ಕತೆ-ಕವನಗಳು

ತಲೆಬೆಶಿ (ಹವ್ಯಕ ಪದ್ಯ)

ದಿನ ಉದಿಯಾದರೆ ಎನಗದು ತಲೆಬೆಶಿ
ಮಧ್ಯಾಹ್ನದ ಊಟಕೆ‌ ಎಂತಕ್ಕು
ತರಕಾರಿ ತಂದದು ಮುಗುದು ಹೋಗಿದ್ದರೆ
ಖಾರದ ಚಟ್ನಿಯ ಮಾಡ್ಳಕ್ಕು…. ||

ದಿನ ಇರುಳಾದರೆ ಮತ್ತದೇ ತಲೆಬೆಶಿ
ನಾಳಂಗೆ ಕಾಪಿಗೆ ಎಂತಕ್ಕು
ಅಕ್ಕಿಯ ನೀರಿಂಗೆ ಹಾಕುಲೆ ಮರದರೆ
ಹೆಜ್ಜೆಯ ಊಟವೆ ಲಾಯ್ಕಕ್ಕು…..||

ಸಜ್ಜಿಗೆ ಮಾಡಿರೆ ಹೊಟ್ಟೆಗೆ ಆವುತ್ತಿಲ್ಲೆ
ಅವಲಕ್ಕಿಯಂತೂ ಗಾಸ್ಟ್ರಿಕ್ಕು
ಇಡ್ಲಿಯ ಕಂಡರೆ ಮನೆಯವಕ್ಕಾವುತ್ತಿಲ್ಲೆ
ಹುಳಿದೋಸೆ ತಿಂದರೆ ಜಡ ಅಕ್ಕು… ||

ಸೇಮಗೆ ಮಾಡಿರೆ ಕಾಯಿಹಾಲು ಆಯೆಕ್ಕು
ಮೆಂತೆ ಸಾಂಬಾರು ಒಟ್ಟಿಂಗಿರೆಕ್ಕು
ಉಂಡೆಯ ಮಾಡಿರೆ ಮೋರೆ ಬೀಗುತ್ತು
ಮನೆದೇವರು ತೆಳ್ಳವು ಎಲ್ಲೋರಿಂಗಕ್ಕು… ||

ಮನೆಯವಕ್ಕೆ ಬೇಕಾದ್ದು ಮಾಡಿ ಕೊಟ್ಟರೆ
ಚಪ್ಪರ್ಸಿ ತಿಂಬಲೆ ಖುಷಿ ಅಕ್ಕು
ಮನೆಯಾಕೆಗೆ ಚೂರು ಸಹಕಾರ ನೀಡಿರೆ
ಸೊಂಟ ಸೋಬಾನ ಆಗದ್ದೆ ಇಕ್ಕು…||

-ರೂಪಾ ಪ್ರಸಾದ ಕೋಡಿಂಬಳ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಅಮರ ಕೋಗಿಲೆ: ಗಾನಗಂಧರ್ವ ಎಸ್‌ಪಿಬಿಗೆ ಅಕ್ಷರ ನಮನ

Upayuktha

“ಜೈ ಭಾರತಾಂಬೆ ” ದೇಶಭಕ್ತಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆ

Harshitha Harish

ಗುರುಗಳಿಗೆ ನಮನ

Harshitha Harish

Leave a Comment