ಕತೆ-ಕವನಗಳು

(ಕಿರಿಯರ ಕವನ): ಮಾತೆಗೆ ನಮನ

ಶಾರದೆ ಮಾತೆಗೆ ನಮಿಸಲು ದೊರೆವುದು
ತಿಳಿವನು ನೀಡುವ ಭಂಡಾರ |
ಹೃದಯದ ಶುದ್ಧಿಗೆ ಬುದ್ಧಿಯ ಸಿದ್ಧಿಗೆ
ಹರಕೆಯ ನೀಡುವ ಮಮಕಾರ ||

ಲಕ್ಷ್ಮೀ ದೇವಿಯ ಪೂಜಿಸಿ ಪಡೆವೆವು
ನವವಿಧ ರತ್ನದ ಭಂಡಾರ |
ಸುಖದಲಿ ಜೀವನ ನಡೆಸಲು ಬೇಕಿದೆ
ಮಾತೆಯ ಹರಕೆಯ ಮಮಕಾರ ||

ಲೋಕದ ಮಾತೆಯ ಪಾರ್ವತಿ ದೇವಿಯ
ಪೂಜಿಸಿ ಕಲಿವೆವು ತಾಯ್ನುಡಿಯ |
ಅರ್ಥವ ತಿಳಿಯುತ ಪದಗಳನೋದುತ
ಮರೆಯದೆ ತಿಳಿವೆವು ಚೆನ್ನುಡಿಯ ||

ನವವಿಧ ಭಕುತಿಯ ಬೆಳೆಸುತ ಮನದಲಿ
ಅನುದಿನ ದೇವಿಯ ಭಜಿಸುವೆವು |
ವಿಧವಿಧ ರೂಪವ ಕಣ್ಣಲಿ ತುಂಬುತ
ಅಮ್ಮನ ಮಮತೆಯ ಗಳಿಸುವೆವು ||

ಹಗಲೂ ಇರುಳೂ ಸಡಗರದಿಂದಲಿ
ನಿಷ್ಠೆಲಿ ಕಾಯಕವೆಸಗುವೆವು |
ಬಗೆಬಗೆ ಸಿದ್ಧಿಯ ಕರಗತ ಮಾಡುತ
ಜೀವನ ಸಾರ್ಥಕಗೊಳಿಸುವೆವು ||

ಪಾಡ್ಯಕೆ ತೊಡಗುತ ದಶಮಿಗೆ ಮುಗಿಸಲು
ಬಾಳಲಿ ಬರುವುದು ಬಲುಸುಖವು |
ಮಾತೆಯ ನವವಿಧ ರೂಪವ ನೋಡಲು
ಮಕ್ಕಳ ಜೀವನ ಪಾವನವು ||

ಛಂದಸ್ಸು:-
೪+೪+೪+೪
೪+೪+೫
೪+೪+೪+೪
೪+೪+೫ – ಈ ರೀತಿಯ ಮಾತ್ರಾಗಣಗಳಿರುವ ಅಂತ್ಯ ಪ್ರಾಸವೂ ಇರುವ ಸುಲಭ ಚೌಪದಿ.

ಆಶುಕವನ – ರಚನೆ: ವಿ.ಬಿ.ಕುಳಮರ್ವ, ಕುಂಬ್ಳೆ

ರಾಗಸಂಯೋಜನೆ ಮಾಡಿ ಹಾಡಿದವರು -ಮಂಡ್ಯದ ಕಲಾಶ್ರೀ ವಿದ್ಯಾಶಂಕರ, ಸುಪ್ರಸಿದ್ಧ ಗಮಕಿಗಳು ಮತ್ತು ಸಾಹಿತಿಗಳು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

*ಕಾತ್ಯಾಯನಿ*

Harshitha Harish

ಅಮ್ಮ

Harshitha Harish

ನವರಾತ್ರಿ ಹಬ್ಬ

Harshitha Harish

Leave a Comment