
ಬಂತು ಸ್ವಾತಂತ್ರ್ಯ ಬಂತು ಬಿಡುಗಡೆಯು
ಬಂತು ಸೊಗದ ಹೊನಲು |
ಬಂತು ಆನಂದ ಬಂತು ಸೌಭಾಗ್ಯ
ಬಂತು ದೇವ ಮಹಲು ||
|| ಪಲ್ಲವಿ||
ತಾಯ ನೆಲವನು ನಮ್ಮದಾಗಿಸಲು
ಗೈದ ಚಳುವಳಿಗಳೆಷ್ಟೋ |
ಗಾಯದಲಿ ಬರೆಯೆಳೆದ ದುಷ್ಟರನು
ಸದೆಬಡಿದ ಸುಜನರೆಷ್ಟೋ ||
( ಅನುಪಲ್ಲವಿ)
ಭಾರತವೆ ತಾಯ್ನಾಡು ನಾವು ಜನಿಸಿದ ಮಣ್ಣು
ನಮ್ಮನುದ್ಧರಿಪ ಚೆಲುವ ದೇವಭೂಮಿ |
ಭಾರತಿಯ ಮಡಿಲಲ್ಲಿ ಬಾಳಿ ಬದುಕುವ ನಮಗೆ
ಗುರಿತೋರಿ ನಡೆಸುತಿಹ ಕರ್ಮಭೂಮಿ ||
ಸ್ವಾತಂತ್ರ್ಯದಾಗಸದಿ ಮೂಡಿರುವ
ದಿನಮಣಿಯು
ಪರತಂತ್ರ ರಕ್ಕಸನ ದಹಿಸಿರುವನು |
ಸ್ವಾವಲಂಬಿಗಳಾಗಿ ದುಡಿಯುತ್ತ ಬದುಕಿದರೆ
ಪರಮಾತ್ಮ ಕೈಬಿಡದೆ ಪೊರೆಯುತಿಹನು ||
ಏರುತಿದೆ ಬಾವುಟವು ಹಾರುತಿದೆ ಬಾನಿನಲಿ
ಸಾರುತಿದೆ ನವಭಾವ ಸಡಗರವನು |
ತೋರುತಿದೆ ಹೊಸಬೆಳಕು ಭಾರತಿಯ
ಹಣೆಯಲ್ಲಿ
ಬೀರುತಿದೆ ನಮ್ಮೊಳಗೆ ಏಕತೆಯನು ||
ಬಂತು ಅಗೋಸ್ತು ಹದಿನೈದು ನಮಗಿಂದು
ತಂತು ಸಂಭ್ರಮದ ಮೋಕಳೀಕು |
ಸಂತ ಗಾಂಧಿಗೆ ನಮಿಸುತ್ತ ನಾವಿಂದು
ಮುಂತು ಗುರಿಯೆಡೆಗೆ ಸಾಗಬೇಕು ||
ಆಶು ಕವನ ರಚನೆ:-
– ವಿ.ಬಿ.ಕುಳಮರ್ವ, ಕುಂಬ್ಳೆ
ಈ ಕವನಕ್ಕೆ ಮೂವರು ಗಾಯಕರು ಭಿನ್ನ ರೀತಿಯಲ್ಲಿ ರಾಗ ಸಂಯೋಜಿಸಿ ಹಾಡಿದ್ದಾರೆ. ಹಾಡಿದವರು: ಅವನಿಶ್ರೀ ಕುಳಮರ್ವ, ಕು| ಶ್ರದ್ಧಾ ಭಟ್ ,ನಾಯರ್ಪಳ್ಳ. ಮತ್ತು ವಿದ್ವಾನ್ ಶ್ರೀ ಸಿಪಿ ವಿದ್ಯಾಶಂಕರ್ ಗಮಕಿಗಳು ,ಮಂಡ್ಯ ಇಲ್ಲಿ ಆಲಿಸಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.