ದೇಶ-ವಿದೇಶ ಪ್ರಮುಖ

ಸ್ಟಾಚ್ಯು ಆಫ್ ಯುನಿಟಿ- ಸಾಬರ್ಮತಿ ನದಿಕಿನಾರೆ ಜೋಡಿಸುವ ಸೀ ಪ್ಲೇನ್‌ ಸೇವೆ ಉದ್ಘಾಟಿಸಿದ ಪ್ರಧಾನಿ ಮೋದಿ

(ಚಿತ್ರ ಕೃಪೆ: ಝೀ ನ್ಯೂಸ್)

ಅಹಮದಾಬಾದ್‌: ಇಂದು ಅಹ್ಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆವಾಡಿಯಾದಿಂದ ಸಾಬರ್ಮತಿಯವರೆಗಿನ ಸಮುದ್ರ ಯಾನದ ಸೇವೆಯನ್ನು (ಸೀ ಪ್ಲೇನ್‌) ಉದ್ಘಾಟಿಸಿದರು.

ಶುಕ್ರವಾರ ಸ್ಟಾಚ್ಯು ಆಫ್ ಯೂನಿಟಿಯ ಬಳಿ ಒಂದು ಸಮುದ್ರ ಸಂಚಾರ (ಕ್ರೂಸ್‌) ಸೇವೆಯನ್ನು ಪ್ರಧಾನಿಯವರು ಉದ್ಘಾಟಿಸಿದ್ದು 40 ನಿಮಿಷಗಳ ಈ ಯಾನವು ಆರು ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

ಇದರೊಂದಿಗೆ ಸುಮಾರು 35,000 ಚದರ ವಿಸ್ತೀರ್ಣದ ಏಕತಾ ಮಾಲ್ ವಾಣಿಜ್ಯ ಕೇಂದ್ರವನ್ನೂ ಉದ್ಘಾಟಿಸಿದ್ದು, ಇದು ದೇಶದಾದ್ಯಂತದ ಕರಕುಶಲ ಸಾಮಗ್ರಿಗಳ ಮಾರಾಟಕ್ಕೆ ಅನುಕೂಲಕರವಾಗಿದೆ.

ಆಹಾರ ಉದ್ಯಾನ ಹಾಗೂ ವನ್ಯಜೀವಿ ಉದ್ಯಾನಗಳು ನಿನ್ನೆ ಉದ್ಘಾಟನೆಗೊಂಡ ಹಲವು ಆಕರ್ಷಣೆಗಳಲ್ಲಿ ಪ್ರಮುಖವಾಗಿವೆ. ಪ್ರಾಣಿ ಉದ್ಯಾನವು 375 ಎಕರೆಯಷ್ಟು ವಿಸ್ತಾರವಿದ್ದು ಸಾವಿರದ ನೂರು ಪ್ರಬೇಧಗಳ ಪಕ್ಷಿಗಳು ಹಾಗೂ ನೂರು ವಿವಿಧ ಪ್ರಬೇಧಗಳ ಪ್ರಾಣಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಇದಲ್ಲದೆ ಕೆವಾಡಿಯಾದ ಮಾಹಿತಿ ಒದಗಿಸುವ ಆರು ಭಾಷೆಗಳಲ್ಲಿ ಮುದ್ರಿತವಾಗಿರುವ ಮಾಹಿತಿ ಪತ್ರವನ್ನೂ ಪ್ರಧಾನಿಯವರು ಬಿಡುಗಡೆ ಮಾಡಿದ್ದಾರೆ. ಈ ಪ್ರದೇಶವನ್ನು ಎಲ್‌ಇಡಿ ವಿದ್ಯುದೀಪಗಳಿಂದ ಬೆಳಗಲಾಗಿದೆ.

ನಿನ್ನೆ ಮುಂಜಾನೆ ಅಹಮದಾಬಾದ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಗುರುವಾರ ನಿಧನರಾದ ಕೇಶುಬಾಯಿ ಪಟೇಲ್ ಅವರ ನಿವಾಸಕ್ಕೆ ತೆರಳಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಹಾಗೂ ಇತ್ತೀಚೆಗೆ ನಿಧನರಾದ ನಟ, ಗಾಯಕ ಮಹೇಶ್- ನರೇಶ್ -ಕಾಮೋಡಿಯಾ ಅವರ ಕುಟುಂಬದವರನ್ನೂ ಭೇಟಿ ಮಾಡಿ ಸಂತಾಪ ಸೂಚಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಅಗರಬತ್ತಿ ತಯಾರಿಕೆಯ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರದಿಂದ ಮತ್ತಷ್ಟು ಪ್ರೋತ್ಸಾಹ

Upayuktha News Network

ತಿಹಾರ್ ಜೈಲಿನಲ್ಲಿ ಚಿದಂಬರಂ ಭೇಟಿ ಮಾಡಿದ ಸೋನಿಯಾ, ಮನಮೋಹನ್ ಸಿಂಗ್

Upayuktha

‘ಪವಿತ್ರ ರಿಶ್ತಾ’ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

Upayuktha

Leave a Comment