ದೇಶ-ವಿದೇಶ ಪ್ರಮುಖ

ಕೊರೊನಾ ವಿರುದ್ಧ ಸಮರ: ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಭಾಷಣ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ಕೋವಿಡ್-19 (ಕೊರೊನಾ ವೈರಸ್) ವಿರುದ್ದ ಸಮರಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಲಿದ್ದಾರೆ.

ದೇಶದಲ್ಲಿ ಕೋವಿಡ್-19 ಸೋಂಕು ದೃಢಪಟ್ಟ ಒಟ್ಟು ಪ್ರಕರಣಗಳು 166ಕ್ಕೆ ಏರಿವೆ. ದೇಶದ ವಿವಿಧ ಭಾಗಗಳಲ್ಲಿ 15 ಪ್ರಕರಣಗಳು ಬುಧವಾರ ದೃಢಪಟ್ಟಿದ್ದವು.

ಈ ಸೋಂಕು ತಗುಲಿದವರಲ್ಲಿ 25 ಮಂದಿ ವಿದೇಶೀಯರೂ ಸೇರಿದ್ದಾರೆ. ದೃಢೀಕೃತ ಪ್ರಕರಣಗಳ ಪೈಕಿ 14 ಮಂದಿ ಕೊರೊನಾ ವೈರಸ್‌ನಿಂದ ಸಂಪೂರ್ಣ ಮುಕ್ತರಾಗಿದ್ದು, ಆಸ್ದತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮೂವರು ಮೃತಪಟ್ಟಿದ್ದಾರೆ.

ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇದುವರೆಗೆ 13.95 ಲಕ್ಷ ಯಾತ್ರಿಕರ ತಪಾಸಣೆ ನಡೆಸಲಾಗಿದೆ.

ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದೇಶದ ಜನತೆಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಸಾಮಾಜಿಕವಾಗಿ ದೂರವಿರುವುದು, ಕೈಗಳನ್ನು ಸ್ವಚ್ಛಗೊಳಿಸುವುದು ಮತ್ತು ಸಾಮೂಹಿಕವಾಗಿ ಜನಜಂಗುಳಿ ಸೇರುವುದನ್ನು ತಡೆಯುವುದು ಸೇರಿದಂತೆ ಕೊರೊನಾ ಹರಡುವುದನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ಟೆಕ್ನಾಲಜಿ ಒದಗಿಸಿರುವುದು ಅಭಿನಂದನೀಯ: ಡಾ.ಅನುರಾಗ್ ಶೆಟ್ಟಿ

Sushmitha Jain

ಓದುವಿಕೆ ಇಲ್ಲದೆ ಸಮಾಜ ಪತನದ ಹಾದಿ ಹಿಡಿದಿದೆ: ಜಿ.ಎಸ್. ನಟೇಶ್

Upayuktha

ರಾಜ್ಯದಲ್ಲಿ ಮುಂದುವರಿದ ವರುಣಾಘಾತ: ಉಕ್ಕಿ ಹರಿಯುತ್ತಿರುವ ನೇತ್ರಾವತಿ

Upayuktha