ದೇಶ-ವಿದೇಶ ಪ್ರಮುಖ

ವಿಸ್ತರಣಾವಾದದ ಶಕ್ತಿಗಳ ವಿರುದ್ಧ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದ ಭಾರತ

ಯೋಧರೊಂದಿಗೆ ಮುಂಪಡೆಯ ಪ್ರದೇಶಗಳಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ಜೈಸಲ್ಮೇರ್: ವಿಸ್ತರಣಾವಾದದ ಸಿದ್ಧಾಂತದ ವಿರುದ್ಧ ಭಾರತ ಶಕ್ತಿಯುತ ಧ್ವನಿಯಾಗಿ ಹೊರಹೊಮ್ಮಿದೆ. ಭಾರತದ ನೀತಿ ಸ್ಪಷ್ಟವಾಗಿದೆ. ಇಂದು ಭಾರತ ತಿಳಿವಳಿಕೆ ಮತ್ತು ವಿವರಣೆಯಲ್ಲಿ ನಂಬಿಕೆ ಇಟ್ಟಿದೆ, ಆದಾಗ್ಯೂ ಯಾರಾದರೂ ನಮ್ಮನ್ನು ಪರೀಕ್ಷಿಸುವ ಪ್ರಯತ್ನ ಮಾಡಿದರೆ, ನಮ್ಮ ಪ್ರತಿಕ್ರಿಯೆ ತೀವ್ರವಾಗಿರುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿಯನ್ನು ಸಶಸ್ತ್ರ ಪಡೆ ಯೋಧರ ಜೊತೆ ಕಳೆಯುವ ತಮ್ಮ ಸಂಪ್ರದಾಯವನ್ನು ಮುಂದುವರಿಸಿದ್ದು, ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಲಾಂಗೇವಾಲಾದ ಭಾರತೀಯ ಗಡಿ ಠಾಣೆಯಲ್ಲಿ ಯೋಧರೊಂದಿಗೆ ಸಂವಾದ ನಡೆಸಿ, ಭಾಷಣ ಮಾಡಿದರು.

ದಾಳಿಕೋರರನ್ನು ಎದುರಿಸುವ ಸಾಮರ್ಥ್ಯವಿದ್ದರೆ ದೇಶ ಸುರಕ್ಷಿತ
18 ನೇ ಶತಮಾನದ ಚಿಂತನೆಯನ್ನು ಪ್ರತಿಬಿಂಬಿಸುವ ಮಾನಸಿಕ ವಿಕೃತವಾದ ವಿಸ್ತರಣಾವಾದದ ಶಕ್ತಿಗಳಿಂದ ಇಡೀ ಜಗತ್ತು ತೊಂದರೆಗೀಡಾಗಿತ್ತು ಎಂದು ಮೋದಿ ಬೊಟ್ಟು ಮಾಡಿದರು. ದಾಳಿಕೋರರನ್ನು ಮತ್ತು ಒಳನುಸುಳುಕೋರರನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರ ಮಾತ್ರ ಸುರಕ್ಷಿತವಾಗಿರುತ್ತದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಅಂತಾರಾಷ್ಟ್ರೀಯ ಸಹಕಾರದಲ್ಲಿನ ಪ್ರಗತಿ ಮತ್ತು ಸಮೀಕರಣಗಳ ಬದಲಾವಣೆಗಳ ಹೊರತಾಗಿಯೂ, ಬೇಹುಗಾರಿಕೆಯನ್ನು ಮರೆಯಲು ಸಾಧ್ಯವಿಲ್ಲ, ಕಾರಣ ಭದ್ರತೆಗೆ ಅದು ಪ್ರಮುಖವಾದುದು, ಜಾಗರೂಕತೆಯು ಸಂತೋಷದ ಆಧಾರವಾಗಿದೆ ಮತ್ತು ವಿಜಯದ ವಿಶ್ವಾಸವಾಗಿದೆ ಎಂದು ಅವರು ಹೇಳಿದರು.

