ದೇಶ-ವಿದೇಶ ಪ್ರಮುಖ

ದಿಲ್ಲಿಯಲ್ಲಿ ಪಿಝಾ ಡೆಲಿವರಿ ಬಾಯ್‌ಗೆ ಕೊರೊನಾ ಸೋಂಕು: 72 ಕುಟುಂಬಗಳಿಗೆ ಸ್ವಯಂ ಕ್ವಾರಂಟೈನ್‌ಗೆ ಸೂಚನೆ

ಸಾಂದರ್ಭಿಕ ಚಿತ್ರ (ಪಿಟಿಐ ಚಿತ್ರ, ಕೃಪೆ: ಇಂಡಿಯಾ ಟಿವಿ)

ಹೊಸದಿಲ್ಲಿ:

ಜನಪ್ರಿಯ ಪಿಝಾ ಮಾರಾಟ ಸಂಸ್ಥೆಯೊಂದರ ಡೆಲಿವರಿ ಬಾಯ್‌ಗೆ ಕೋವಿಡ್-19 ಪಾಸಿಟಿವ್‌ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ದಿಲ್ಲಿ 72 ಕುಟುಂಬಗಳಿಗೆ ಸ್ವಯಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

ಮಾಲವೀಯ ನಗರದಲ್ಲಿ ಖ್ಯಾತ ಪಿಝಾ ಸಂಸ್ಥೆಯ ಡೆಲಿವರಿ ಬಾಯ್‌ ಒಬ್ಬನಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತನಿಂದ ಪಿಝಾ ತರಿಸಿಕೊಂಡು ಸೇವಿಸಿದ 72 ಕುಟುಂಬಗಳನ್ನು ಕ್ವಾರಂಟೈನ್‌ನಲ್ಲಿ ಇರುವಂತೆ ದಕ್ಷಿಣ ದಿಲ್ಲಿಯ ಜಿಲ್ಲಾಧಿಕಾರಿ ಬಿ.ಎಂ ಮಿಶ್ರಾ ಸೂಚಿಸಿದ್ದಾರೆ.

ಅಲ್ಲದೆ ಈ ಪಿಝಾ ಸಂಸ್ಥೆಗೆ ಸೇರಿದ ಇತರ 16 ಮಂದಿ ಡೆಲಿವರಿ ಬಾಯ್‌ಗಳನ್ನೂ ತಕ್ಷಣದಿಂದಲೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಕೊರೊನಾ ಸೋಂಕಿತ ಡೆಲಿವರಿ ಬಾಯ್‌ ಯಾವ್ಯಾವ ಕುಟುಂಬಗಳಿಗೆ ಪಿಝಾ ಪೂರೈಸಿದ್ದಾನೆ ಎಂಬದರ ಬಗ್ಗೆ ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

‘ಈ ನಿರ್ದಿಷ್ಟ ಮಳಿಗೆಯಿಂದ 72 ಮನೆಗಳಿಗೆ ಈ ಯುವಕ ಪಿಝಾ ಪಾರ್ಸೆಲ್‌ಗಳನ್ನು ಪೂರೈಸಿರುವುದು ಪತ್ತೆಯಾಗಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಕ್ವಾರಂಟೈನ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ’ ಎಂದು ಮಿಶ್ರಾ ಹೇಳಿದರು.

ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ; ಆದರೆ ಮುನ್ನೆಚ್ಚರಿಕೆ ಅಗತ್ಯ. ಎಲ್ಲ ಡೆಲಿವರಿ ಬಾಯ್‌ಗಳು ಪಾರ್ಸೆಲ್‌ಗಳನ್ನು ಮನೆಗಳಿಗೆ ತಲುಪಿಸುವಾಗ ಮಾಸ್ಕ್‌ಗಳನ್ನು ಧರಿಸುವುದೂ ಸೇರಿದಂತೆ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುತ್ತಾರೆ ಎಂದು ಪಿಝಾ ಮಾರಾಟ ಸಂಸ್ಥೆ ತಿಳಿಸಿದೆ. ಆದರೂ ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯ. ಹೀಗಾಗಿ ಕ್ವಾರಂಟೈನ್‌ ನಿಯಮ ಪಾಲಿಸುವಂತೆ 72 ಕುಟುಂಬಗಳಿಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

ಸೋಂಕಿತ ಡೆಲಿವರಿ ಬಾಯ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಜತೆಗೆ ಸಂಪರ್ಕ ಹೊಂದಿದ್ದ ಇತರರ ಮೇಲೆ ಪ್ರತಿದಿನ ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಖ್ಯಾತ ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ ತನ್ನ ಎಲ್ಲ ಡೆಲಿವರಿ ಬಾಯ್‌ಗಳನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರ ಫಲಿತಾಂಶ ನೆಗೆಟಿವ್ ಆಗಿದೆ. ಹಾಗಿದ್ದರೂ ತಾತ್ಕಾಲಿಕವಾಗಿ ಸಂಸ್ಥೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಝೊಮ್ಯಾಟೋ ಪ್ರಕಟಣೆಯಲ್ಲಿ ತಿಳಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೋವಿಡ್ ಪಾಸಿಟಿವ್

Harshitha Harish

ಆಯುರ್ವೇದ ರಂಗದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಾಂತಿ ಆಯುರ್ವೇದಿಕ್‌ ಸೆಂಟರ್‌ನಿಂದ ಐದು ಪ್ರಶಸ್ತಿಗಳ ಘೋಷಣೆ

Upayuktha

ಹಿಮನದಿ ದುರಂತ: ಮತ್ತೆರಡು ಶವ ಪತ್ತೆ, 134 ಜನರಿಗಾಗಿ ಮುಂದುವರೆದ ಶೋಧ ಕಾರ್ಯ

Sushmitha Jain