ಕ್ಯಾಂಪಸ್ ಸುದ್ದಿ

ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪಾಠ

ಕೋರೋನ ಮಹಾಮಾರಿಯಿಂದ ಅನಿವಾರ್ಯವಾಗಿ ಲಾಕ್ ಡೌನ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿ ಬಂದಿತು. ಇದರಿಂದ ಶಿಕ್ಷಣ ಕ್ಷೇತ್ರದಲ್ಲೂ ಸಾಂಪ್ರದಾಯಿಕ ತರಗತಿಗಳು ಬಂದ್ ಆಗಿದ್ದು, ಆನ್ಲೈನ್ ಪಾಠ ಪ್ರವಚನಗಳತ್ತ ಶಿಕ್ಷಕರು ವಿದ್ಯಾರ್ಥಿಗಳು ಭಾಗಶಃ ಪಾಠಗಳು ಆನ್ಲೈನ್ ನಲ್ಲಿ ಕೇಳಿದ್ದು ಇದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಗೊಂದಲಮಯ ಪ್ರಭಾವವನ್ನು ಬೀರಿದ್ಡು ಆದರ ಅಂಗವಾಗಿ ಪ್ರಧಾನಿ ಮೋದೀಜಿಯವರು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಈ ಭಾರಿಯ ಪರೀಕ್ಷೆಯ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಜಿಯವರು ಎಪ್ರಿಲ್ 7, 2021 ರಂದು ವಿದ್ಯಾರ್ಥಿಗಳ ಜೊತೆ ಮಾತ್ರವಲ್ಲದೆ ಪೋಷಕರು ಮತ್ತು ಶಿಕ್ಷಕರಿಗೂ ಅವಕಾಶವನ್ನು ನೀಡುವ ಮೂಲಕ ಪರೀಕ್ಷೆಯ ಬಗೆಗಿನ ವಿದ್ಯಾರ್ಥಿ ಗೊಂದಲ ಪರಿಹಾರಕ್ಕಾಗಿ ಈ ಭಾರಿ ವರ್ಚುವಲ್ ಸಂವಾದವನ್ನು ನಡೆಸಿದರು. ಹೇಗೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ದೇಶದ ಒಬ್ಬ ಹಿರಿಯನಾಗಿ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.

ವಿದ್ಯಾರ್ಥಿಗಳಿಗೆ ಧನತ್ಮಾಕ ಪ್ರಭಾವವನ್ನು ನೀಡುವ ಮುಖಾಂತರ ಸಂವಾದವನ್ನು ನಡೆಸಿದ್ದು, ವಿದ್ಯಾರ್ಥಿಗಳ ಗೊಂದಲಮಯ ಪ್ರಶ್ನೆಗಳಿಗೆ ಪರಿಹಾರ ನೀಡಿದರು. ಅದೇ ರೀತಿ ಮೋಧಿಜಿಯವರು ವಿದ್ಯಾರ್ಥಿಗಳಿಂದ ಕೆಲವೊಂದು ಸಲಹೆಗಳನ್ನು ಪಡೆದರು. ಕೊರೊನ ಸಂಕಷ್ಟ ಕಾಲದಲ್ಲಿ ಹೇಗೆ ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ದರಾಗಿರಬೇಕು ಎಂಬ ನಿಟ್ಟಿನಲ್ಲಿ 9ರಿಂದ 12ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ವಿದ್ಯಾರ್ಥಿಗಳ ಭಾವನೆಯನ್ನು ತಿಳಿದುಕೊಳ್ಳುವ ಮೂಲಕ ಹಾಗೂ ಯಾವುದೇ ಒಳ್ಳೆಯ ಕಾರ್ಯವಾಗಲು ಪ್ರಯತ್ನವೆಂಬುದು ಅಧಿಕವಾಗಿದ್ದರೆ ಹಣೆಬರಹವು ಕೂಡಾ ಶಿರಾಬಾಗುತ್ತದೆ. ಎಂಬಂತೆ ತೀರ್ಮಾನ ಸರಿಯಗಿದ್ದರೆ, ಬದುಕು ಸರಿಯಾಗಿರುತ್ತದೆ. ಬದುಕನ್ನು ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿಯೇ ಇದ್ದು ಖಾಲಿ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಮೋದೀಜಿಯವರು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಆಡಿದರು.

ಈ ಸಂವಾದದಲ್ಲಿ ದೇಶದಾದ್ಯಂತ 30 ವಿದ್ಯಾರ್ಥಿಗಳು ಆಯ್ಕೆ ಆಗಿದ್ದು ಅದರಲ್ಲಿ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ ಆಗಿದ್ದರು. ಇದರಲ್ಲಿ ಹೊಸಕೋಟೆ ಮತ್ತು ಉಡುಪಿಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಮೋದಿಜಿಯವರ ಜೊತೆ ಸಂವಾದದಲ್ಲಿ ಭಾಗವಹಿಸಿದ್ದರು.

-ಯಶಸ್ವಿನಿ
ಪ್ರಥಮ ಬಿ ಎ ವಿದ್ಯಾರ್ಥಿ
ವಿವೇಕಾನಂದ ಕಾಲೇಜು ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಜೈವಿಕ ತಂತ್ರಜ್ಞಾನ ಕೇವಲ ಮಾನವ ವಿಕಾಸಕ್ಕೆ ಸೀಮಿತವಲ್ಲ: ಡಾ. ಗಿರೀಶ್

Upayuktha

ವಿಜ್ಞಾನದ ಬೆಳವಣಿಗೆಗೆ ಪ್ರಾಥಮಿಕ ಮಾಹಿತಿ ಅಗತ್ಯ: ಡಾ. ಶ್ರೀಧರ್

Upayuktha

ಸುದೀರ್ಘ ನಿದ್ರೆಯಲ್ಲಿದ್ದ ಭಾರತವನ್ನು ಜಾಗೃತಗೊಳಿಸಿದವರು ಸ್ವಾಮಿ ವಿವೇಕಾನಂದರು: ಸ್ವಾಮಿ ಮಂಗಳನಾಥಾನಂದಜಿ

Upayuktha