ಕತೆ-ಕವನಗಳು

ಕವನ: ಅಮ್ಮನ ನೆನಪು

ಅಂದು ನಡೆವಲಿ ಎಡವಿ
ಬೀಳುತಿದ್ದರೆ ನಾನು
ವಾತ್ಸಲ್ಯ ತುಂಬುತ್ತ ಮಮತೆಯಿಂದ
ಮುಂದೆಂದು ಜೀವನದಿ
ಮುಗ್ಗರಿಸದಿರು ಎಂದು
ಕೈ ಹಿಡಿದು ನಡೆಸಿರುವೆ ಒಲುಮೆಯಿಂದ.

ನನ್ನೊಳಗೆ ಇರುವಂಥ
ನನ್ನನ್ನು ಹೊರಗೆಳೆದು
ನನ್ನತನವನ್ನು ಬಡಿದೆಬ್ಬಿಸಿದ್ದೆ
ನಿನ್ನ ಆ ಸ್ಪೂರ್ತಿಯಲಿ
ನಡೆನಡೆದು ಮುದಿಯಾದೆ
ನೀನಿಲ್ಲದೇ ನಾನು ಒಬ್ಬಂಟಿಯೆ.

ಮತ್ತೆ ನಾ ಕಾಣುವೆನು
ಈ ನಡೆವ ಸಾಧನದಿ
ನೀನಂದು ತುಂಬಿರುವ ಆ ಧೈರ್ಯವ
ಆ ಮಧುರ ನೆನಪುಗಳು
ಮರುಕಳಿಸಿ ಬಂದಿಹವು
ಈ ಸ್ಪರ್ಶ ತಾಯ್ತನವ ತೋರಿದಂತೆ.

ಅಳಿದುಳಿದ ಶಕ್ತಿಯನು
ಎನಿತೆನಿತು ಛಲದಿಂದ
ಒಗ್ಗೂಡಿಸಲು ಒಂದು ಸಾಧನವಿದು
ಕಾಲವನು ಹಿಂದಿಕ್ಕಿ
ಬಾಲ್ಯ ಯೌವನ ಕಳೆದು
ವೃದ್ಧಾಪ್ಯ ತಾಳಿದವರಾಸರೆಯಿದು.
**********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

*ನೀಲಮಣಿ* ಭಾಗ-1

Harshitha Harish

ಕವನ: ಕನಸುಗಳಿಗೆ ಬಡತನವಿಲ್ಲ

Upayuktha

ಶಿವ ಪಂಚಾಕ್ಷರೀ ಸ್ತೋತ್ರ ಕನ್ನಡದಲ್ಲಿ!

Upayuktha