ಹರಿದ್ವಾರ: ಯೋಗಗುರು ಬಾಬಾ ರಾಮ್ ದೇವ್ ಸಾರಥ್ಯದ ಹರಿದ್ವಾರದ ಜಗತ್ಪಸಿದ್ಧ ಪತಂಜಲಿ ಯೋಗ ಪೀಠಕ್ಕೆ ಸೋಮವಾರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು.
ಪತಂಜಲಿ ಆಯುರ್ವೇದ ಆಸ್ಪತ್ರೆ, ಆಯುರ್ವೇದ ವನ, ಪತಂಜಲಿ ಪೀಠದ ಉತ್ಮನ್ನಗಳ ಮಳಿಗೆ, ಮೊದಲಾದ ಎಲ್ಲ ವಿಭಾಗಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಅತೀವ ಸಂತಸ ವ್ಯಕ್ತ ಪಡಿಸಿದರು.
ಬಳಿಕ ರಾಮ್ ದೇವ್ ಬಾಬಾ ಹಾಗೂ ಆಚಾರ್ಯ ಬಾಲಕೃಷ್ಣರು ಶ್ರೀಗಳನ್ನು ಗೌರವಿಸಿದರು. ಶ್ರಿಗಳವರೂ ರಾಮ್ ದೇವ್ ಅವರನ್ನು ಗೌರವಿಸಿದರು. ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ರಾಮ್ ದೇವ್ ಜೀಯವರು ವಿಶೇಷವಾಗಿ ಸ್ಮರಿಸಿದರು.
ಡಾ ಲಲಿತ್ ಮೋಹನ್ ಮಿಶ್ರಾರವರು ಪತಂಜಲಿ ಯೋಗ ಪೀಠದ ಎಲ್ಲ ವಿಭಾಗಗಳನ್ನು ಶ್ರೀಗಳಿಗೆ ಪರಿಚಯಿಸಿದರು. ಶ್ರೀಗಳವರ ಶಿಷ್ಯರು, ಆಪ್ತ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