ಈ ದೇಶವು ತನ್ನ ರಾಷ್ಟ್ರೀಯ ಹಿತದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಇಂದು ಜಗತ್ತಿಗೆ ತಿಳಿದಿದೆ ಎಂದು ಅವರು ಘೋಷಿಸಿದರು. ಭಾರತದ ಈ ಸ್ಥಾನಮಾನವು ಅದರ ಶೌರ್ಯ ಮತ್ತು ಸಾಮರ್ಥ್ಯಗಳಿಂದಾಗಿ ಬಂದಿದೆ. ಸಶಸ್ತ್ರ ಪಡೆಗಳ ಭದ್ರತೆಯಿಂದಾಗಿ ಭಾರತವು ಅಂತಾರಾಷ್ಟ್ರೀಯ ವೇದಿಕೆಗಳನ್ನು ಬಲವಾಗಿ ಹಿಡಿದಿಡಲು ಸಮರ್ಥವಾಗಿದೆ, ಭಾರತದ ಸೇನಾ ಶಕ್ತಿಯು ತನ್ನ ಮಾತುಕತೆಯ ಶಕ್ತಿಯನ್ನು ಹೆಚ್ಚಿಸಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಇಂದು ಭಾರತವು ತಮ್ಮ ಮನೆಯಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುವವರನ್ನು ಹೊಡೆದುರುಳಿಸುತ್ತಿದೆ ಎಂದರು.

ಯೋಧರ ತ್ಯಾಗಕ್ಕೆ ಗೌರವ ಅರ್ಪಣೆ
ಹಿಮಚ್ಛಾದಿತವಾದ ಪರ್ವತಗಳಲ್ಲಿ ಅಥವಾ ಮರುಭೂಮಿಯಲ್ಲಿ ಸೈನಿಕರೊಂದಿಗೆ ಕಳೆದಾಗ ಮಾತ್ರ ತಮ್ಮ ದೀಪಾವಳಿ ಪೂರ್ಣಗೊಳ್ಳುತ್ತದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ಭಾರತೀಯರ ಶುಭಾಶಯ, ಆಶೀರ್ವಾದ ಮತ್ತು ಶುಭ ನುಡಿಗಳನ್ನು ಅವರು ಗಡಿಯಲ್ಲಿರುವ ಸಶಸ್ತ್ರ ಪಡೆ ಸಿಬ್ಬಂದಿಯ ಬಳಿಗೆ ತೆಗೆದುಕೊಂಡು ಹೋಗಿದ್ದರು. ಧೈರ್ಯಶಾಲಿ ತಾಯಂದಿರು ಮತ್ತು ಸಹೋದರಿಯರಿಗೆ ಶುಭ ಕೋರಿದ ಅವರು, ಅವರುಗಳ ತ್ಯಾಗಕ್ಕೆ ಗೌರವ ಸಲ್ಲಿಸಿದರು. ಪ್ರಧಾನಮಂತ್ರಿ ದೇಶವಾಸಿಗಳ ಕೃತಜ್ಞತೆಯನ್ನು ಸಶಸ್ತ್ರ ಪಡೆಗಳಿಗೆ ತಿಳಿಸಿ. 130 ಕೋಟಿ ಭಾರತೀಯರೂ ಪಡೆಗಳೊಂದಿಗೆ ಬಲವಾಗಿ ನಿಂತಿದ್ದಾರೆ ಎಂದು ಹೇಳಿದರು.

ಆತ್ಮನಿರ್ಭರ ಭಾರತದ ಮತ್ತು ಸ್ಥಳೀಯತೆಗೆ ಧ್ವನಿಯಾಗಬೇಕು ಎಂಬುದರ ಮೇಲಿನ ಒತ್ತನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಇತ್ತೀಚೆಗೆ 100ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಮತ್ತು ಸಾಧನಗಳನ್ನು ಇನ್ನು ಮುಂದೆ ಆಮದು ಮಾಡಿಕೊಳ್ಳುವುದಿಲ್ಲ ಎಂದು ಪಡೆಗಳು ನಿರ್ಧರಿಸಿದೆ ಎಂದು ಹೇಳಿದರು. ಅವರು ಸ್ಥಳೀಯರಿಗೆ ಧ್ವನಿ ನೀಡುವಲ್ಲಿ ಮುನ್ನಡೆದಿದ್ದಾರೆ ಎಂದು ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು.

ಪಡೆಗಳ ಅಗತ್ಯಗಳನ್ನು ಪೂರೈಸಲು ಅನೇಕ ನವೋದ್ಯಮಗಳು ಮುಂದೆ ಬರುತ್ತಿದ್ದು, ಸಶಸ್ತ್ರ ಪಡೆಗಳಿಗೆ ಉತ್ಪಾದನೆ ಮಾಡಿ ಕೊಡುವಂತೆ ದೇಶದ ಯುವಕರಿಗೆ ಶ್ರೀ ಮೋದಿ ಕರೆ ನೀಡಿದರು. ರಕ್ಷಣಾ ಕ್ಷೇತ್ರದಲ್ಲಿ ಯುವಕರ ನೇತೃತ್ವದ ನವೋದ್ಯಮಗಳು ದೇಶವನ್ನು ಆತ್ಮನಿರ್ಭರತೆಯ ಹಾದಿಯಲ್ಲಿ ಮುನ್ನಡೆಸುತ್ತವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಸಶಸ್ತ್ರಪಡೆಗಳಿಂದ ಸ್ಫೂರ್ತಿ ಪಡೆದು ದೇಶ ಪ್ರತಿಯೊಬ್ಬ ನಾಗರಿಕರನ್ನು ಸಾಂಕ್ರಾಮಿಕದ ಕಾಲದಲ್ಲಿ ಉಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಾಗರಿಕರಿಗೆ ಆಹಾರ ಖಾತ್ರಿಪಡಿಸುವುದರ ಜೊತೆಗೆ ದೇಶ, ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಕಾರ್ಯೋನ್ಮುಖವಾಗಿದೆ ಎಂದರು.

