ಲೇಖನಗಳು ಸಾಧಕರಿಗೆ ನಮನ

ಇಂದು ಪ್ರಧಾನಿ ಮೋದಿ ಜನ್ಮದಿನ: ನನಗೇಕೆ ಮೇೂದಿ ಇಷ್ಟವಾಗುತ್ತಾರೆ?

ಮೇೂದಿ ಎಂಬ ಹೆಸರು ಕೇಳಿದರೆ ಕೆಲವರಿಗೆ ಇಷ್ಟ ಕೆಲವರಿಗೆ ಕಷ್ಟ. ಹಾಗಾದರೆ ಈ ಇಷ್ಟ ಕೇನು ಕಾರಣಗಳು. ಮೊದಲಾಗಿ ಅವರು ನಡೆದು ಬಂದ ದಾರಿ. ಕಷ್ಟದ ಒಂದೊಂದು ಮೆಟ್ಟಿಲೇರಿ ಬಂದವರು. ಯಾವುದೇ ಕುಟುಂಬದ ಹಿನ್ನೆಲೆಯಾಗಲಿ, ಹಣದ ಬಲವಿಲ್ಲದೆ ಸ್ವಂತ ಶ್ರಮದ ಏರಿಳಿತದಲ್ಲಿ ಅಧಿಕಾರಕ್ಕಾಗಿ ಆಸೆ ಪಡದೆ, ಅವರ ಸಾಮರ್ಥ್ಯ, ಯೇೂಗ್ಯತೆಯಿಂದಲೇ ದೇಶದ ಉನ್ನತ ಹುದ್ದೆ ಸ್ವೀಕರಿಸುವ ಅವಕಾಶ ಅವರಿಗೆ ಕೂಡಿಬಂತು.

ಇದಕ್ಕೆಲ್ಲ ಮುಖ್ಯಕಾರಣ ಅವರಲ್ಲಿರುವ ಪ್ರಾಮಾಣಿಕತೆ ಶ್ರಮದ ಕಾರ್ಯಶೀಲತೆ ಉತ್ತಮ ಉದ್ದೇಶ. ಹಿಡಿದ ಕೆಲಸ ಮಾಡಿಯೇ ತೀರ ಬೇಕೆಂಬ ಛಲ. ಅದಕ್ಕಾಗಿಯೇ ಪೂವ೯ಸಿದ್ದತೆ. ಇಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ.

ಒಬ್ಬ ವ್ಯಕ್ತಿಯಾಗಿ ದೇಶವನ್ನು ಒಗ್ಗೂಡಿಸುವ ಶಕ್ತಿ ಇದ್ದರೆ ಅದು ಮೇೂದಿಗೆ ಮಾತ್ರ. ಎಲ್ಲರನ್ನು ಒಂದಾಗಿ ರಾಷ್ಟ್ರದ ಕಲ್ಪನೆಯಲ್ಲಿ ಕಾಣುವ ಪ್ರತಿಭೆಗಳನ್ನು ಗುರುತಿಸುವ ಹೃದಯ ಸಿರಿವಂತಿಕೆ ಅವರಲ್ಲಿ ಇದೆ. ಆದರೆ ಕೆಲವರು ಕಾಣುವ ದೃಷ್ಟಿಯಲ್ಲಿನ ದೇೂಷದ ಕಾರಣ. ಮೇೂದಿ ಹಿಂದುತ್ವದ ಪರವೊ ಅನ್ನಿಸಬಹುದು. ಧರ್ಮ ಜಾತಿ ಆಧಾರಿತ ಆಡಳಿತ ನಡೆಸು ಜಾಯಮಾನ ಖಂಡಿತವಾಗಿಯೂ ಇಲ್ಲ. ಒಂದು ಪಕ್ಷದೊಳಗೆ ಜವಾಬ್ದಾರಿ ವಹಿಸಿಕೊಂಡಾಗ ಪಕ್ಷದ ಇನ್ನಿತರ ಒತ್ತಡಗಳನ್ನು ಒಮ್ಮೆಲೆ ತಿರಸ್ಕರಿಸಿ ನಿಲುವುದು ಕಷ್ಟಸಾಧ್ಯವೂ ಹೌದು.

