ಮನದಿ ಯಾವ ಭಾವವೊ
ಕಾಡುತಿದೆ ನಿನ್ನಲ್ಲಿ
ನುಂಗಿಕೊಂಡ ನೋವು ಎಲ್ಲ
ಕಾಣುತಿದೆ ಕಣ್ಣಲ್ಲಿ
ಲೋಕವನ್ನೆ ನಗಿಸುತಿರುವೆ ಎಂದುಕೊಂಡೆವಾದರೂ
ಹೃದಯ ಭಾಷೆ ತಿಳಿಯದೇ
ಪ್ರೀತಿ ಮಾಡೊ ಮನಸಿಗೆ.
ಕಾಲವನ್ನೆ ಮರೆತಂತೆಯೆ ಮಾತಿಗಂಟಿಕೊಳ್ಳುತಿದ್ದೆ
ಇಹಪರದ ಅರಿವೆ ಇರದೆ
ಏಕಾಂತದಿ ಇರುವಂತೆಯೆ
ಮಾತು ಮೌನ ಮೀರಿದಂಥ
ಲೋಕವನ್ನೆ ತೋರುತಿದ್ದೆ
ಕನಸುಗಳನು ಬಂಧಿಸಿಟ್ಟು
ನನಸು ಮಾಡೊ ಜಾಣನಿದ್ದೆ.
ನಾನು ನಿನಗೆ ದೂರದವಳೆ
ಹೇಳು ಗೆಳೆಯ ನಿನ್ನ ನೋವು
ಒಂದೆ ರಥದ ಗಾಲಿಯಂತೆ
ಇರಬೇಕಿದೆ ಮುಂದೆ ನಾವು
ಮುಗ್ಗರಿಸಲು ಬೇಡ ಇನಿಯ
ಮಗ್ಗುಲಲ್ಲಿ ಇರಲು ನಾನು
ನೋವನೆಲ್ಲ ತಾಳಿಕೊಂಡು
ಇರಲು ಬೇಡ ಒಂಟಿ ನೀನು.
ನಿನಗೆ ನಾನು ನನಗೆ ನೀನು
ಅಂದಿನಿಂದ ಎಂದೆಂದಿಗು
ಒಬ್ಬರು ಇನ್ನೊಬ್ಬರಿಗೆಂದೆ
ತಿಳಿದು ಬಾಳುತಿದ್ದೆವಲ್ಲ
ಏನೆ ಬರಲಿ ಬಾಳಿನಲ್ಲಿ
ಬಿಡೆನು ನಿನ್ನನೆಂದು ತಿಳಿ
ಚೈತನ್ಯದ ಚಿಲುಮೆಯಾಗು
ಪ್ರೇಮ ಭಾವಗೀತೆಯಾಗು
*********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