73ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ ಪ್ರಧಾನಿ
ಹೊಸದಿಲ್ಲಿ: ಮೂರೂ ಸೇನಾಪಡೆಗಳಿಗೆ ಏಕೈಕ ಮುಖ್ಯಸ್ಥರೊಬ್ಬರ ಹುದ್ದೆಯನ್ನು (ಚೀಫ್ ಆಫ್ ಡಿಫೆನ್ಸ್ ಸ್ಟಾಫ್- ಸಿಡಿಎಸ್) ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. 1999ರ ಕಾರ್ಗಿಲ್ ಯುದ್ಧದ ಬಳಿಕ ಭದ್ರತಾ ವ್ಯವಸ್ಥೆಗೆ ಅಗತ್ಯವಾಗಿ ಬೇಕಾಗಿದ್ದ ಏಕೀಕೃತ ಯೋಜನೆ, ರಕ್ಷಣಾ ಬಜೆಟ್ ತಯಾರಿ, ಯುದ್ಧೋಪಕರಣಗಳ ಖರೀದಿ, ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಗೆ ಅಗತ್ಯವಿರುವ ಮೂಲಸೌರ್ಯಗಳ ಒದಗಣೆ ಮತ್ತು ನಿರ್ವಹಣೆಗಾಗಿ ಈ ಹುದ್ದೆಯನ್ನು ಸೃಜಿಸಲಾಗಿದೆ.
ಗುರುವಾರ 73ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಸಿಡಿಎಸ್ ಹುದ್ದೆ ಸೃಷ್ಟಿಸುವುದಾಗಿ ಘೋಷಿಸಿದರು. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರ ಬಳಿಕ ನಾಲ್ಕು ನಕ್ಷತ್ರಗಳ (ಫೋರ್ ಸ್ಟಾರ್) ನಾಲ್ಕನೆಯ ಜನರಲ್ ಈ ಹುದ್ದೆಯನ್ನು ಅಲಂಕರಿಸುತ್ತಾರೆ.
ರಾಜ್ಯಾದ್ಯಂತ ಸುರಿವ ಮಳೆಯಲ್ಲೇ 73ನೇ ಸ್ವಾತಂತ್ರ್ಯ ಸಂಭ್ರಮ
‘ಮೂರೂ ಪಡೆಗಳ ನಡುವೆ ಹೆಚ್ಚಿನ ಸಮನ್ವಯಕ್ಕಾಗಿ ಕೆಂಪುಕೋಟೆಯಿಂದ ಪ್ರಮುಖ ನಿರ್ಧಾರವೊಂದನ್ನು ಘೋಷಿಸಲು ನಾನು ಬಯಸುತ್ತೇನೆ. ಭಾರತ ಇನ್ನು ಸಿಡಿಎಸ್ ಒಬ್ಬರನ್ನು ಹೊಂದಿರಲಿದೆ. ಸಶಸ್ತ್ರ ಪಡೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪ್ರಧಾನಿ ನುಡಿದರು.
ನೆರೆ ಸಂತ್ರಸ್ತರಿಗೆ ಎಲ್ಲರೂ ನೆರವಾಗೋಣ: ಬಿಎಸ್ವೈ
199ರ ಕಾರ್ಗಿಲ್ ಸಮರದ ಬಳಿಕ ರಾಷ್ಟ್ರೀಯ ಭದ್ರತೆಯ ಸುಧಾರಣೆಗಾಗಿ ಸಚಿವರ ಸಮಿತಿ ವರದಿಯ ಶಿಫಾರಸಿನ ಹೊರತಾಗಿಯೂ ಇದುವರೆಗೆ ಸಿಡಿಎಸ್ ಹುದ್ದೆ ರಚನೆಯಾಗಿರಲಿಲ್ಲ. 2012ರ ನರೇಶ್ ಚಂದ್ರ ಕಾರ್ಯಪಡೆ ಮತ್ತು 2016ರ ಲೆಫ್ಟಿನೆಂಟ್ ಜನರಲ್ ಡಿ.ಬಿ. ಶೇಕತ್ಕರ್ ಸಮಿತಿ ಸಹಿತ ನಂತರದ ಸಮಿತಿಗಳು ಕೂಡ ಮೂರೂ ಪಡೆಗಳಿಗೆ ಒಟ್ಟಾಗಿ ಒಬ್ಬ ಮುಖ್ಯಸ್ಥರ ಹುದ್ದೆಯ ಅಗತ್ಯವನ್ನು ಸಾರಿ ಹೇಳಿದ್ದವು.