ಗ್ರಾಮಾಂತರ ಪ್ರಮುಖ ಸ್ಥಳೀಯ

ಮೊಗ್ರ ಸೇತುವೆ- ಕಮಿಲ ರಸ್ತೆ ಸಮಸ್ಯೆ: ಕಮಿಲ ನಾಗರಿಕರಿಂದ ಪ್ರಧಾನಿಗೆ ವೀಡಿಯೋ ಸಿಡಿ ರವಾನೆ

ಸುಳ್ಯ: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಸಮಸ್ಯೆಯ ವಿಡಿಯೋ ಸಹಿತ ವಿವರಣೆಯ ಸಿಡಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಮಿಲ ಮೊಗ್ರ ಬಳ್ಳಕ್ಕದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಕಮಿಲ ಅಂಚೆ ಕಚೇರಿ ಮೂಲಕ ಮಂಗಳವಾರ ಕಳುಹಿಸಿದ್ದಾರೆ.

ಇಂದು ಆಧುನಿಕ ಮಾಧ್ಯಮಗಳಿದ್ದರೂ ಅಂಚೆ ಕಚೇರಿ ಮೂಲಕವೇ ಸಮಸ್ಯೆಗಳನ್ನು ಹೊತ್ತ ವಿಡಿಯೋ ಸಿಡಿಯನ್ನು ಗ್ರಾಮೀಣ ಭಾಗದ ಅಂಚೆ ಕಚೇರಿ ಮೂಲಕವೇ ರವಾನೆಯ ಉದ್ದೇಶದ ಹಿಂದೆ ಗ್ರಾಮೀಣ ಭಾಗದ ಅಂಚೆ ಕಚೇರಿಯನ್ನು ಸರ್ಕಾರಗಳು ಬಲವರ್ಧನೆ ಮಾಡಬೇಕು ಎಂಬ ಕಾಳಜಿಯೂ ಇದೆ. ಗ್ರಾಮೀಣ ಭಾಗದ ಬಹುಪಾಲು ಮಂದಿ ಅಂಚೆ ಕಚೇರಿ ಬಳಕೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಬ್ಯಾಂಕಿಂಗ್‌ ವ್ಯವಸ್ಥೆ ಕೂಡಾ ಅಂಚೆ ಕಚೇರಿಯೇ ಆಗಿದೆ.

ಹೀಗಾಗಿ ಆಧುನಿಕ ವ್ಯವಸ್ಥೆಗಳು ಇದ್ದರೂ ಗ್ರಾಮೀಣ ಭಾಗದ ಅಂಚೆ ಕಚೇರಿ ಬಳಕೆಯಾಗುವಂತೆ ಮಾಡಲು ಸಾಮೂಹಿಕ ಸಿಡಿ ರವಾನೆಯ ಉದ್ದೇಶವನ್ನು ನಾಗರಿಕ ಹೋರಾಟ ಕ್ರಿಯಾ ಸಮಿತಿ ಹೊಂದಿದೆ. ಗ್ರಾಮೀಣ ಭಾಗದ ಅಂಚೆ ಕಚೇರಿಗಳು ಇಂದಿಗೂ ನೆಟ್ವರ್ಕ್‌ ಸಮಸ್ಯೆಯನ್ನು ಹೊಂದಿವೆ. ಇಂಟರ್ನೆಟ್‌ ಕೈಕೊಟ್ಟರೆ ಕೆಲಸ ಮಾಡಲಾಗದ ಸ್ಥಿತಿ ಇದೆ.

ವಿಡಿಯೋ ಸಿಡಿ ರವಾನೆಯ ಸಂದರ್ಭ ನಾಗರಿಕ ಹೋರಾಟ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಪಿ ಎಸ್‌ ಗಂಗಾಧರ ಭಟ್ ಪುಚ್ಚಪ್ಪಾಡಿ, ಬಿಟ್ಟಿ ಬಿ ನೆಡುನೀಲಂ, ಜೀವನ್‌ ಮಲ್ಕಜೆ, ಲಕ್ಷ್ಮೀಶ ಗಬ್ಲಡ್ಕ, ಮಹೇಶ್‌ ಪುಚ್ಚಪ್ಪಾಡಿ, ಹರ್ಷಿತ್‌ ಕಾಂತಿಲ, ಬಾಬು ಕಮಿಲ, ಸುರೇಶ್‌ ಮೊಗ್ರ, ವಿಶ್ವನಾಥ ಕೇಂಬ್ರೋಳಿ ಮೊದಲಾದವರು ಇದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಐಪಿಎಲ್ 2020: ಪಂಜಾಬ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ರಾಜಸ್ಥಾನ

Upayuktha News Network

ಜ.31ರಿಂದ 3 ದಿನ ಯಕ್ಷಗಾನ ತಾಳಮದ್ದಳೆ ಅಭಿಯಾನ- ಶೇಣಿ ಸ್ಮೃತಿ ಸರಣಿ 2020

Upayuktha

ಮೋದಿ ಜನ್ಮ ದಿನದ ಸೇವಾ ಸಪ್ತಾಹ: ನೀಲಾವರ ಗೋಶಾಲೆಯಲ್ಲಿ ಗೋಪಾಲಕರಿಗೆ ಸಂಮಾನ

Upayuktha

Leave a Comment