ದೇಶ-ವಿದೇಶ

ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ನವದೆಹಲಿ: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದ್ದು ದೆಹಲಿಯಲ್ಲಿ ಲೀಟರ್‌ಗೆ 17 ಪೈಸೆಯಂತೆ 81.23 ರೂಪಾಯಿಗೆ ಏರಿಕೆ ಮಾಡಿದೆ. ಡೀಸೆಲ್ ದರವೂ ಲೀಟರ್‌ಗೆ 22 ಪೈಸೆ ಏರಿಕೆಯಾಗಿದ್ದು, 70.68 ರೂಪಾಯಿ ಆಗಿದೆ.

ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನವೆಂಬರ್ 20 ರಂದು ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ತಿಂಗಳ ನಂತರ ಹೆಚ್ಚಿಸಿವೆ. ಒಎಂಸಿಗಳು ನಾಲ್ಕು ಮಹಾನಗರಗಳಲ್ಲಿ ಇಂಧನ ದರವನ್ನು ಸ್ವಲ್ಪ ಹೆಚ್ಚಿಸಿವೆ.

ದೆಹಲಿ, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 17 ರಿಂದ 20 ಪೈಸೆ ಹೆಚ್ಚಳ ಮಾಡಲಾಗಿದ್ದು, ಭಾರತೀಯ ತೈಲ ನಿಗಮದ ಅಧಿಸೂಚನೆಯ ಪ್ರಕಾರ ಡೀಸೆಲ್ ಪ್ರತಿ ಲೀಟರ್‌ಗೆ 22 ರಿಂದ 25 ಪೈಸೆ ಹೆಚ್ಚಳ ಮಾಡಲಾಗಿದೆ.

Related posts

ಜಮ್ಮು-ಕಾಶ್ಮೀರ: ಪುಲ್ವಾಮಾ ಮಾದರಿ ದಾಳಿ ವಿಫಲಗೊಳಿಸಿದ ಭದ್ರತಾ ಪಡೆಗಳು

Upayuktha

ಅಭಿನಂದನ್ ವರ್ಧಮಾನ್‌ಗೆ ಕೀರ್ತಿಚಕ್ರ ಪುರಸ್ಕಾರ

Upayuktha

ಅಂಡಮಾನ್ ಸಮುದ್ರದಲ್ಲಿ ಅಡ್ಡಾಡುತ್ತಿದ್ದ ಚೀನೀ ಹಡಗನ್ನು ಹಿಮ್ಮೆಟ್ಟಿಸಿದ ಭಾರತೀಯ ನೌಕಾಪಡೆ

Upayuktha