ಕತೆ-ಕವನಗಳು

ಚಿತ್ರಕವನ: ಮಗುವಿನ ಎಚ್ಚರಿಕೆ

ಕೋಲು ಹಿಡಿದು ನಿಂದ ಕಂದನು
ತೋರು ಬೆರಳ ತೋರಿಕೊಂಡು
ಗದರುತಿಹನು ಹೊರಗೆ ಬರುವ
ಜನರನ್ನಿಂದು ನೋಡಿರಿ ||

ಮಾರಿ ಕೊರೋನಾ ಹರಡುತಿಹುದು
ದೂರದೂರವೆ ನಿಂತುಕೊಳ್ಳಿರಿ
ಬಾರಿಬಾರಿ ಹೇಳುತಿರುವೆವು
ಮೋರೆ ಕವಚವ ಧರಿಸಿರಿ ||

ಮನೆಯ ಒಳಗೆಯೆ ಇದ್ದು ನೀವು
ಇರುವ ಕೆಲಸವ ಮಾಡಿ ಚೊಕ್ಕದಿ
ಕುಂಟು ನೆಪವ ಹೇಳಿಕೊಂಡು
ಹೊರಗೆ ಬಂದರೆ ಜಾಗ್ರತೆ !!

ಮಗುವಿಗಿರುವ ವಿವೇಕಬುದ್ದಿಯು
ಮನುಜಗದುವೆ ಏಕೆ ಇಲ್ಲವೊ
ಅನುಜ ತನುಜರೆಲ್ಲರೊಡನೆ
ಕೂಡಿ ಬಾಳಿರಿ ಗೃಹದಲಿ ||

-ರೂಪಾಪ್ರಸಾದ ಕೋಡಿಂಬಳ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

*ಬಾಳ ಪಯಣ*

Harshitha Harish

ಹವ್ಯಕ ಕವನ: ಮಜ್ಜಿಗೆನೀರು

Upayuktha

*ಸ್ಕಂದ ಮಾತೆ*

Harshitha Harish