ಕತೆ-ಕವನಗಳು

ಕವನ-ಗಾಯನ: ರಾಧೆಯ ಸ್ವಗತ


ಭಾವ ಬರಿದು ಆಗಿದೆ ನೀನು ಎದುರು ಇಲ್ಲದೆ
ಜೀವ ಸೊರಗಿ ಹೋಗಿದೆ ಕೃಷ್ಣ ನೀನು ಕಾಣದೆ
ಒಂದು ಘಳಿಗೆ ಆದರೂ ಕರುಣೆಯನು ತೋರದೆ
ಯಾಕೆ ದೂರವಾಗಿಹೆ ಮನಕೆ ನೋವು ತಂದಿದೆ.

ನಾನು ನಿನ್ನ ಮನಸನು ಅರಿತು ನಡೆಯುತಿದ್ದೆನು
ನೀನೆ ನನ್ನ ಬಾಳಿನ ಬೆಳಕು ಎನ್ನುತಿದ್ದೆನು
ಬೆಳಕೆ ಇರದ ಇರುಳಲಿ ಬೆದರಿ ಹೋದ ಮಗುವಂತೆ
ಬಿಟ್ಟು ಹೋದ ಗಳಿಗೆಯೆ ಭಯದಿ ಒಂಟಿಯಾದೆನು.

ನೀನೆ ಬಹಳ ಇಷ್ಟವೂ ರಾಧೆ ನೀನೆ ಜಾಣೆಯೂ
ಎಂದು ಹೇಳಿ ನನ್ನನು ಯಾಕೆ ಪ್ರೀತಿ ಮಾಡಿದೆ
ಧಾರೆ ಎರೆದೆ ನನ್ನ ನಾನು ಪೂರ್ಣವಾಗಿ ನಿನ್ನಲಿ
ನೀನುಪೇಕ್ಷೆ ಮಾಡಲು ಕೃಷ್ಣ ಯಾರ ನಂಬಲಿ.

ಹೋಳಿಯಾಟವಾಡಿದ ನೆನಪೆ ಬಹಳ ಸುಂದರ
ಕೊಳಲಗಾನ ಇಂದಿಗೂ ಮರೆಯಲಾರೆ ಸುಮಧುರ
ನಮ್ಮ ಪ್ರೇಮ ಕಾವ್ಯವೆಂದು ಜಗವೆ ಕೊಂಡಾಡಲು
ಎಲ್ಲವನ್ನು ತೊರೆದೆಯಾ ಮತ್ತೆ ಮೊಗವ ತೋರೆಯಾ.

*******
ರಚನೆ..ಸಂಗೀತ
ಬಾಲಕೃಷ್ಣ ಸಹಸ್ರಬುಧ್ಯೆ

ಹಾಡಿದವರು..
ನವಮಿ ಮತ್ತು ಶಾರ್ವರಿ
*******

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ನಾನು ನನ್ನ ಹೆಜ್ಜೆ… ನನ್ನ ನಡೆ

Harshitha Harish

*ಸಿದ್ಧಿದಾತ್ರಿ*

Harshitha Harish

ಗಝಲ್: ಮುತ್ತಿನಂತೆ ಹೊಳೆಯುತಿರು ಗೆಳತಿ

Upayuktha