ದೇಶ-ವಿದೇಶ ಪ್ರಮುಖ

ಪಿಯೂಶ್ ಗೋಯಲ್ ಗೆ ಹೆಚ್ಚುವರಿ ಖಾತೆ ಜವಾಬ್ದಾರಿ ವಹಿಸಿದ ಕೇಂದ್ರ ಸರ್ಕಾರ

ಹೊಸದಿಲ್ಲಿ: ದೇಶದ ರೈಲ್ವೆ ಖಾತೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಕೇಂದ್ರ ಸರ್ಕಾರವು ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿದೆ.

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿರುವ ಕಾರಣದಿಂದ ಕೇಂದ್ರ ಆಹಾರ ಹಾಗೂ ಪಡಿತರ ಸರಬರಾಜು ಖಾತೆಯನ್ನು ಹೆಚ್ಚುವರಿಯಾಗಿ ಪಿಯೂಶ್ ಗೋಯಲ್ ರವರಿಗೆ ನೀಡಲಾಗಿದೆ.

ಪ್ರಧಾನಮಂತ್ರಿ ಮೋದಿ ಯವರ ಸಲಹೆಯಂತೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಬಗ್ಗೆ ನಿರ್ದೇಶನ ಹೊರಡಿಸಿದರು.

ಪ್ರಸ್ತುತ ವಾಗಿ ಹೊಂದಿದ ಖಾತೆಯ ಜೊತೆಗೆ ಪಿಯೂಶ್ ಗೋಯಲ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ಯನ್ನು ಕೊಡಲಾಗಿದೆ ಎಂದು ರಾಷ್ಟ್ರಪತಿ ಭವನವು ಪ್ರಕಟಿಸಿದೆ.

“ಭಾರತದ ರಾಷ್ಟ್ರಪತಿಗಳು, ಪ್ರಧಾನಿ ಯವರ ಸಲಹೆಯಂತೆ, ಸಂಪುಟ ಸಚಿವ ಪಿಯೂಶ್ ಗೋಯಲ್ ಅವರ ಅಸ್ತಿತ್ವದಲ್ಲಿರುವ ಖಾತೆಗಳ ಜೊತೆಗೆ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ವಹಿಸಬೇಕೆಂದು ನಿರ್ದೇಶಿಸಿದ್ದಾರೆ” ಎಂದು ತಿಳಿಸಲಾಗಿದೆ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದ.ಕ.ಜಿಲ್ಲೆಯಲ್ಲಿ ಇಂದು ಒಂದು ಕೋವಿಡ್-19 ಸೋಂಕು ಪತ್ತೆ;, 8ಕ್ಕೇರಿದ ಒಟ್ಟು ಸಂಖ್ಯೆ

Upayuktha

ರೂರ್ಕೆಲಾ ಸ್ಟೀಲ್ ಪ್ಲಾಂಟ್ ನ ಕಲ್ಲಿದ್ದಲು ರಾಸಾಯನಿಕ ಘಟಕದಲ್ಲಿ ಅನಿಲ ಸೋರಿಕೆ ; 4 ಗುತ್ತಿಗೆ ಕಾರ್ಮಿಕರು ಸಾವು

Harshitha Harish

ಕೋವಿಡ್ 19 ನಿರ್ವಹಣೆ: 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ವೀಡಿಯೋ ಸಂವಾದ

Upayuktha