ನಮ್ಮದು ವಿಶ್ವ ಅತೀದೊಡ್ಡ ಪ್ರಜಾಪ್ರಭುತ್ವ. ಸುಮಾರು 90 ಕೇೂಟಿಗ್ಗಿಂತಲೂ ಹೆಚ್ಚು ಮತದಾರರು ಇರುವ ಜಗತ್ತಿನ ಏಕೆೈಕ ರಾಷ್ಟ್ರವಿದು. ಇಷ್ಟೊಂದು ಜನರ ಮನಸ್ಸು ಗೆದ್ದು ಏಕ ವ್ಯಕ್ತಿ ಏಕ ಪಕ್ಷ ಅಧಿಕಾರಕ್ಕೆ ಬರುವುದೆಂದರೆ ಅದು ಸುಲಭ ಮಾತಲ್ಲ. ಹಾಗಾಗಿಯೇ ಜನರು ಪ್ರತಿಯೊಂದು ತಪ್ಪಿಗೂ ಸರಿಗೂ ಪ್ರಧಾನಿ ಮೇೂದಿಯನ್ನೆ ಬೊಟ್ಟು ಮಾಡಿತೇೂರಿಸುವ ಸ್ಥಿತಿಗೆ ಬಂದಿದ್ದಾರೆ. ಇಂದು ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಅನ್ನುವ ರೀತಿಯಲ್ಲಿ ನಾವು ದೇಶದ ರಾಜಕೀಯ ನಾಯಕತ್ವ ನೇೂಡುವ ಮನಸ್ಥಿತಿಯಲ್ಲಿದ್ದೇವೆ. ಇದಕ್ಕೆ ಮುಖ್ಯ ಕಾರಣ ಇದುವರೆಗೆ ನಮ್ಮನ್ನು ಆಳಿದ ಪಕ್ಷಗಳು ಉತ್ತಮ ಧ್ಯೇಯ ಉದ್ದೇಶ. ತತ್ವಗಳನ್ನು ಮರೆತು ಸ್ವಾಥ೯ ಪರ ಚಿಂತನೆ. ಕುಟುಂಬದ ರಾಜಕೀಯವೇ ಬದುಕು ಅನ್ನುವ ರೀತಿಯಲ್ಲಿ ತಮ್ಮ ತಮ್ಮ ಪಕ್ಷ ಬೆಳೆಸಿಕೊಂಡು ಬಂದಿರುವುದೇ ಪ್ರಮುಖ ಕಾರಣ. ಇದರಿಂದ ಜನ ಬೇಸತ್ತು ಪಕ್ಷಕ್ಕಿಂತಲೂ ವ್ಯಕ್ತಿಯೇ ಮುಖ್ಯ ಅನ್ನುವ ನಿಧಾ೯ರಕ್ಕೆ ಜನ ಬಂದು ಬಿಟ್ಟಿದ್ದಾರೆ. ಒಂದು ರೀತಿಯಲ್ಲಿ ಮುಂದಿನ ದಿನಗಳಲ್ಲಿ ಮೇೂದಿಗೆ ಸರಿಸಮಾನವಾದ ನಾಯಕನನ್ನು ಗುರುತಿಸಿ ಕೊಳ್ಳದಿದ್ದರೆ. ಇಂದು ಕಾಂಗ್ರೆಸ್‌ ಗೆ ಬಂದ ಗತಿಯೇ ಬಿಜೆಪಿಗೆ ಬಂದರೂ ಆಶ್ಚರ್ಯವಿಲ್ಲ. ಮುಂದಂತೂ ಮೇೂದಿವರು ಈ ಬಿಜೆಪಿಗೆ ತನ್ನನ್ನು ಟ್ರಂಪ್ ಕಾರ್ಡ್‌ ಆಗಿ ಬಳಸಲು ಬಿಡುವುದಿಲ್ಲ ಅನ್ನುವುದು ಖಾತ್ರಿ.

ಮೇೂದಿ ಸರಕಾರ ತೆಗೆದುಕೊಂಡ ನಿರ್ಧಾರಗಳು ಪ್ರಜ್ಞಾವಂತ ಜನರ ಮನಸ್ಸನ್ನು ಸಾಕಷ್ಟು ಸೂರೆ ಗೊಂಡಿವೆ. ಅವರು ತೆಗೆದುಕೊಂಡು ತೀರ್ಮಾನಗಳೆಲ್ಲವೂ ಚೆನ್ನಾಗಿದೆ.

ಕೆಲವೊಂದು ಅನುಷ್ಠಾನ ದಾರಿಯಲ್ಲಿ ನ್ಯೂನತೆಗಳಿಂದ ತೊಡಕಾಗಿರಬಹುದು. ಜನ ಬೆಂಬಲವಿದೆ ಯಾಕೆಂದರೆ ಅದರ ಹಿಂದಿರುವ ಉದ್ದೇಶ ಒಳ್ಳೆಯದಾದ ಕಾರಣ. ಜಮ್ಮು ಕಾಶ್ಮೀರದ ತಲೆ ತಿನ್ನುವ ವಿಧಿ 370 ಮತ್ತು 35A ರದ್ದುಗೊಳಿಸಿದ್ದು. ಇದು ಯಾರಿಂದಲೂ ಸಾಧ್ಯ ವಾಗದ ಕೆಲಸ ಕೂಡಾ. ಕಪ್ಪು ಹಣವನ್ನು ಬೆಳಿದಾರಿಗೆ ತರುವ ಸುಧಾರಣೆ. ಇದರಿಂದ ಅದೆಷ್ಟೊ ಭ್ರಷ್ಟಾಚಾರ, ಭಯೋತ್ಪಾದನೆ ಕಳ್ಳವ್ಯವಹಾರಗಳಿಗೆ ಕಡಿವಾಣ ಬಿತ್ತು. ಹಾಗಾಗಿಯೇ ಕಳ್ಳ ಧನಿಕರು ಮೇೂದಿ ಹೆಸರು ಕೇಳಿದರೆ ಬೊಬ್ಬೆ ಹಾಕುವುದು. ಅಥಿ೯ಕತೆಯೇ ಬಿದ್ದು ಹೇೂಯಿತು ಅನ್ನುವ ತರದಲ್ಲಿ ಬಿಂಬಿಸುವುದು. ತೆರಿಗೆಯಲ್ಲಿ ಏಕ ರಾಷ್ಟ್ರ ಏಕ ತೆರಿಗೆ. ಮಹಿಳಾ ಶೇೂಷಣೆ ಮುಕ್ತಗೊಳಿಸುವ ತ್ರಿಬಲ್ ತಲಾಖ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದು ಕೊಂಡ ನೀತಿ ನಿರೂಪಣೆ ಇತ್ಯಾದಿ..

