ದೇಶ-ವಿದೇಶ ಪ್ರಮುಖ

ಕೊರೊನಾ ವಿರುದ್ಧ ಸಮರ: ರಾಷ್ಟ್ರವನ್ನುದ್ದೇಶಿಸಿ ಇಂದು ರಾತ್ರಿ ಪ್ರಧಾನಿ ಮೋದಿ ಭಾಷಣ

ಹೊಸದಿಲ್ಲಿ: ದೇಶಾದ್ಯಂತ ಕೊರೊನಾ ತುರ್ತು ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರೇ ಟ್ವೀಟ್ ಮಾಡಿದ್ದು, ಕೊರೊನಾ ವಿರುದ್ಧದ ಸಮರದಲ್ಲಿ ಭಾರತೀಯರಾದ ನಾವು ಮುಂದೆ ಯಾವ ರೀತಿ ಸಹಕರಿಸಬೇಕು ಮತ್ತು ಯಾವ ಪಾತ್ರವಹಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.

ಜತೆಗೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರಿಸಲಿದ್ದು, ಕೊರೊನಾ ನಿರ್ಮೂಲನಕ್ಕೆ ಮುಂದಿನ ಹಲವು ದಿನಗಳ ಕಾಲ ಕಠಿಣ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂಬ ಸಂದೇಶ ನೀಡಲಿದ್ದಾರೆ. ಮನುಕುಲವೇ ಎದುರಿಸಬೇಕಾಗಿರುವ ಈ ಸಮರದಲ್ಲಿ ಸಂಪೂರ್ಣ ಸಹಕರಿಸುವಂತೆ ಜನತೆಗೆ ಮನವಿ ಮಾಡಲಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಲಾಕ್‌ಡೌನ್ 4 ಇನ್ನೆರಡು ದಿನದಲ್ಲಿ ಮುಕ್ತಾಯ, ಮುಂದೇನು? ಸಿಎಂಗಳ ಜತೆ ಗೃಹಸಚಿವ ಅಮಿತ್ ಶಾ ಮಾತುಕತೆ

Upayuktha

ಪಶ್ಚಿಮ ಕರಾವಳಿಯಲ್ಲಿ ಉಗ್ರರ ದಾಳಿ ಸಾಧ್ಯತೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ

Upayuktha

ದೇವಳಗಳಿಂದ ಗೋಶಾಲೆಗಳಿಗೆ ವಾರ್ಷಿಕ ನೆರವು: ಸಚಿವ ಕೋಟ ಶ್ರೀನಿವಾಸ ಪೂಜಾರಿ

Upayuktha