ಕಲೆ ಸಂಸ್ಕೃತಿ ಲೇಖನಗಳು

ಪಾವಂಜೆ ಮೇಳ: ಹೀಗೊಂದು ಜಿಜ್ಞಾಸೆ

▶️ ಮೇಳ ಘೋಷಣೆಯಾಗಿ ಹೆಚ್ಚುಕಡಿಮೆ ಒಂದು ತಿಂಗಳಲ್ಲಿ ಅನನ್ಯವಾಗಿ ರೂಪುಗೊಂಡ ವಿಸ್ಮಯ ಪಾವಂಜೆ ಮೇಳ. ಯಕ್ಷಗಾನ ಚರಿತ್ರೆಯಲ್ಲಿ ಇದೊಂದು ಐತಿಹಾಸಿಕ ದಾಖಲೆ.

🙏🏻 ಪಿಎಫ್, ಆರೋಗ್ಯ ವಿಮೆಯೊಂದಿಗೆ ಉತ್ತಮ ಸಂಬಳ ಸೌಕರ್ಯಗಳಿಂದ ಯಕ್ಷಗಾನ ಕಲಾವಿದರ ಬಾಳು ಬೆಳಗುವ ಈ ಪ್ರಯತ್ನಕ್ಕೆ ನಮನ.

▶️ ಪಾವಂಜೆಯಂಥ ಪವಿತ್ರ ಕ್ಷೇತ್ರದ ಸುಬ್ರಹ್ಮಣ್ಯನ ಉತ್ಸವ ಮೂರ್ತಿಯೇ ಭಕ್ತರ ಮನೆಯಂಗಳದ ಪಾವಿತ್ರ್ಯವನ್ನು (ಜಾತಿ ಭೇದವಿಲ್ಲದೆ ಯಕ್ಷಗಾನ ಆಡಿಸುವ ಎಲ್ಲ ಭಕ್ತರ ಮನೆಯನ್ನು) ಪಾವನಗೊಳಿಸುವುದು ಪ್ರಾಯಶಃ ಯಕ್ಷಗಾನದ ಇತಿಹಾಸದಲ್ಲೇ ಅಪೂರ್ವ ಬೆಳವಣಿಗೆ.

🙏🏻ಇದಕ್ಕಿಂತ ದೊಡ್ಡ ಸೌಭಾಗ್ಯ, ನಾಗ ಬ್ರಹ್ಮನ ಆರಾಧಕರಾದ ತುಳುನಾಡಿನ ಭಕ್ತಕೋಟಿಗೆ ಇನ್ನೇನಿದೆ? ನಾಗನ ನಂಬುವ ಭಕ್ತನ‌ ಮನೆಗೆ ಸುಬ್ರಹ್ಮಣ್ಯನ ಉತ್ಸವ ಮೂರ್ತಿ ಬಂದ ಮೇಲೆ ದೋಷ ರಾಶಿಗಳೂ ಲೇಶವೂ ಉಳಿಯದಂತೆ ಮಾಯವಾಗುವುದೆನ್ನುವುದು ಭಕ್ತರ ನಂಬಿಕೆ.

▶️ ಮೇಳ ಆರಂಭಗೊಂಡ ಒಂದೇ ತಿಂಗಳಲ್ಲಿ ಈ ವರ್ಷದ ಎಲ್ಲ ಯಕ್ಷಗಾನ ದಿನಗಳಲ್ಲೂ (ಆರು ತಿಂಗಳು) ಮುಂಗಡದಲ್ಲೇ ಯಕ್ಷಗಾನ ಬುಕಿಂಗ್ ಆಗಿದ್ದು ನೂತನ ಮೈಲಿಗಲ್ಲು.

🙏🏻 ಈ ಯಶಸ್ಸು ಶ್ರೀ ದೇವರು, ಆಟ ಆಡಿಸುವ ಭಕ್ತರು, ಕ್ಷೇತ್ರದ ಗುರುಗಳು,ಆಡಳಿತ ಮಂಡಳಿ, ಮತ್ತು ಮೇಳದ ರೂವಾರಿ ಪಟ್ಲ ಸತೀಶ್ ಶೆಟ್ಟರಿಗೆ ಸಲ್ಲುತ್ತದೆ ಅಂದರೆ ಅತಿಶಯೋಕ್ತಿ ಅಲ್ಲ.

▶️ ₹ 50 ಸಾವಿರದಲ್ಲಿ ಇಷ್ಟೊಂದು ಸುಸಜ್ಜಿತ, ಇಷ್ಟೊಂದು ಗುಣಮಟ್ಟದ ಕಲಾವಿದರಿಂದ ಕೂಡಿದ ಮೇಳದ ಯಕ್ಷಗಾನ ಆಡಿಸುವ ಅವಕಾಶ ಭಕ್ತರ ಪಾಲಿಗೆ ಲಭ್ಯವಾಗಿರುವುದು ವಿಶೇಷ.

▶️ ಭಕ್ತರು ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವುದಕ್ಕೆ ಎಲ್ಲ ಯಕ್ಷಗಾನ ದಿನಗಳಲ್ಲಿ ಇಷ್ಟು ಶೀಘ್ರವಾಗಿ ಬುಕಿಂಗ್ ಮುಗಿದಿರುವುದೇ ಸಾಕ್ಷಿ.

