ಕತೆ-ಕವನಗಳು

ಕವನ: ತಾಯಿ

ನವಮಾಸ ಮಡಿಲಲ್ಲಿ ಜತನದಿ ಹೊತ್ತು
ಬಂದ ಸಂಕಷ್ಟಗಳ ಸರಿಸುತಾ ಬದಿಗಿಟ್ಟು
ಹೊನ್ನ ಹೂಮಾಲೆ ಧರಿಸಲು ಕಾತರದಿ
ಕಾಯುವ ಒಡಲ ಮಹಾಜೀವವೇ ತಾಯಿ..

ಶಾಂತ ಶರಧಿಯ ತೆರೆಗಳ ಆ ಅಬ್ಬರದಂತೆ
ತನ್ನ ಕನಕ ಕಾಯದ ಮಹಾ ಬದಲಾವಣೆ
ಜಗತ್ತು ನೀಡಿದ ಪರಮ ಅದ್ಭುತವೇ ಎಂದು
ಹಗಳಿರುಳು ಸುಖಿಸುವ ಸುರಧೇನು ತಾಯಿ..

ಇರುಳ ಅಂಬರದಿ ಉದಯಿಸುವ ತಿಂಗಳನು
ತರುವಂತೆ ಶೀತಲಮಯ ಹಾಲು ಬೆಳದಿಂಗಳನು
ಇಳೆಯ ಬಾಳಬಳ್ಳಿಯಲಿ ಸಮೃದ್ಧ ನಗೆಮಿಂಚು
ತುಂಬಿ ಪೊರೆಯುವ ಪಾವನ ಹೃದಯ ತಾಯಿ..

ದೂರದಿಗಂತವು ಭೂಮಿಯನು ತಬ್ಬಿದಂತೆ
ಇಳೆಯ ಮೇಲೆ ಒಲವ ವರ್ಷಧಾರೆಯಂತೆ
ಗಿರಿಯ ಮಧ್ಯದ ಶುಭ್ರ ಸಲಿಲಝರಿಯಂತೆ
ನಗೆಹೂವ ಹರಡಿ ಮಗುವಾಗುವವಳು ತಾಯಿ..

ತಾಯಿಪಟ್ಟದ ಮುಂದೆ ತೃಣವು ರಾಣಿಪಟ್ಟ
ಕೋಟಿ ಕೋಟಿಯ ಕೂಡಿಸಿ ರಾಶಿ ಹಾಕಿದರೂ
ತಾಯಿಪಟ್ಟದ ಮುಂದೆ ಅದು ಸರಿಸಮ ನಿಲ್ಲದು
ಈ ಜಗದೊಳು ತಾಯಿಗಿಹರೇ ಸರಿಸಮಾನರು…

– ಗೀತಾ ರಾಘವೇಂದ್ರ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ತುಳಿದು ನಡೆಯಬೇಡ ಮನುಜ.

Harshitha Harish

*ನನ್ನಾಕೆ*

Harshitha Harish

ಕಾವ್ಯ ಲೋಕ: ಕುಮಾರ ಚರಿತೆ

Upayuktha