ಕತೆ-ಕವನಗಳು

ಕವನ: ಅರ್ಘ್ಯವನು ಸ್ವೀಕರಿಸಿ ಹರಸು ಶ್ರೀಕೃಷ್ಣ

ದೇವಕಿಯ ಉದರದಲಿ ಜನಿಸಿದೆಯ ಕೃಷ್ಣ
ಯಶೋದೆಯ ಮಡಿಲಲಿ ಜನಿಸಿದೆಯ ಕೃಷ್ಣ

ಪೂತನಿಯ ಮೊಲೆಯನು ಹೀರಿದೆಯ ಕೃಷ್ಣ
ದುರುಳ ರಕ್ಕಸರನ್ನು ತರಿದೆಯ ಕೃಷ್ಣ

ಮುರಳಿಯ ಗಾನವನು ನುಡಿಸಿದೆಯ ಕೃಷ್ಣ
ರಾಧೆಯ ಮನವನು ಸೆಳೆದೆಯ ಕೃಷ್ಣ

ಗೋವರ್ಧನ ಗಿರಿಯನು ಎತ್ತಿದೆಯ ಕೃಷ್ಣ
ಕಾಳಿಂಗನ ಹೆಡೆಮೆಟ್ಟಿ ಕುಣಿದೆಯ ಕೃಷ್ಣ

ದುಷ್ಟ ಕಂಸನ ಸಂಹಾರ ಮಾಡಿದೆಯ ಕೃಷ್ಣ
ಹೆತ್ತವರ ಸೆರೆಯಿಂದ ಬಿಡಿಸಿದೆಯ ಕೃಷ್ಣ

ಕರಮುಗಿವೆ ನಿನಗಿಂದು ಬರುವೆಯ ಕೃಷ್ಣ
ಅರ್ಘ್ಯವನು ಸ್ವೀಕರಿಸಿ ಹರಸುವೆಯ ಕೃಷ್ಣ

-ಗಾಯತ್ರಿ ಪಳ್ಳತ್ತಡ್ಕ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕವನ: ರೋಗಾಣು

Upayuktha

ಸಂಕ್ರಾಂತಿಗೆ ಸಮ್-ಕ್ರಾಂತಿಯಾಗಲಿ

Harshitha Harish

ದುಃಖ

Harshitha Harish