ಕತೆ-ಕವನಗಳು

ಕವನ: ಸ್ವಾತಂತ್ರೋತ್ಸವ

ಸ್ವಾತಂತ್ರ್ಯ ಸಂಗ್ರಾಮ ನಡೆಯಿತಂದು.
ಪ್ರಾಣ ತೆತ್ತರು ಹಲವು ವೀರರಂದು.
ರಾಜ ಮಹಾರಾಜರು ಹೋರಾಡಿ
ಮಡಿದರು.
ಸ್ವಾತಂತ್ರ್ಯ ದ ಕನಸು ಕಂಡರಂದು.

ಸತ್ಯದ ಹಾದಿಯಲಿ ನಡೆದರು.
ಅಹಿಂಸೆಯಾ ತತ್ವವನು ತೋರಿದರು.
ಧರ್ಮದ ಮಾರ್ಗದಲಿ ಹೋರಾಡಿ
ಸ್ವಾತಂತ್ರ್ಯ ಸಂಗ್ರಾಮಕೆ ಧುಮುಕಿದರು.

ಎಲ್ಲರೂ ಒಂದುಗೂಡಿದರು.
ಸತ್ಯಾಗ್ರಹವನು ಮಾಡಿದರು.
ಪಾದಯಾತ್ರೆಯಾ ಮಾಡಿ ಜನರಲಿ
ವಿಶ್ವಾಸವನು ತುಂಬಿದರು.

ಸ್ವದೇಶಿ ಚಳುವಳಿ ಮಾಡಿದರು
ಅಸಹಕಾರವ ತೋರಿದರು.
ಆಂಗ್ಲರ ಗುಂಡಿಗೆ ಎದೆಯೊಡ್ಡಿ
ದಾಸ್ಯಕೆ ಮುಕ್ತಿಯ ನೀಡಿದರು.

ಸ್ವಾತಂತ್ರ್ಯ ದಿನದ ಸಂಭ್ರಮವು
ತಂದಿದೆ ನಮಗೆ ಆನಂದವು.
ಹೋರಾಟ ಮಾಡಿದ ಮಹನೀಯರ
ನೆನೆಯುತ ಅವರಿಗೆ ನಮಿಸುವೆವು.

‌‌ ಗಾಯತ್ರಿ. ಪಳ್ಳತ್ತಡ್ಕ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕವಿತೆ: ನಿನ್ನೊಲವಿನ ಕುಬೇರ

Upayuktha

*ಯಾರು ನಾನು*

Harshitha Harish

ಹವ್ಯಕ ಕವಿತೆ: ಇಡ್ಕುತ್ತವು ಎಲ್ಲೋರು ಕಲ್ಲು ಹಣ್ಣಿಂಗೆ

Upayuktha

Leave a Comment

error: Copying Content is Prohibited !!