ಕತೆ-ಕವನಗಳು

ಪ್ಲವ ವರುಷ ತರಲಿ ಹರುಷ

ನೋವು ಕಳೆದು
ನಲಿವು ತರಲು
ಪ್ಲವವು ಉದಿಸಿ ಬಂದಿದೆ
ಬೇವಿನೊಡನೆ
ಬೆಲ್ಲ ಬೆರೆಸಿ
ಸಮರಸದ ತತ್ವ ಸಾರಿದೆ ||

ಕಳೆದ ನೂರು
ತರಹ ನೋವು
ವಿಪ್ಲವವು ನಶಿಸಿ ಸಂದಿದೆ
ವಿಕೃತಿ ಮಾಗಿ
ಸುಕೃತಿ ಬೀಗಿ
ಚೆಲುವು ಇರಲಿ ಎಂದಿದೆ ||

ಹೊಸತು ವರುಷ
ಹೊಸೆದು ತರಲಿ
ಭವ್ಯ ಭವಿತವ ಬಾಳಿಗೆ
ಹಚ್ಚ ಹಸಿರು
ಸ್ವಚ್ಚ ಉಸಿರು
ತುಂಬಿ ಬಾಳ ಜೋಳಿಗೆ ||

ಭವದ ಕಷ್ಟ
ಕಳೆದು ಇರಲಿ
ಸುಖದ ತಳಿರು ತೋರಣ
ಸೊಗದಿ ಇಷ್ಟ
ಕೂಡಿ ತರಲು
ಬಾಳಿಗದುವೆ ಹೂರಣ ||

-ರೂಪಾಪ್ರಸಾದ ಕೋಡಿಂಬಳ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಗಝಲ್: ತಂಗಾಳಿಯಲಿ ತೇಲಾಡೋಣ ಗೆಳತಿ

Upayuktha

ತುಳು ಕವನ: ಕಣಿ ದೀಲೆ – ಕಮ್ಮೆನ ಗಮೆಸಾಲೆ…

Upayuktha

ಕವನ: ಶರಣು ಕಾರ್ತಿಕೇಯ

Upayuktha