ದೇಶ-ವಿದೇಶ

ಪರೀಕ್ಷಾ ಪೆ ಚರ್ಚಾ ನೇರ ಸಂವಾದ ಕಾರ್ಯಕ್ರಮ

ನವದೆಹಲಿ: ಪ್ರಧಾನಿ ಮೋದಿಯವರ ಜನಪ್ರಿಯ ಸಂವಾದ ಕಾರ್ಯಕ್ರಮಗಳಲ್ಲಿ ಪರೀಕ್ಷಾ ಪೆ ಚರ್ಚಾ ಕೂಡಾ ಒಂದಾಗಿದ್ದು, ಪ್ರತಿವರ್ಷ ಮಾರ್ಚ್ ಅಂತ್ಯಕ್ಕೆ ವಾರ್ಷಿಕ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಹೇಗೆ ಸಿದ್ದವಾಗಬೇಕು, ಏನು ಮಾಡಬೇಕು ಎಂದು ಸಲಹೆ ನೀಡುತ್ತಾ ಸಂವಾದ ನಡೆಸುತ್ತಾರೆ.

ಈ ವರ್ಷ ಕೊವಿಡ್ ಕಾರಣದಿಂದ ಸರಿಯಾಗಿ ಶಾಲೆಗಳಲ್ಲಿ ತರಗತಿಗಳು ನಡೆಯದೆ ವಾರ್ಷಿಕ ಪರೀಕ್ಷೆಗಳು ಮುಂದೂಡಿವೆ. ಹೀಗಾಗಿ ಸ್ವಲ್ಪ ತಡವಾಗಿ ಪ್ರಧಾನಿ ಮೋದಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಈ ಬಾರಿ ಪ್ರಧಾನಿ ಮೋದಿಯವರು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ವರ್ಚುವಲ್ ಆಗಿ ನಡೆಸುತ್ತಿದ್ದಾರೆ. ಅವರು ಇಂದು ಸಾಯಂಕಾಲ 7 ಗಂಟೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.

ಇಂದು ಸಾಯಂಕಾಲ 7 ಗಂಟೆಗೆ ದೂರದರ್ಶನ, ಸ್ವಯಂ ಪ್ರಭ ಸೇರಿದಂತೆ 32 ಚಾನೆಲ್ ಗಳು ಮತ್ತು ಸರ್ಕಾರದ ಹಲವು ವೇದಿಕೆಗಳು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿವೆ.

ಪ್ರಧಾನಿಯಾದ ಬಳಿಕ ಪರೀಕ್ಷಾ ಪೆ ಚರ್ಚಾ ಮೋದಿಯವರದ್ದು ನಾಲ್ಕನೇ ಅವತರಣಿಕೆ ಪ್ರಸಾರವಾಗುತ್ತಿದ್ದು, ಪರೀಕ್ಷೆ ಯ ಭಯದಿಂದ ಹೇಗೆ ಹೊರಬರಬೇಕು ಎಂಬ ಕುರಿತು ಮಕ್ಕಳಿಗೆ ಸಲಹೆ, ಸೂಚನೆ ನೀಡಲಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್, ಪ್ರಧಾನ ಮಂತ್ರಿಗಳ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಸುಮಾರು 14 ಲಕ್ಷ ಮಂದಿ ಭಾಗವಹಿಸುತ್ತಿದ್ದಾರೆ.

ಅವರಲ್ಲಿ 10.5 ಲಕ್ಷ ವಿದ್ಯಾರ್ಥಿಗಳು, 26 ಲಕ್ಷ ಶಿಕ್ಷಕರು, 92 ಸಾವಿರ ಪೋಷಕರು ಭಾಗವಹಿಸುತ್ತಿದ್ದು, ಶೇಕಡಾ 60ಕ್ಕಿಂತ ಹೆಚ್ಚಿನ 9 ಮತ್ತು 10ನೇ ತರಗತಿ ಮಕ್ಕಳಿಗೆ ಸೃಜನಶೀಲತೆಯಿಂದ ಬರೆಯುವ ಬಗ್ಗೆ ಸ್ಪರ್ಧೆಯಿರುತ್ತದೆ ಎಂದರು.

 

Related posts

ಬೇಹುಗಾರಿಕೆ: ಇಬ್ಬರು ಪಾಕ್ ಅಧಿಕಾರಿಗಳ ಉಚ್ಚಾಟನೆ, ಇಂದು ಸಂಜೆಯೊಳಗೆ ದೇಶ ಬಿಡಲು ಸೂಚನೆ

Upayuktha

ಬಿಗಿ ಭದ್ರತೆ ನಡುವೆ ಕಾಶ್ಮೀರ ಕಣಿವೆಯಲ್ಲಿ ಶಾಂತಿಯುತ ಬಕ್ರೀದ್

Upayuktha

ಅಮೆರಿಕದಲ್ಲಿ ಕೊರೊನಾ ರುದ್ರನರ್ತನ: ಸಾವಿನ ಸುದ್ದಿಗಾಗಿಯೇ 15 ಮೀಸಲಿಟ್ಟ ‘ಬೋಸ್ಟನ್ ಗ್ಲೋಬ್’ ಪತ್ರಿಕೆ

Upayuktha