ಕ್ಷೇತ್ರಗಳ ವಿಶೇಷ ನಗರ ಸ್ಥಳೀಯ

ನೀಲಾವರ ಗೋಶಾಲೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಚಾತುರ್ಮಾಸ್ಯ ವ್ರತ ಸಂಕಲ್ಪ

ಉಡುಪಿ: ಶ್ರೀ ಪೇಜಾವರ ಮಠಾಧೀಶರೂ ಅಯೋಧ್ಯೆ ರಾಮಮಂದಿರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಡುಪಿ ಸಮೀಪದಲ್ಲಿ ಸ್ವಯಂ ನಡೆಸುತ್ತಿರುವ ಹಾಗೂ ತಮ್ಮ ಅತ್ಯಂತ ಪ್ರೀತಿಯ ತಾಣವಾಗಿರುವ ನೀಲಾವರ ಗೋಶಾಲೆಯ ಆವರಣದಲ್ಲಿರುವ ಶ್ರೀಮಠದ ಶಾಖಾ ಮಠದಲ್ಲಿ ಭಾನುವಾರ ತಮ್ಮ ಚಾತುರ್ಮಾಸ್ಯ ವ್ರತ ಸಂಕಲ್ಪ ಸ್ವೀಕರಿಸಿದರು.

ನೀಲಾವರದಲ್ಲಿ ಮೊದಲ ಚಾತುರ್ಮಾಸ್ಯ; ಅನೇಕ ವಿಶೇಷತೆಗಳು:

ಹದಿನೈದು ವರ್ಷಗಳ ಹಿಂದೆ ನಿರ್ಮಾಣವಾಗಿ ಇಂದು‌ ಸುಮಾರು 1500 ಕ್ಕೂ ಅಧಿಕ ಗೋವುಗಳ ಆಶ್ರಯ ತಾಣವಾಗಿ ಪುಣ್ಯಕೋಟಿಯ ಪುಣ್ಯ ನೆಲೆಯಾಗಿರುವ ನೀಲಾವರ ಗೋಶಾಲೆಯಲ್ಲಿ ಶ್ರೀಗಳು ನಡೆಸುತ್ತಿರುವ ಪ್ರಥಮ ಚಾತುರ್ಮಾಸ್ಯ ವ್ರತ ಇದಾಗಿದೆ.

ಅಲ್ಲದೇ ಗುರು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಗಲಿದ ನಂತರ ಪೇಜಾವರ ಮಠಾ ಉತ್ತರಾಧಿಕಾರಿಯಾಗಿ ಶ್ರೀಗಳು ನಡೆಸಿತ್ತಿರುವ ಪ್ರಥಮ ಚಾತುರ್ಮಾಸ್ಯ ವ್ರತವೂ ಹೌದು.

ಇನ್ನೊಂದು ವಿಶೇಷವೆಂದರೆ ಸಾಮಾನ್ಯವಾಗಿ ಸೋದೆ ಶ್ರೀಗಳು ಶಿರಸಿಯ ಸೋಂದಾ ಕ್ಷೇತ್ರ ಮತ್ತು ತೀರಾ ವಿರಳವೆಂಬಂತೆ ಒಂದು ಬಾರಿ ಪಲಿಮಾರು ಶ್ರೀಗಳು ಕೋಟೇಶ್ವರದಲ್ಲಿ ಚಾತುರ್ಮಾಸ್ಯ ವ್ರತ ನಡೆಸಿದ್ದು ಬಿಟ್ಟರೆ ಉಡುಪಿಯ ಅಷ್ಟ ಮಠದ ಯತಿಗಳು ಉಡುಪಿಯ ಉತ್ತರ ಭಾಗದಲ್ಲಿ ಅದೂ ಕುಂದಾಪುರ ಬ್ರಹ್ಮಾವರದ ಆಸುಪಾಸಿನಲ್ಲಿ ಚಾತುರ್ಮಾಸ್ಯ ನಡೆಸುತ್ತಿರುವುದೂ ಅಪರೂಪ. ಆ ಹಿನ್ನೆಲೆಯಲ್ಲೂ ಶ್ರೀಗಳ ಈ ಬಾರಿಯ ಚಾತುರ್ಮಾಸ್ಯ ವ್ರತ ಮಹತ್ವ ಪಡೆಯುತ್ತಿದೆ.

ಈಗ ಅಯೋಧ್ಯೆ ರಾಮಮಂದಿರದ ವಿಶ್ವಸ್ಥ ಮಂಡಳಿಯ ಸದಸ್ಯರೂ ಅಗಿರುವುದರಿಂದ ಶ್ರೀಮಠದ ಆರಾಧ್ಯಮೂರ್ತಿ ಶ್ರೀ ರಾಮ ವಿಠಲ ದೇವರೊಂದಿಗೆ ನೀಲಾವರದಂತಹ ಗ್ರಾಮೀಣ ಭಾಗದಲ್ಲಿ ಚಾತುರ್ಮಾಸ್ಯ ನಡೆಸುತ್ತಿರುವುದು ಆ ಭಾಗದ ಜನತೆಗೆ ಒಂದು ವಿಶೇಷ ಸಂದರ್ಭವೂ ಆಗುತ್ತಿದೆ .

ಗೋಶಾಲೆಯಲ್ಲಿ ಶ್ರೀಗಳೇ ಸುಂದರವಾದ ಪುಷ್ಕರಿಣಿಯನ್ನು ನಿರ್ಮಿಸಿ ಅದರ ನಡುವೆ ಕಾಲೀಯ‌ಕೃಷ್ಣನ ಸುಂದರ ಗುಡಿ ನಿರ್ಮಾಣ ಮಾಡಿರುವುದರಿಂದ ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನೂ ಶ್ರೀಗಳ ಅಲ್ಲೇ ನಡೆಸುತ್ತಿರುವುದೂ ಆ ಭಾಗದ ಜನತೆಗೆ ಸ್ಮರಣೀಯವೆನಿಸಲಿದೆ.

ಶ್ರೀಗಳಿಗೆ ಗುರುಪೂರ್ಣಿಮೆ ಗೌರವ ಸಮರ್ಪಿಸಿದ ಸಂಸದೆ


ನೀಲಾವರ ಗೋಶಾಲೆಯಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಪೇಜಾವರ ಶ್ರೀ‌ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಸೋಮವಾರದಂದು ಸಂಸದೆ ಶೋಭಾ ಕರಂದ್ಲಾಜೆ ಭೇಟಿಯಾಗಿ ಗುರು ಪೂರ್ಣಿಮೆಯ ಗೌರವ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಕುಂದರ್ ಕೂಡಾ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಜಿ ಪಂ ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.

– ಜಿ ವಾಸುದೇವ ಭಟ್ ಪೆರಂಪಳ್ಳಿ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಬ್ರಹ್ಮಾವರ ಮಿನಿ ವಿಧಾನಸೌಧಕ್ಕೆ ಸಚಿವ ಆರ್. ಅಶೋಕ್ ಶಿಲಾನ್ಯಾಸ

Upayuktha

ಪ್ರಣಬ್ ಮುಖರ್ಜಿ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆ ಸಂತಾಪ

Upayuktha

ಕೊಳಂಬೆ ಗ್ರಾಮ: 11 ಲಕ್ಷ ಅನುದಾನದಲ್ಲಿ ಸೌಹಾರ್ದ ನಗರ ರಸ್ತೆಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಗುದ್ದಲಿಪೂಜೆ

Upayuktha