ಮುಂದಿನ ಹೆಜ್ಜೆಗಳು ಇನ್ನೂ ರೇೂಚಕವಾಗಿರ ಬಹುದು. ಸಮಾನ ನಾಗರಿಕ ಸಂಹಿತೆ, ಏಕ ರಾಷ್ಟ್ರ ಏಕ ಚುನಾವಣೆ, ಅನಧಿಕೃತ ಆಸ್ತಿ ಮುಟ್ಟುಗೇೂಲು, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ ಆಹ೯ತೆ ಇನ್ನಷ್ಟು ಬಿಗುಗೊಳಿಸುವುದು, ಇವೆಲ್ಲವೂ ಮುಂದಿನ ಮೇೂದಿಜೀಯವರ ಆಡಳಿತಾವಧಿಯಲ್ಲಿ ಕಾಣ ಬೇಕಾದ ನಿರೀಕ್ಷೆಗಳು. ಹಾಗಾಗಿಯೇ ಇರಬೇಕು ಕೆಲವರಿಗೆ ಮೇೂದಿಯೆಂದರೆ ತುಂಬಾ ಕಷ್ಟ. ಇಷ್ಟವಾಗುವುದೇ ಇಲ್ಲ.

ಮೇೂದಿಯವರ ಆಡಳಿತಾವಧಿಯಲ್ಲಿ ಸಾಕಷ್ಟು ಸವಾಲು, ಸಮಸ್ಯೆಗಳನ್ನು ಎದುರಿಸ ಬೇಕಾದ ಕಷ್ಟ ಕಾಲವೂ ಒದಗಿ ಬಂತು. ಆದರೂ ಕೂಡಾ ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ಸು ಕಂಡು ಕೊಂಡಿದ್ದಾರೆ ಅನ್ನುವುದೇ ಇವರ ಆತ್ಮಶಕ್ತಿಯ ಇಚ್ಛಾ ಶಕ್ತಿಯ ಫಲ. ಇಂತಹ ಸವಾಲುಗಳನ್ನು ಧಾಟಿ ಬಂದಾಗಲೇ ಶ್ರೇಷ್ಠ ನಾಯಕನಾಗಿ ಹೊರ ಹೊಮ್ಮಲು ಸಾಧ್ಯ. ಆದುದರಿಂದಲೇ ಪ್ರಧಾನಿ ಅನ್ನುವ ಮೇೂದಿಯ ಹೆಸರು ಸರ್ವಕಾಲಿಕವಾಗಿ ನಿಲ್ಲುತ್ತದೆ.

ದೇಶದ ಪ್ರಧಾನಿ ಮೇೂದಿಗೆ ಇಂದು ಎಪ್ಪತ್ತು. ಈ ಎಪ್ಪತ್ತರಲ್ಲೂ ಇಪ್ಪತ್ತರ ಹುರುಪಿದೆ. ಅವರ ನಡೆ ನುಡಿಯ ಸಂಪತ್ತು ಸಮೃದ್ಧಿಯಾಗಿಯೇ ಇದೆ. ಹಾಗಾಗಿ ಇನ್ನಷ್ಟು ಕಾಲ ಈ ದೇಶವನ್ನು ಮುನ್ನಡೆಸುವ ಸೌಭಾಗ್ಯ ಮೇೂದಿ ನರೇಂದ್ರ ಪಾಲಿಗೆ ಒದಗಿ ಬರಲಿ ಅನ್ನುವುದೇ ಸಮಸ್ತ ರಾಷ್ಟ್ರಾಭಿಮಾನಿಗಳ ಶುಭ ಹಾರೆೈಕೆಯೂ ಹೌದು.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಚೆವಾಂಗ್ ನಾರ್ಫೆಲ್: ಐಸ್ ಮ್ಯಾನ್ ಆಫ್ ಇಂಡಿಯಾ

Upayuktha

ಕೃಷಿ ಗಣಿತ: ಉತ್ಪಾದನಾ ವೆಚ್ಚ, ಕನಿಷ್ಠ ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ಹೇಗೆ?

Upayuktha

ಹುಡ್ಗೀರ್ ಗೋಳು- ಫ್ಯಾಮಿಲಿ ಕಾರ್ಯಕ್ರಮಗಳನ್ನು ಅಟೆಂಡ್ ಆಗೋ ಟಾಸ್ಕ್

Upayuktha

Leave a Comment