ಮಂಗಳೂರು: ಸುಮಾರು 55 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಿಭಿನ್ನ ಕಲಾ ನೈಪುಣ್ಯತೆಯನ್ನು ಮೆರೆಸಿದ ತೆಂಕು ತಿಟ್ಟಿನ ಹೆಸರಾಂತ ಕಲಾವಿದರಾದ ಸಂಪಾಜೆ ಶೀನಪ್ಪ ರೈಯವರಿಗೆ ಪಟ್ಲ ಫೌಂಡೇಶನ್ ವತಿಯಿಂದ 25,000 ರೂ ಆರ್ಥಿಕ ಸಹಾಯ ನೀಡಲಾಯಿತು.
ಕಾಲಿನ ಗ್ಯಾಂಗ್ರಿನ್ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೊಳಗಾಗಿ ಕಾಲಿನ ಹೆಬ್ಬೆರಳು ಕತ್ತರಿಸಲ್ಪಟ್ಟು ಮಾನಸಿಕವಾಗಿ ಕುಗ್ಗಿ ಖಿನ್ನತೆಗೊಳಗಾಗಿದ್ದರು. ಈ ವಿಚಾರವನ್ನು ಫೌಂಡೇಶನ್ನ ಸುರತ್ಕಲ್ ಘಟಕದ ಮಾಧವ ಎಸ್ ಶೆಟ್ಟಿ ಬಾಳ ಇವರು ಈ ವಿಷಯವನ್ನು ಕೇಂದ್ರೀಯ ಸಮಿತಿಯ ಗಮನಕ್ಕೆ ತಂದಾಗ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಕೂಡಲೇ ಸ್ಪಂದಿಸಿದರು.
ಕೇಂದ್ರೀಯ ಸಮಿತಿಯ ಪದಾಧಿಕಾರಿಗಳೊಂದಿಗೆ ಸಂಪಾಜೆ ಶೀನಪ್ಪ ರೈಯವರ ಮನೆಗೆ ತೆರಳಿ ಮಾನಸಿಕವಾಗಿ ನೊಂದಿರುವ ಅವರಿಗೆ ಧೈರ್ಯದ ಮಾತುಗಳನ್ನಾಡಿ, ಮನಸ್ಸಿಗೆ ಆತ್ಮವಿಶ್ವಾಸವನ್ನು ತುಂಬಿ ಟ್ರಸ್ಟ್ ವತಿಯಿಂದ ರೂ 25000/- ಆರ್ಥಿಕ ಸಹಾಯದೊಂದಿಗೆ ಪೇಟ ತೊಡಿಸಿ, ಶಾಲು ಹೊದಿಸಿ ಫಲವಸ್ತುವನ್ನಿಟ್ಟು ಗೌರವಿಸಿದರು.
ಈ ಸಂದರ್ಭದಲ್ಲಿ ಫೌಂಡೇಶನಿನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಹವ್ಯಾಸಿ ಘಟಕದ ಮಧುಕರ್ ಭಾಗವತ್, ಮಂಗಳೂರು ಘಟಕದ ರವಿ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಉಲ್ಲಾಸ್ ಶೆಟ್ಟಿ, ಸುರತ್ಕಲ್ ಘಟಕದ ಮಾಧವ ಎಸ್ ಶೆಟ್ಟಿ ಬಾಳ ಕಾಟಿಪಳ್ಳ ಹಾಗೂ ಮುಂಬಯಿ ಉದ್ಯಮಿ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