ಪ್ರಧಾನಮಂತ್ರಿಯವರು ಯೋಧರು ಈ ಮೂರು ವಿಷಯಗಳನ್ನು ಪಾಲಿಸುವಂತೆ ಕೇಳಿದರು. ಮೊದಲನೆಯದು, ನಾವೀನ್ಯತೆಯನ್ನು ನಿತ್ಯದ ಬದುಕಿನ ಭಾಗವಾಗಿಸಿಕೊಳ್ಳಿ. ಎರಡನೆಯದು, ಯೋಗವನ್ನು ಜೀವನದ ಭಾಗವಾಗಿಸಿ ಮತ್ತು ಅಂತಿಮವಾಗಿ, ಮಾತೃಭಾಷೆ, ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಕನಿಷ್ಠ ಒಂದು ಭಾಷೆಯನ್ನಾದರೂ ಕಲಿಯಿರಿ. ಇದು ನಿಮ್ಮ ಜೀವನಕ್ಕೆ ಹೊಸ ಚೈತನ್ಯ ತುಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಲಾಂಗೆವಾಲಾ ಯುದ್ಧವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು ಕಾರ್ಯತಂತ್ರದ ಯೋಜನೆ ಮತ್ತು ಸೇನಾ ಶೌರ್ಯದ ಅಧ್ಯಾಯದಲ್ಲಿ ಈ ಯುದ್ಧ ಯಾವಾಗಲೂ ನೆನಪಿನಲ್ಲಿರುತ್ತದೆ ಎಂದು ಹೇಳಿದರು. ಪಾಕಿಸ್ತಾನದ ಸೈನ್ಯವು ಬಾಂಗ್ಲಾದೇಶದ ಮುಗ್ಧ ನಾಗರಿಕರನ್ನು ಭಯಭೀತಗೊಳಿಸುತ್ತಿದ್ದ ಮತ್ತು ಹೆಣ್ಣುಮಕ್ಕಳು ಮತ್ತು ಸಹೋದರಿಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಸಮಯದಲ್ಲಿ ಪಾಕಿಸ್ತಾನದ ವಿಕೃತ ಮುಖವನ್ನು ಬಹಿರಂಗವಾಗಿತ್ತು ಎಂದು ಅವರು ಹೇಳಿದರು. ಜಗತ್ತಿನ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ಪಶ್ಚಿಮದ ಗಡಿಯಲ್ಲಿ ಮುಂಪಡೆ ತೆರೆಯಿತು ಆದರೆ ನಮ್ಮ ಪಡೆಗಳು ಅವರಿಗೆ ತಕ್ಕ ಉತ್ತರವನ್ನು ನೀಡಿದವು ಎಂದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಪಂಪ್‌ವೆಲ್‌ ಫ್ಲೈಓವರ್‌: ಮಾತು ತಪ್ಪಿದ ನವಯುಗ ಕಂಪನಿ ವಿರುದ್ಧ ಟೋಲ್ ಗೇಟ್ ಪ್ರತಿಭಟನೆ

Upayuktha

ಭಾರತೀಯ ಅಧಿಕಾರಿಗಳ ನಾಪತ್ತೆ ಪ್ರಕರಣ: ಪಾಕಿ‌ಗೆ ವಿದೇಶಾಂಗ ಸಚಿವಾಲಯ ತೀಕ್ಷ್ಣ ಎಚ್ಚರಿಕೆ

Upayuktha

ಮಂಗಳೂರು ನಗರಕ್ಕೆ ಬಂದ ಕಾಡುಕೋಣಗಳು; 2 ದಿನ ಹಿಂದೆ ಎಂಆರ್‌ಪಿಎಲ್‌ಗೆ ಬಂದಿತ್ತು ಚಿರತೆ

Upayuktha