ಆರೋಗ್ಯ ಕತೆ-ಕವನಗಳು

ಬಂದಿದೆ ಕೊರೋನಾ: ಇರಲಿ ಜೋಪಾನ…

ಮಂಜೇಶ್ವರದ ಖ್ಯಾತ ಕುಟುಂಬ ವೈದ್ಯರು, ಸಾಹಿತಿ, ಕವಿ ಡಾ. ರಮಾನಂದ ಬನಾರಿ ಅವರು ಕವನದ ಮೂಲಕ ಕೊರೊನಾ ಜಾಗೃತಿ ಸಂದೇಶವನ್ನು ಸರಳವಾಗಿ ಮನಮುಟ್ಟುವಂತೆ ಕವನದ ಮೂಲಕ ನೀಡಿದ್ದಾರೆ. ಓದಿ…:

ಊರಿಗೆ ಬಂತು ಮಾರಿಯ ಹಾಗೆ
ಹೊಸಕಾಯಿಲೆಯೊಂದು
ಚೀನದಿ ಹುಟ್ಟಿ ದೇಶದೇಶದೊಳ
ವ್ಯಾಪಿಸುತಿಹುದಿಂದು

ಶ್ವಾಸೋಚ್ಛ್ವಾಸದಿ ವಿರಸವೆಬ್ಬಿಸುವ
“ವೈರಸು” ಎನುವಂಥ
ಕೋವಿದ-19 ರ ಹೆಸರಿನ
ಕೊರೊನಾ ಬಲವಂತ

ಅಣುವಿಗಿಂತಲಣು ವಾಯುವೇಗದಲಿ
ಸಂಚರಿಸುತ್ತಿಹುದು
ಸಂಪರ್ಕಕೆ ಬರೆ ವಾಯುಮಾರ್ಗದಲಿ
ಹಬ್ಬಿಕೊಳ್ಳಬಹುದು
ಎಚ್ಚರ ಎಚ್ಚರ ಮೂಗು ಬಾಯಿಗಿದೊ
ಕವಚ ಧರಿಸಿಕೊಳ್ಳಿ

ಏನಾದರೂ ಸರಿ ಕರವಸ್ತ್ರವು ಸರಿ
ಮುಖವ ಮುಚ್ಚಿಕೊಳ್ಳಿ
ಸೋಪು ಅಥವಾ ಕ್ರಿಮಿನಾಶಕದಲಿ
ಕೈಯ ತೊಳೆದುಕೊಳ್ಳಿ

ಇಬ್ಬರ ನಡುವೆ ಮೂವರ ನಡುವೆ
ಅಂತರವಿರಬೇಕು
ಯಾವ ಕಾರಣಕು ಗುಂಪು ಸೇರದಿರಿ
ದೂರ ನಿಲ್ಲಬೇಕು

ಇಚ್ಛಾಶಕ್ತಿಯು ಜ್ಷಾನಶಕ್ತಿಯು
ಒಂದಾಗಿರಬೇಕು
ಕ್ರಿಯಾಶಕ್ತಿಯಲಿ ಶಕ್ತಿ ತುಂಬಲಿಕೆ
ಶಕ್ತಿ ಹರಸವೇಕು

– ಡಾ|| ರಮಾನಂದ ಬನಾರಿ
ಮಂಜೇಶ್ವರ, ಕಾಸರಗೋಡು
ಮೊ: 9446297226

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಪ್ಲೇಟ್‌ಲೆಟ್ ನೀಡಿ, ಪ್ರಾಣ ಉಳಿಸಿ…

Upayuktha

ಕೊರೊನಾ ವೈರಸ್‌ ಕುರಿತ ಸಂದೇಹ- ಸಮಾಧಾನ (FAQs): ಆತಂಕ ಬೇಡ, ಕಾಳಜಿ ಇರಲಿ

Upayuktha

ವಿಶ್ವ ನಿದ್ರಾ ದಿನ: ನಿದ್ದೆಯಿಂದ ಮಾನಸಿಕ ಸಾಮರ್ಥ್ಯ ವೃದ್ಧಿ, ದೇಹಕ್ಕೆ ಸ್ಫೂರ್ತಿ ಲಭ್ಯ

Upayuktha