ಕತೆ-ಕವನಗಳು

ಕವನ: ನಿನಗಿದೋ ಶತನಮನ

ಪ್ರಾತಿನಿಧಿಕ ಚಿತ್ರ (ಕೃಪೆ: ಬಿಸಿನೆಸ್ ಟುಡೇ.ಇನ್)

ಅನ್ನವ ನೀಡುವ ಕಾಯಕ ಮಾಡುವ
ನಿನ್ನಯ ಬೆವರದು ನೆಲದಲಿ ಬೀಳಲು
ಚೆನ್ನದಿ ಬೆಳೆಯನು ನೀಡುತ ಭೂಮಿಯು
ಜೀವಿಗಳೆಲ್ಲವ ಸಲಹುವಳು.

ನಿನ್ನೆಯ ಇಂದಿನ ಅಂತೆಯೆ ನಾಳೆಯ
ಚಿಂತೆಯು ಇರುವುದು ದುಡಿಯುವ ರೈತಗೆ
ಅಂತೆಯೆ ನಿಜದಲಿ ಭೂತಾಯಿಯ ಮಗ
ನೀನಲ್ಲದೆ ಅನ್ಯರು ಉಂಟೆ.

ನಸುಕಿನ ಚಳಿಯಲಿ ಬೆಚ್ಚನೆ ಮಲಗದೆ
ಬಿಸಿಲಿನ ತಾಪಕೆ ತಂಪನು ಬಯಸದೆ
ಅಸಹಜ ಮಳೆಗೂ ಬಿರುಸಿನ ಗಾಳಿಗೂ
ಎದೆಗುಂದದೆಯೇ ನೀನಿರುವೆ

ಉಸಿರಿರುವ ತನಕ ಬಳಲಿಕೆ ಸಹಿಸುತ
ಹಸಿರಿನ ಜತೆಯಲೆ ಬದುಕನು ಕಟ್ಟುತ
ಹೆಸರಿನ ಹಂಗಿಗೆ ಒಳಗಾಗದೆಯೇ
ದ್ವಂದ್ವವ ಮೀರಿದ ಅಭಿಮಾನಿ….
******
ನಿನಗಿದೋ ಶತ ನಮನ

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

*ಹೃದಯಾಂತರಳಾದ ಕನ್ನಡದಾರತಿ*

Harshitha Harish

ಹಿಂಗೇ ಇರು

Harshitha Harish

ಕಥೆ: ಆ ಒಂದು ಮಾತು ಅವನ ಜೀವನ ಬದಲಿಸಿತ್ತು, ಅದೇ ಮಾತು ಇವನ ಜೀವನ ಮುಗಿಸಿತ್ತು…

Upayuktha