ಕತೆ-ಕವನಗಳು

ಕವನ: ಕನ್ನಡ ರತ್ನ

ವಿಶ್ವೇಶ್ವರಯ್ಯರ ಜನುಮದಿನದ ಸಡಗರ
ನಿಮ್ಮ ಹೆಗ್ಗುರುತಿಗೆ ಸಾಕ್ಷಿ ಕೃಷ್ಣರಾಜಸಾಗರ
ದಿವಾನರಾಗಿದ್ದಾಗ ಆಯ್ತು ಕರುನಾಡು ಶೃಂಗಾರ
ಮೂಡಿತು ಬಯಲ ತುಂಬಾ ಹಸಿರ ಮಡಿಲ ಮಂದಿರ

ಕನ್ನಡನಾಡಿನ ಕೀರ್ತಿಪತಾಕೆ ಹಾರಿಸಿದ ಹೆಗ್ಗಳಿಕೆ
ಹೊಸ ಹೊಸ ತಂತ್ರಜ್ಞಾನಕ್ಕೆ ಸಾಕ್ಷಿ ನಿಮ್ಮ ಬತ್ತಳಿಕೆ
ಕನ್ನಡಿಗರು ಮರೆಯುವಂತಿಲ್ಲ ನಿಮ್ಮ ಸಾಧನೆ
ನಾವು ಮರೆಯುವಂತಿಲ್ಲ ನೀವು ಕೈಗೊಂಡ ಯೋಜನೆ ಯೋಚನೆ

ಭಾರತ ರತ್ನ ಪಡೆದ ಹೆಮ್ಮೆಯ ಕನ್ನಡಿಗ
ಶತಮಾನ ಕನ್ನಡ ನಾಡ ಕಂಡ ಹಿರಿಮಗ
ಹಚ್ಚಿರುವಿರಿ ಈ ನಾಡಲ್ಲಿ ಹೊಸತನದ ದೀಪ
ಅದು ಇಂದಿಗೂ ಬೆಳಗುತ್ತಿದೆ ಆ ನಂದಾದೀಪ

-ಗಿರೀಶ್ ಪಿಎಂ
ವಿವಿ ಕಾಲೇಜು ಮಂಗಳೂರು

 

Related posts

ಮೂಕ ಹೆಣ್ಣು

Harshitha Harish

🙏 ರಕ್ಷಾ ಬಂಧನ 🙏

Upayuktha

ಆಶು ಕವನ: ಯೋಗ-ಭೋಗ

Upayuktha

Leave a Comment

error: Copying Content is Prohibited !!