ಕತೆ-ಕವನಗಳು

ಕವನ: ಕನಸುಗಳಿಗೆ ಬಡತನವಿಲ್ಲ

ಹರೆಯದ ಹುಡುಗನ ಮುಗ್ಧ ಪ್ರೇಮದ ಒಂದು ಮೆಲುಕು ಈ ರೀತಿ ಇರಬಹುದೆಂಬ ಕಲ್ಪನೆಯಲ್ಲಿ ಮೂಡಿಬಂದ ಒಂದು ಕವನವಿದು.

ಹಾಡಿದವರು: ಶಾರ್ವರಿ ಬಿ. ಸಹಸ್ರಬುಧ್ಯೆ ಮುಂಡಾಜೆ.
ರಚನೆ ಮತ್ತು ರಾಗ ಸಂಯೋಜನೆ: ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

(ಚಿತ್ರ ಕೃಪೆ: ಪಿಎಸ್ ಐಲವ್‌ಯೂ)

ಕನಸುಗಳಿಗೆ ಬಡತನವಿಲ್ಲ
********
ಕಾದಿರುವೆ ಚೆಲುವೆ ನಾ ನಿನಗಾಗಿ ಹಗಲಿರುಳು.
ಕಾತರಿಸುತಿದೆ ಮನ ನೋಡಲಾ ಮುಂಗುರುಳು.
ಕಾಡುತಿವೆ ನನಗ್ಯಾಕೋ ಕಾಡಿಗೆಯ ಕಣ್ಣುಗಳು
ಕಾರಣವೆ ಸಿಗದೆನಗೆ ನಿನ್ನನ್ನುಪೇಕ್ಷಿಸಲು.

ಇಂದೇಕೊ ನೆನಪುಗಳು ಸುತ್ತಿಹವು ನನ್ನೊಳಗೆ
ಮುಂದಡಿಯ ಇಡಲಾರೆ ಬಂದಿಯಾದೆನು ನಾನು
ಸಂದಿಹವು ವರುಷಗಳು ಕಾಲಗರ್ಭದ ಒಳಗೆ
ಇರಬಹುದು ಹತ್ತಾರು ಲೆಕ್ಕವಿಟ್ಟವರಾರು

ಕಣ್ಣಲ್ಲೆ ಮಾತಾಡಿ ಮೌನದಲಿ ಕಥೆ ಬರೆದು
ಮನಸಲ್ಲೆ ಅನುಭವಿಸಿ ಹೃದಯವನೆ ಕೊಟ್ಟಿದ್ದೆ
ಬಡತನದ ಅರಿವಿಲ್ಲ ಸಿರಿತನವ ಕಂಡಿಲ್ಲ
ಒಡಲ ಒಳಗಿನ ಪ್ರೀತಿ ಇದನೇನು ಬಯಸಿಲ್ಲ.

ಭಾವಗೀತೆ: ಕನಸುಗಳಿಗೆ ಬಡತನವಿಲ್ಲ

ಕಾಲುದಾರಿಯಲಂದು ಹೊರಟಿದ್ದೆ ಜಾತ್ರೆಗೆ
ಕಾಲ್ಮರಿಯೆ ಇಲ್ಲದೆಯೆ ಬರಿಗಾಲ ನಡೆಯಲ್ಲಿ
ಕಾಣಬೇಕೆಂದಲ್ಲ ಗುಡಿಯ ಆ ದೇವರನು
ಕಾಣಲೇಬೇಕೆಂದು ಚೆಲುವೆ ನಾ ನಿನ್ನನ್ನು

ನಮ್ಮೂರ ಜಾತ್ರೆಯಲಿ ನೀ ಬರೆದ ರಂಗೋಲಿ
ಬಿಡಿಸಿತ್ತು ಚಿತ್ತಾರ ನನ್ನಂತರಂಗದಲಿ.
ನನಗಿಂತ ಆ ಬಣ್ಣದದೃಷ್ಟ ಬಲು ಹಿರಿದು
ಸಲಿಗೆಯಲಿ ನಲಿದಿತ್ತು ಆ ಬೆರಳ ತುದಿಗಳಲಿ.

ಮೆಚ್ಚುಗೆಯ ಇತ್ತಿದ್ದೆ ನಿನ್ನ ಕಲೆಗಾರಿಕೆಗೆ
ಅದನರಿತು ನನ್ನತ್ತ ಕುಡಿನೋಟ ಬೀರಿದ್ದೆ
ನಿನಗಂದು ನನ್ನಲ್ಲಿ ಒಲವು ಬಹಳವೇ ಇತ್ತು
ಆದರೂ ನಿನಗ್ಯಾಕೊ ಕಾಡಿತ್ತು ಅಂತಸ್ತು..
***********
– ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

60ರ ನಂತರ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ನೆನಪಿರಬೇಕು ಈ ವಿಷಯಗಳು

Upayuktha

ಅಟಲ್‌ 95: ನುಡಿನಮನ

Upayuktha

ಜೀವನ

Harshitha Harish