ಚಂದನವನ- ಸ್ಯಾಂಡಲ್‌ವುಡ್ ದೇಶ-ವಿದೇಶ ನಿಧನ ಸುದ್ದಿ

ಮಲಯಾಳಂ ಚಿತ್ರರಂಗ ದ ಖ್ಯಾತ ಸಾಹಿತಿ ಮತ್ತು ಕವಿ ಅನಿಲ್ ಪಣಚೂರನ್ ನಿಧನ

ತಿರುವನಂತಪುರಂ: ತೀವ್ರ ಹೃದಯಾಘಾತದಿಂದ ಮಲಯಾಳಂ ಚಿತ್ರರಂಗದ ಖ್ಯಾತ ಸಾಹಿತಿ ಮತ್ತು ಕವಿ ಅನಿಲ್ ಪಣಚೂರನ್ (55ವ) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನಿಲ್ ಅವರು ಕೊರೊನಾ ವೈರಸ್ ಚಿಕಿತ್ಸೆಗೆ ದಾಖಲಾಗಿದ್ದರು. ಇದೀಗ ಪತ್ನಿ ಮಾಯಾ ಮತ್ತು ಪುತ್ರಿ ಉನ್ನಿಮಾಯಾ ಅವರನ್ನು ಅಗಲಿದ್ದಾರೆ.

ಅನಿಲ್ ಅವರ ಸಾಹಿತ್ಯ ಮಲಯಾಳಿಗಳ ಹೃದಯ ಮತ್ತು ಮನಸ್ಸಿನಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಉಳಿಯುತ್ತದೆ.

ಇಂದು ಅಪರಾಹ್ನ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

ಅನಿಲ್ ಅವರು ಬರೆದ 2017ನೇ ಸಾಲಿನ ಚಿತ್ರ ವೆಲ್ಲಿಪಡಿಂಟೆ ಪುಸ್ತಕಮ್ ಸಿನೆಮಾದ ಜಿಮ್ಮಿಕ್ಕಿ ಕಮ್ಮಲ್ ಹಾಡು ಬಹಳ ಪ್ರಸಿದ್ಧಿಯಾಗಿತ್ತು.

Related posts

ಹಿಂದೂ ಮಹಾಸಾಗರದಲ್ಲಿ ಚೀನೀ ನೌಕೆಗಳ ಗಸ್ತು

Upayuktha

ನಿಧನ: ಕೃಷ್ಣರಾಜ ಶೆಟ್ಟಿ

Upayuktha

190 ಮಂದಿ ಪ್ರಯಾಣಿಕರಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕೋಯಿಕ್ಕೋಡ್ ಏರ್‌ಪೋರ್ಟ್‌ನಲ್ಲಿ ಪತನ

Upayuktha