಸಿರುವವರು ಒಮ್ಮೆ ದೇವೇಂದ್ರ ಝಾಝರಿಯಾ ಜೀವನಗಾಥೆಯತ್ತ ದೃಷ್ಟಿ ಹಾಯಿಸುವುದೊಳಿತು.

– ತೇಜಸ್ವಿ. ಕೆ, ಪೈಲಾರು, ಸುಳ್ಯ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Advertisement
Advertisement

Related posts

ಸಾಧನೆಗೆ ಸ್ಕೈ ಈಸ್ ದ ಲಿಮಿಟ್ ಎನ್ನುವ ಅನುಜ್ ರಾಕ್ಯಾನ್- 42 ತಿಂಗಳಲ್ಲಿ ಬಿಲಿಯನೇರ್‌ ಆದ ಕತೆ

Upayuktha

ಡಾ. ವಂದನಾ ಶಿವ: ರೈತರ ಜೀವ ಹಿಂಡುವ ಬಹುರಾಷ್ಟ್ರೀಯ ಕಂಪನಿಗಳ ಬೆವರಿಳಿಸಿದ ದಿಟ್ಟೆ

Upayuktha

ಕನ್ನಡನಾಡು ಮರೆಯದ ಮಾಣಿಕ್ಯ, ‘ಬಂಗಾರದ ಮನುಷ್ಯ’ ಡಾ. ರಾಜ್‌ಕುಮಾರ್

Upayuktha
error: Copying Content is Prohibited !!