▶️ ಕೊರೊನಾದಂಥ ಸಂಕಷ್ಟದ ಕಾಲದಲ್ಲೂ ಮೇಳಕ್ಕೆ ದೊರೆತ ಅದ್ದೂರಿ ಚಾಲನೆ, ಅದಕ್ಕೆ ಸಿಕ್ಕಿದ ಜನ ಮನ್ಜಣೆ, ಜನಸ್ಪಂದನೆ, ಅಲ್ಲಿ ಸೇರಿದ್ದ ಜನಸಾಗರ, ಇದೆಲ್ಲವೂ ಯಕ್ಷಲೋಕದ ಇತಿಹಾಸದಲ್ಲಿ ನೂತನ ಶಕೆಯೊಂದರ ಬಾಗಿಲು ತೆರೆದಂತಿತ್ತು.

🙏🏻 ತಾಯಿ ದುರ್ಗೆಯ ಮಡಿಲಿನಲ್ಲಿ ಆದ ನೋವನ್ನು, ಸುಬ್ರಹ್ಮಣ್ಯ ಗುಣಪಡಿಸುವುದೆಂದರೆ ಇದೇ ಇರಬಹುದೇ? ಕಾಲವೇ ಹೇಳಬೇಕು.

▶️ ಹಲವು ದಶಕಗಳ ಹಿಂದೆ ಜನಪ್ರಿಯವಾಗಿದ್ದ ಪಾವಂಜೆ ಮಹಾಲಿಂಗೇಶ್ವರ ಮೇಳ ಆಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದಾಗ, ಮೇಳದ ಬೆಳ್ಳಿ ಕಿರೀಟವನ್ನು ಆಗ ಆರಂಭವಾಗಿದ್ದ ಕಟೀಲು 1 ನೇ ಮೇಳಕ್ಕೆ ನೀಡಲಾಗಿತ್ತು ಎಂಬ ಪ್ರತೀತಿ ಇದೆ. ಅಂದರೆ ಅದು ಶಿವನ ಕ್ಷೇತ್ರದಿಂದ ದೇವಿಯ ಕ್ಷೇತ್ರಕ್ಕೆ ಬೆಳ್ಳಿ ಕಿರೀಟದ ಪಯಣ. ಈಗ ಸುಬ್ರಹ್ಮಣ್ಯನ ಪಾವಂಜೆ ಮೇಳ ಆರಂಭವಾಗಿರುವುದು ದೈವಸಂಕಲ್ಪವೇ ಇರಬಹುದು.

🙏🏻 ಪಾವಂಜೆ ಕ್ಷೇತ್ರ ಹಾಗೂ ಕಟೀಲು ಕ್ಷೇತ್ರದ ಯಕ್ಷಗಾನ ಪರಂಪರೆಯ ಕೊಂಡಿ ಮತ್ತೊಂದು ಸುತ್ತಿಗೆ ಹೊರಳಿರುವ ಮುನ್ಸೂಚನೆ ಇರಬಹುದೇ? ಶ್ರೀ ಪರಮೇಶ್ವರ, ತಾಯಿ ಭ್ರಮರಾಂಭೆ, ಶ್ರೀ ಸುಬ್ರಹ್ಮಣ್ಯ ಭಕ್ತರೇ ಕಂಡುಕೊಳ್ಳಬೇಕು.

▶️ ತುಳುನಾಡು ನಾಗಬ್ರಹ್ಮನ ಪುಣ್ಯ ನಾಡು. ಇಲ್ಲಿ ಅಗ್ರಸ್ಥಾನ ಏನಿದ್ದರೂ ಈ ದೇವರಿಗೇ ಸಲ್ಲಬೇಕು. ಕಾಲ ಪ್ರವಾಹದ ನಡುವೆ ಈ ಸಂಕಷ್ಟದ ಕಾಲಘಟ್ಟದಲ್ಲಿ ನಮ್ಮ ನೆಲದ ದೇವರು ಸುಬ್ರಹ್ಮಣ್ಯನ ಮೇಳದ ಮೂಲಕ ದೇವರು ಭಕ್ತರ ಮನೆ ಮನೆಗೆ ಹೊರಟಿರುವುದು ಶುಭ ಬೆಳವಣಿಗೆಯೇ ಆಗಿದೆ. ಬಹುಶಃ ಯಕ್ಷಗಾನದ ಆಡುಂಬೊಲವಾದ ತುಳು ನಾಡಲ್ಲಿ ಎಲ್ಲವೂ ಒಳಿತಾಗುವ ಸೂಚನೆ ಇದಿರಬಹುದು.

– ರಾಕೇಶ್ ಪೂಂಜ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕೋವಿಡ್-19 ರೋಗದ ಬದಲಾದ ಲಕ್ಷಣಗಳು

Upayuktha

ಗಣಾನಾಂ ತ್ವಾ ಗಣಪತಿಗ್‌ಂ ಹವಾಮಹೇ…: ಸಾರ್ವಕಾಲಿಕ ಆದಿಪೂಜಿತ ಗಣಪತಿ

Upayuktha

ವಿಶ್ವ ಚಿತ್ತ ವಿಕಲತೆ ದಿನ (ವಿಶ್ವ ಸ್ಕಿಜೋಫ್ರಿನಿಯಾ ದಿನ) – ಮೇ 24

Upayuktha