ದೇಶ-ವಿದೇಶ

ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿಜಿ ದರಗಳು ಮತ್ತಷ್ಟು ಇಳಿಕೆ

ನವದೆಹಲಿ : ವಾಹನ ಸವಾರರಿಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಗುಡ್ ನ್ಯೂಸ್ ಯೊಂದನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿಜಿ ದರಗಳು ಇಳಿಕೆಯಾಗಲಿದೆ ಎಂದು ಸುಳಿವು ನೀಡಿದ್ದಾರೆ.

‘ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿಜಿ ಇದೀಗ ದರವು ಇಳಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ದರವು ಮತ್ತಷ್ಟು ಇಳಿಕೆಯಾಲಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದ ಬಳಿಕ ದೊರೆಯುವ ಲಾಭವನ್ನು ಅಂತಿಮ ಗ್ರಾಹಕರಿಗೆ ವರ್ಗಾಯಿಸುತ್ತೇವೆಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಭಾರತದಲ್ಲಿ ಈ ಹಿಂದೆಯೂ ಚಿಲ್ಲರೆ ಇಂಧನ ದರಗಳು ಅಂತಾರಾಷ್ಟ್ರೀಯ ದರಗಳಲ್ಲಿ ನಿಯಂತ್ರಿಸಲ್ಪಡುತ್ತವೆ ಎಂದು ಪ್ರಧಾನ್ ಪುನರುಚ್ಚರಿಸಿದ್ದರು, ಏಕೆಂದರೆ ದೇಶವು ತನ್ನ ಅಗತ್ಯಕ್ಕೆ ತಕ್ಕಂತೆ ಕಚ್ಚಾ ತೈಲ ಆಮದು ಗಳನ್ನು ಅವಲಂಬಿಸಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀ ಗೆ 90.56 ರೂ., ಡೀಸೆಲ್ ಬೆಲೆ 80.87 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀ ಗೆ 96.98 ರೂ., ಡೀಸೆಲ್ ಬೆಲೆ 87.96 ರೂ.

Related posts

ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೋವಿಡ್ ಪಾಸಿಟಿವ್

Harshitha Harish

ಅಕ್ಷಯ್​.ಬಚ್ಚನ್ ಅಲ್ಲ ಅವರು ಮಾಡುವ ಕೆಲಸಗಳಿಗೆ ವಿರುದ್ಧವಿದೆ: ಪಟೋಲೆ

Sushmitha Jain

ಏನಿದು ಫ್ಯಾಶನ್ ಗೋಲ್ಡ್ ಜುವೆಲ್ಲರಿ ಹಗರಣ? ಮಂಜೇಶ್ವರ ಶಾಸಕ ಕಮರುದ್ದೀನ್‌ಗೆ ಉರುಳಾಗಿದ್ದು ಹೇಗೆ?

Upayuktha News Network