ಕತೆ-ಕವನಗಳು

ಚಿತ್ರ ಕವನ: ಕುಸುಮ ನವಿಲು


ಅಂದು ನೆಟ್ಟ ಗಿಡದ ತುಂಬ
ಇಂದು ಹೂವು ರಾಶಿಯರಳಿ
ಚಂದದಿಂದ ನಗೆಯ ಬೀರಿ ಮನವ
ಸೆಳೆಯಿತು |
ಕಂದು ಬಣ್ಣ ಹುಡುಕಿ ನೋಡು
ಸಂದಿನಲ್ಲಿ ಸಿಗಲು ಬಹುದು
ಸುಂದರಾಂಗ ಹೂವ ನವಿಲ ಚೆಲುವ
ನೋಟವು || ‌ || ೧ ||

ನೋಡಿ ಲಿಲ್ಲಿ ಬಿಳಿಯ ಮೊಲ್ಲೆ
ಕೂಡೆ ಬಿರಿದ ದಾಸವಾಳ
ನಾಡೆ ಮೆಚ್ಚಿಕೊಂಡ ನೀಲ ಶಂಖ-
ಪುಷ್ಪವು |
ಕಾಡಿನಲ್ಲಿ ಕಂಡುಬರುವ
ತೀಡಿ ತಿದ್ದಿದಂತೆ ಹೊಳೆವ
ಕೇಡ ಕಳೆದ ಹಸಿರುಸೊಪ್ಪ ಚೆಲುವ
ಕಾಣಿಕೆ ||  ‌ || ೨ ||

ಹೂವನವಿಲು ಬಳುಕಿ ಬರುವ
ಭಾವ ಭಂಗಿ ಮನಕೆ ಮುದವ
ತೀವಿ ನಮ್ಮ ಕಷ್ಟವನ್ನು ಮರೆಸಿ ಬಿಡುವುದು|
ದೇವರಾಟವನ್ನು ನೋಡಿ
ಕಾವನವನು ಸಕಲರಸುವ
ನೋವ ನೀಗಿ ಬದುಕ ಹಸನು ಗೊಳಿಸಿ
ಪೊರೆವನು ||  || ೩ ||

ಹಲವು ಬಣ್ಣ ನವಿಲ ಕಣ್ಣ
ಒಲವಿನಿಂದ ನೋಡಿ ನಾವು
ನಲವಿನಲ್ಲಿ ಮನದ ತುಂಬ ಸೊಗವ
ಪಡೆಯುವ |
ನೆಲಕೆ ಬಂದ ಸಗ್ಗವಕ್ಕಿ
ತಲೆಯ ಮೇಲೆ ಶಿಖೆಯ ಧರಿಸಿ
ಗೆಲವ ನೋಟ ಬೀರಿ ನಮ್ಮ ಬಗೆಯ
ಸೆಳೆದಿದೆ ||  ‌‌ || ೪ ||

ಇಂದು ನಮ್ಮ ಮನೆಯ ಬಳಿಗೆ
ಬಂದು ನವಿಲು ಕುಣಿವ ನೋಟ
ಚಂದದಿಂದ ಜನರ ಬದುಕ ಹಸನು –
ಗೊಳಿಸಿದೆ |
ಮುಂದೆ ನವಿಲು ಪಕ್ಷಿ ಕುಲವು
ಕುಂದುಕೊರತೆ ಕಳೆದುಕೊಂಡು
ಬಂಧುಬಳಗದಂತೆ ನಮ್ಮ ಜತೆಗೆ ಬಾಳಲಿ || || ೫ ||

(ಮೇಲಿನ ಚಿತ್ರಕ್ಕೊಂದು ಕಿರಿಯರ ಕವನ)
ಛಂದಸ್ಸು:- ಭೋಗ ಷಟ್ಪದಿ
ರಚನೆ:-  ವಿ.ಬಿ.ಕುಳಮರ್ವ, ಕುಂಬ್ಳೆ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕನಸು

Harshitha Harish

ಕವಿತೆ: ಸಿರಿಗನ್ನಡದ ಕಾಸರಗೋಡು

Upayuktha

ಕವಿತೆ: ಒತ್ತಾಸೆ

Upayuktha

Leave a Comment