ಕ್ಷೇತ್ರಗಳ ವಿಶೇಷ ರಾಜ್ಯ

ಮಂತ್ರಾಲಯ: ಪೇಜಾವರ ಶ್ರೀಗಳಿಂದ ತುಂಗಭದ್ರಾ ಪುಷ್ಕರ ಸ್ನಾನ

ಮಂತ್ರಾಲಯ: ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಂತ್ರಾಲಯದಲ್ಲಿ ಶನಿವಾರ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಮತ್ತು ತಮ್ಮ ಶಿಷ್ಯರೊಂದಿಗೆ ಹನ್ನೆರಡು ವರ್ಷಗಳಿಗೊಮ್ಮೆ ಬರುವ ಪವಿತ್ರ ತುಂಗಭದ್ರಾ ಪುಷ್ಕರ ಸ್ನಾನಗೈದರು. ಬಳಿಕ ಗುರುರಾಯರ ದರ್ಶನಪಡೆದು ಕೆಲಹೊತ್ತು ರಾಯರ ಸನ್ನಿಧಿಯ ಮುಂಭಾಗ ವಿದ್ಯಾರ್ಥಿಗಳಿಗೆ ಶ್ರೀ ಮನ್ನ್ಯಾಯ ಸುಧಾ ಪಾಠ ಮಾಡಿದರು.

ಅಯೋಧ್ಯೆಯ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಗುರುರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದರು, ಶ್ರೀಗಳವರನ್ನು ಭೇಟಿ ಮಾಡಿದರು. ‌ಶ್ರೀಗಳವರನ್ನು ಶ್ರೀ ಮಠದ ಸಾಂಪ್ರದಾಯಿಕ ಗೌರವಗಳೊಂದಿಗೆ ಬರಮಾಡಿಕೊಂಡ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಮಠದ ಗೌರವವನ್ನು ಸಲ್ಲಿಸಿ ರಾಮಮಂದಿರ ನಿರ್ಮಾಣ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಜಗ್ಗಣ್ಣನಿಗೆ ತಲೆ ಬಾಗಿದ ದಚ್ಚು: ಇನ್ನೆಂದು ಇಂಥ ದಿನ ಬರದಿರಲಿ ಎಂದು ಕೇಳಿಕೊಂಡ ನವರಸ ನಾಯಕ

Sushmitha Jain

ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ನಿಧನ

Harshitha Harish

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

Upayuktha