ದೇಶ-ವಿದೇಶ ಪ್ರಮುಖ

ಕೊರೊನಾ ವಿರುದ್ಧ ಸಮರದಲ್ಲಿ ಧೈರ್ಯವೇ ಸರ್ವತ್ರ ಸಾಧನ; ಲಸಿಕೆ ಅಭಿಯಾನ ಇನ್ನಷ್ಟು ತ್ವರಿತಗೊಳಿಸಿ: ಪ್ರಧಾನಿ ಮೋದಿ ಕರೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ವಿಶೇಷ ಪ್ರಸಾರ ಭಾಷಣ ಮಾಡಿ, ಕೊರೊನಾ ಮಹಾಮಾರಿ ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ಧೈರ್ಯವೇ ಸರ್ವತ್ರ ಸಾಧನ ಎಂದು ನುಡಿದರು.

ಜಾಗರೂಕವಾಗಿರಬೇಕು, ಜತೆಗೆ ಧೈರ್ಯವೂ ಬೇಕು. ಹೀಗೆ ಹೋರಾಡಿದಲ್ಲಿ ಭಾರತ ಕೊರೊನಾ ವಿರುದ್ಧ ಆದಷ್ಟು ಬೇಗನೆ ಸಂಪೂರ್ಣ ವಿಜಯ ಸಾಧಿಸಬಹುದು ಎಂದು ಅವರು ನುಡಿದರು.

ದೇಶದ ಲಸಿಕೆ ಕಾರ್ಯಕ್ರಮವನ್ನು ಇನ್ನಷ್ಟು ತ್ವರಿತಗೊಳಿಸುವಂತೆ ರಾಜ್ಯಗಳಿಗೆ ಕರೆ ನೀಡಿದ ಅವರು, ಮೇ 1ರಿಂದ 18 ವರ್ಷ ದಾಟಿದವರೆಲ್ಲರಿಗೂ ಲಸಿಕೆ ವಿತರಣೆ ಆರಂಭಿಸಲಾಗುವುದು ಎಂದು ಪ್ರಕಟಿಸಿದರು.

ಜನರ ಸಹಭಾಗಿತ್ವದೊಂದಿಗೆ ನಾವು ಶೀಘ್ರವೇ ಈ ವಿಜಯವನ್ನು ಸಾಧಿಸುತ್ತೇವೆ ಎಂದು ಪ್ರಧಾನಿ ಹೇಳಿದರು.

ಜಗತ್ತಿನ ಅತಿದೊಡ್ಡ ಲಸಿಕಾ ಕಾರ್ಯಕ್ರಮ ಇದಾಗಿದ್ದು, ಆದಷ್ಟು ಶೀಘ್ರವೇ ಈ ಅಭಿಯಾನವನ್ನು ಪೂರ್ಣಗೊಳಿಸಿದರೆ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ನಮ್ಮ ದೇಶದಿಂದ ಹೊಡೆದೋಡಿಸಬಹುದು ಎಂದು ಪ್ರಧಾನಿ ನುಡಿದರು.

ಕಳೆದ ವರ್ಷ ಕೊರೊನಾ ಸಾಂಕ್ರಾಮಿಕ ಮೊದಲ ಬಾರಿಗೆ ದೇಶದಲ್ಲಿ ಹರಡಲು ಆರಂಭವಾದಾಗ ನಮ್ಮಲ್ಲಿ ಅದರ ವಿರುದ್ಧ ಹೋರಾಡುವ ಮೂಲ ಸೌಕರ್ಯಗಳು ಅಭಿವೃದ್ಧಿಯಾಗಿರಲಿಲ್ಲ. ಆದರೆ ವ್ಯವಸ್ಥಿತವಾದ ಮತ್ತು ತ್ವರಿತ ಕ್ರಮಗಳಿಂದಾಗಿ ಪಿಪಿಇ ಕಿಟ್‌ಗಳನ್ನು ನಮ್ಮಲ್ಲೇ ತಯಾರಿಸಲಾಯಿತು. ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಯಿತು. ಜತೆಜತೆಗೇ ಲಸಿಕೆಯನ್ನೂ ಅಭಿವೃದ್ಧಿಪಡಿಸಿ ಜನತೆಗೆ ವಿತರಿಸುವ ಕ್ರಮ ಕೈಗೊಳ್ಳಲಾಯಿತು.

ಇಂದು ನವರಾತ್ರಿಯ ಕೊನೆಯ ದಿನ. ನಾಳೆ ರಾಮನವಮಿ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನ. ಈ ಸಂಕಟದ ಸಮಯದಲ್ಲಿ ಕೊರೊನಾದಿಂದ ರಕ್ಷಿಸಿಕೊಳ್ಳಲು ಲಸಿಕೆಯೂ ಬೇಕು, ಜಾಗರೂಕತೆಯೂ ಬೇಕು ಎಂದು ಪ್ರಧಾನಿ ನುಡಿದರು.

ದೇಶದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಹೇರುವ ಪ್ರಮೇಯವಿಲ್ಲ. ಅಂತಹ ಸನ್ನಿವೇಶವನ್ನು ನಾವೂ ತಂದುಕೊಳ್ಳಬಾರದು. ಸ್ಥಳೀಯ ಮಟ್ಟದಲ್ಲಿ ಮೈಕ್ರೋ ಕಂಟೈನ್ಮೆಂಟ್‌ ವಲಯಗಳನ್ನು ಮಾತ್ರ ಅಗತ್ಯಕ್ಕೆ ತಕ್ಕಂತೆ ಘೋಷಿಸಬಹುದು ಎಂದು ಅವರು ನುಡಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ತಮಿಳುನಾಡು: ಖಾಸಗಿ ಬಸ್ಸೊಂದು ವಿದ್ಯುತ್ ತಂತಿಗೆ ತಗುಲಿ ; 5 ಮಂದಿ ಸಾವು

Harshitha Harish

ಜಮ್ಮು-ಕಾಶ್ಮೀರ ಪರಿಸ್ಥಿತಿ ಸುಧಾರಣೆ: 7,000ಕ್ಕೂ ಅಧಿಕ ಅರೆಸೇನಾ ಪಡೆಗಳ ವಾಪಸಿಗೆ ನಿರ್ಧಾರ

Upayuktha

ಉತ್ತರ ಭಾರತದ ಹೆಸರಾಂತ ಶಿಕ್ಷಣ ಸಂಸ್ಥೆ ಎಲೆನ್ ಇದೀಗ ಮಂಗಳೂರಿನಲ್ಲಿ

Upayuktha