ಕತೆ-ಕವನಗಳು

ಕವನ-ಗಾಯನ: ಮರೆಯಲಿರುವವನಾರೊ

ನಾನೆಂಬುದೇನೆಂದು ತಿಳಿಯೋ ಮಾನವ
ನಾನೆಂಬುದೇನಿಲ್ಲ ಅರಿಯೋ….॥

ಈ ಕಾಯ ನಾನೆಂಬೆ ಕಾಯ ಕೊಟ್ಟವನಾರೊ
ಅದರೊಳಗೆ ಜೀವಾತ್ಮ ತಂದು ಬಿಟ್ಟವನಾರೊ
ಈ ಕಾಲು ಕೈಗಳನು ಕಣ್ಣು ಕಿವಿ ನಾಸಿಕವ
ಮತ್ತೆ ಶಿರದಲ್ಲಿ ಮನ ಬುದ್ಧಿ ಇಟ್ಟವನಾರೊ॥

ತನುವಲ್ಲಿ ಕಸುವನ್ನು ತುಂಬಿಸಿಟ್ಟವನಾರೊ
ಇತ್ತೈದು ಇಂದ್ರಿಯದಿ ಆಸೆ ತಂದವನಾರೊ
ತಿಳಿವೆಂಬ ದೋಣಿಯಲಿ ಕುಳ್ಳಿರಿಸಿ ಮನುಜನ
ಪಾಪ ಪುಣ್ಯದ ಲೇಪ ಹಚ್ಚಿ ಬಿಟ್ಟವನಾರೊ॥

ಕಷ್ಟ ಸುಖದರಿವನ್ನು ಮನಕೆ ಅರುಹಿದನಾರೊ
ಅವರವರ ಅನ್ನವನು ಜೀವಿಗಿತ್ತವನಾರೊ
ಜೀವಿಗಳುದಯಕ್ಕೆ ಉದಕ ಕೊಟ್ಟವನಾರೊ
ಪಂಚಭೂತಕು ಒಡೆಯ ಮರೆಯಲಿರುವವನಾರೊ॥

********
ರಚನೆ, ಸಂಗೀತ: ಬಾಲಕೃಷ್ಣ ಸಹಸ್ರಬುಧ್ಯೆ

ಹಾಡಿದವರು: ನವಮಿ ಮತ್ತು ಶಾರ್ವರಿ
********

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕವನ: ಅಪನಂಬಿಕೆ

Upayuktha

*ಕವನ: ದ್ವಿತನು ಏಕಾತ್ಮದಂತೆ…!*

Harshitha Harish

*ಬಾಳ ಬಂಡಿ*

Harshitha Harish