ದೇಶ-ವಿದೇಶ

ಹೈದರಾಬಾದ್; ಕೊರೊನಾ ಲಸಿಕಾ ಕೇಂದ್ರಕ್ಕೆ ಮೋದಿ ಭೇಟಿ

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಖುದ್ದಾಗಿ ಅವಲೋಕನ ನಡೆಸುತ್ತಿದ್ದಾರೆ.

ಹಾಗೂ ಹೈದರಾಬಾದಿನಲ್ಲಿರುವ ಕೊರೊನಾ ಲಸಿಕೆ ಅಭಿವೃದ್ಧಿ ಕೇಂದ್ರ ಭಾರತ್ ಬಯೋಟೆಕ್‌ ಗೆ ಭೇಟಿ ನೀಡಿದ್ದಾರೆ.

ಈ ಮೊದಲು ಅಹಮದಾಬಾದಿನಿಂದ 20 ಕಿ.ಮೀ ದೂರದಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್‌ ಗೆ ತೆರಳಿ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಝೈಡಸ್ ಕ್ಯಾಡಿಲಾ ಕಂಪನಿಯು ಈಗಾಗಲೇ ಕೊರೋನಾಗೆ ಝೈಕೋವಿಡ್-ಡಿ ಎಂಬ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಅದು 2ನೇ ಹಂತ ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ.

ಮೋದಿ ಹೈದರಾಬಾದ್’ನಿಂದ 50 ಕಿ.ಮೀ ದೂರದ ಹಕೀಂಪೇಟ್ ನಲ್ಲಿರುವ ಭಾರತ್ ಬಯೋಟೆಕ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುಣೆಗೆ ತೆರಳಲಿ ಅಲ್ಲಿ ಸೆರಮ್ ಸಂಸ್ಥೆಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಲಸಿಕೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

Related posts

ಅಂಕೋಲ ಬಳಿ ಕಾರು ಅಪಘಾತ: ಕೇಂದ್ರ ಆಯುಷ್‌ ಸಚಿವ ಶ್ರೀಪಾದ ನಾಯಕ್‌ಗೆ ಗಂಭೀರ ಗಾಯ, ಸಚಿವರ ಪತ್ನಿ ಸಹಿತ ಇಬ್ಬರು ಮೃತ್ಯು

Upayuktha

ತಾಂಜೇನಿಯಾ ಅಧ್ಯಕ್ಷ ಜಾನ್ ಮಗುಪುಲಿ ನಿಧನ

Harshitha Harish

11 ಮಂದಿ ಭಾರತೀಯ ಮೀನುಗಾರರ ಬಂಧನ

Harshitha Harish