ದೇಶ-ವಿದೇಶ ಪ್ರಮುಖ

ಜಮ್ಮು ಮತ್ತು ಕಾಶ್ಮೀರ ಬಿ.ಡಿ.ಸಿ ಚುನಾವಣೆ: ಐತಿಹಾಸಿಕ ಶೇ 98 ಮತದಾನಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ಹೊಸದಿಲ್ಲಿ: ಜಮ್ಮು, ಕಾಶ್ಮೀರ, ಲಡಾಖ್‌ ಮತ್ತು ಲೇಹ್‌ನ ಬ್ಲಾಕ್‌ ಡೆವಲಪ್‌ಮೆಂಟ್‌ ಕೌನ್ಸಿಲ್‌ಗಳ ಚುನಾವಣೆಯಲ್ಲಿ ಐತಿಹಾಸಿಕ ಶೇ. 98ರಷ್ಟು ಮತದಾನ ನಡೆದಿರುವುದು ಜನತೆ ಪ್ರಜಾಪ್ರಭುತ್ವದಲ್ಲಿ ಇಟ್ಟಿರುವ ನಂಬಿಕೆಯ ದ್ಯೋತಕ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಒಟ್ಟು 310 ಬ್ಲಾಕ್‌ಗಳಲ್ಲಿ 1080 ಅಭ್ಯರ್ಥಿಗಳು ಕಣದಲ್ಲಿದ್ದರು. ಎಲ್ಲೂ ಯಾವುದೇ ರೀತಿಯ ಹಿಂಸಾಚಾರ ನಡದಿಲ್ಲ. ಹೀಗಾಗಿ ಐತಿಹಾಸಿಕ ಶೇ 98ರ ಪ್ರಮಾಣದ ಮತದಾನ ನಡೆದಿದೆ ಎಂದು ಮೋದಿ ಹೇಳಿದರು.

ಬಿ.ಡಿ.ಸಿ ಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಅವರು ಅಭಿನಂದನೆಗಳನ್ನು ಸಲ್ಲಿಸಿದರು. ಹೊಸ ಯುವ ನಾಯಕರು ಎಲ್ಲ ಪ್ರಾಂತ್ಯಗಳಲ್ಲೂ ಮೂಡಿ ಬರಬೇಕು. ರಾಷ್ಡ್ರೀಯ ಅಭಿವೃದ್ಧಿಗೆ ಸ್ಮರಣೀಯ ಕೊಡುಗೆ ನೀಡಲು ಮುಂದಾಗಬೇಕು ಎಂದು ಪ್ರಧಾನಿ ನುಡಿದರು.

ಈ ವರ್ಷದ ಆಗಸ್ಟ್‌ನಲ್ಲಿ ಭಾರತದ ಸಂಸತ್ತು ಕೈಗೊಂಡ ಐತಿಹಾಸಿಕ ನಿರ್ಧಾರ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಜನತೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ಇದರಿಂದ ಸಾಧ್ಯವಾಗಿದೆ ಎಂದು ಮೋದಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಯುವ ಮತ್ತು ಚುರುಕಿನ ನಾಯಕರು ಎಲ್ಲ ಪ್ರಾಂತ್ಯಗಳ ಆಶೋತ್ತರಗಳನ್ನು ರೂಪಿಸಲು ಮುಂದಾಗುತ್ತಾರೆ ಎಂದು ಅವರು ನುಡಿದರು.

Related posts

ಡಿಜಿಟಲೀಕೃತ ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ

Upayuktha

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ: ಗಲಭೆಕೋರರಿಂದಲೇ ನಷ್ಟ ವಸೂಲಿಗೆ ಕ್ರಮ

Upayuktha

ಹಿರಿಯ ಭಾಷಾ ವಿಜ್ಞಾನಿ, ತುಳು ವಿದ್ವಾಂಸ ಡಾ. ಯು.ಪಿ ಉಪಾಧ್ಯಾಯ ನಿಧನ

Upayuktha