ಕತೆ-ಕವನಗಳು ಧರ್ಮ-ಅಧ್ಯಾತ್ಮ

ಕವನ- ನಮನ: ದೀನ ಬಂಧು ಕರುಣಾ ಸಿಂಧು

(ಚಿತ್ರ ಕೃಪೆ: ಟೆಂಪಲ್ ಪುರೋಹಿತ್)

ಪಾಂಚಾಲಿ ಸೀರೆಯನು
ಇಂಚಿಂಚು ಹಿಡಿದೆಳೆದ
ಪಂಚ ಪಾಂಡವರೆದುರು ದುಃಶಾಸನ
ಹೊಂಚ್ಹಾಕಿ ಕುರು ಸುತರು
ವಂಚನೆಯ ಮಾಡುತ್ತ
ಸಂಚಿನಲಿ ಕೆಡಹಿದರು ಯುಧಿಷ್ಟಿರನ

ಅಂಧ ಕುರು ಅರಸನದೆ
ಹಂಗಿಹುದು ಗುರುಗಳಿಗೆ
ಬಂದಿಯಾಗಿಹ ವೃದ್ಧ ಅನ್ನ ಋಣಕೆ
ಎಂದಿಗೂ ವಿದುರ ನುಡಿ
ನಿಂದಿಸುತ ಕುರುಡು ದೊರೆ
ನಂದಲಾರದ ಕಿಡಿಯ ಇಟ್ಟ ಕುಲಕೆ

ಇತ್ತ ಶಕುನಿಯ ತಂತ್ರ
ಮತ್ತೆ ಧರ್ಮದ ಮಂತ್ರ
ಎತ್ತಲೂ ಪಾಂಡವರ ದಮನ ಸೂತ್ರ
ಅತ್ತ ಆ ಕರ್ಣನೂ
ಸುತ್ತಿಹನು ಕುರು ಕುಲಕೆ
ಎತ್ತ ಸಾಗುತ್ತಿಹುದು ಈ ಧರ್ಮ ಪಾತ್ರ

ದುರ್ಯೋಧನನ ಅಣತಿ
ದುರ್ಮಾರ್ಗ ತೋರುತಿದೆ
ದುರ್ವೃತ್ತಿಯಲಿ ನಡೆವ ಸೋದರರಿಗೆ
ದುರ್ದೈವವೆಂಬಂತೆ
ಪರ್ಯಾಪ್ತವಾಗಿಹುದು
ದುರ್ಯೋಧನನ ವಾಕ್ಯ ಪರಿಪಾಲನೆ

ಕಟ್ಟಿ ಹಾಕಿದೆ ಧರ್ಮ
ಕೆಟ್ಟ ಗಳಿಗೆಯಲಂದು
ದಿಟ್ಟರಾಗಿರುವಂಥ ಪಾಂಡವರನು
ಅಟ್ಟಾಡಿಸಿಯೆ ಕೊಲುವ
ಜಟ್ಟಿಯಾದರು ಭೀಮ
ರಟ್ಟೆಯನು ಅರಳಿಸದೆ ಮುದುಡಿದ್ದನು

ಗಂಡಂದಿರೆಲ್ಲರೂ
ಕಂಡು ಕಾಣದ ತೆರದಿ
ಶಂಢನಂತಿರಲಾಗಿ ಪಾಂಚಾಲಿಯು
ಕಂಡು ಆ ಕೇಶವನ
ಗಂಡುಗಲಿ ನೀನವರ
ಚೆಂಡಾಡಿ ಮತ್ತೆನ್ನ ಸಲಹೆಂದಳು.

ಪಂಚ ಭೂತಕು ಹಿರಿಯ
ಪಾಂಚಜನ್ಯದ ಒಡೆಯ
ಪಾಂಚಾಲಿ ಮಾನವನು ಕಾಯ್ದನಂದು
ಮಿಂಚಂತೆ ಶೀಘ್ರದಲಿ
ಕೊಂಚವೂ ತಡೆ ಇರದೆ
ಸಂಚಿಂದ ಕಾದಿಹನು ದೀನ ಬಂಧು.
***********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಆಚಾರ್ಯ ಶಂಕರರು: ಎಳೆ ವಯಸ್ಸಿನಲ್ಲೇ ಸಮಾಜಕ್ಕೆ ಅದ್ವೈತದ ಬೆಳಕು ತೋರಿದ ಮಹಾನ್ ಚೇತನ

Upayuktha

ತ್ರಿವರ್ಣ ಧ್ವಜದ ಭಾವ

Upayuktha

ಕವನ: ವರ್ಷಧಾರೆ

Upayuktha
error: Copying Content is Prohibited !!