ಕತೆ-ಕವನಗಳು

ಕವನ: ವೈದ್ಯೋ ನಾರಾಯಣೋ ಹರಿ


ದೇವರಂತು ಕಣ್ಣಿಗೆಂದು
ಕಾಣಲಾರ ಕಲಿಯುಗದಲಿ.
ಅದಕೆಂದೇ ಋಷಿಗಳಂದು
ವೈದ್ಯನನ್ನು ಹರಿ ಎಂದರು.
ಅದರಂತೆಯೆ ವೈದ್ಯ ಕೂಡ
ಇದ್ದ ಕಾಲವೊಂದಿದ್ದಿತು.

ಇಂದು ಕೂಡ ಅಂಥ ಕೋಟಿ
ವೈದ್ಯರಿಹರು ಈ ಜಗದಲಿ
ಮುಗ್ಧ ಜನರ ಕಷ್ಟ ಕಂಡು
ತನ್ನ ಸುಖವ ತ್ಯಜಿಸಿಕೊಂಡು
ಕರ್ತವ್ಯವೆ ದೇವರೆಂದು
ನಂಬಿದವರ ಕಾಪಿಡುತ್ತ.

ನಾಡಿ ಬಡಿತ ನೋಡಿಕೊಂಡು
ರೋಗ ಪತ್ತೆ ಮಾಡುತಿದ್ದ
ಆ ಕಾಲದ ವೈದ್ಯರೆಲ್ಲ
ಯಂತ್ರ ತಂತ್ರ ಅರಿಯಲಿಲ್ಲ
ವಂಶ ಪಾರಂಪರ್ಯದಲಿ
ಸೇವೆಸಲ್ಲಿಸುತಿದ್ದರವರು.

ವಿಧ ವಿಧ ಆವಿಷ್ಕಾರದ
ವೈದ್ಯ ವಿಜ್ಞಾನವು ಇಂದು
ರೋಗ ಪತ್ತೆ ಹಚ್ಚುವಲ್ಲಿ
ಸಾಗುತಲಿದೆ ಬಹಳ ಮುಂದು
ಹಿಂದಿನಂತೆ ಸಾವುನೋವು
ಬರಲೆಬಾರದೆಂದುಕೊಂಡು

ಜೀವ ಕೊಟ್ಟ ದೈವವಲ್ಲಿ
ಜೀವ ಕಾವ ವೈದ್ಯನಿಲ್ಲಿ.
ಯಾವ ಕ್ಷಣದಿ ಯಾರ ಹಿಡಿತ
ಸಡಿಲವಾಗತೊಡಗುವದೋ
ತಿಳಿಯಲಾರೆವೆಂದು ನಾವು
ಪರಿಣಾಮವು ಸಾವು ನೋವು.

ನೋವನೆಲ್ಲ ನೀಗುವಂಥ
ವೈದ್ಯರನ್ನು ಗೌರವಿಸುತ
ಹರಿಯ ಕರುಣೆ ಇರುವಂಥಹ
ವೈದ್ಯರನ್ನು ನಮಿಸೋಣ
ವ್ಯಾಧಿ ಇರದ ಸ್ಥಿತಿಯ ಕೊಡುವ
ವೈದ್ಯ ನೀನೆ ನಾರಾಯಣ.
********
– ಸಹಸ್ರಬುಧ್ಯೆ ಮುಂಡಾಜೆ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

*ಚಂದ್ರಘಂಟಾ*

Harshitha Harish

ಪರಿಸರ

Harshitha Harish

ಕವನ: ಮರೆಯಲಿರುವವನಾರೊ

Upayuktha