ಕತೆ-ಕವನಗಳು

ಕವನ: ಮಳೆರಾಯನಿಗೊಂದು ಮನವಿ


ಎಲ್ಲಿದ್ದೆ ಮಳೆರಾಯ ಇಲ್ಲಿ ತನಕ.
ನೆಂಟನಂತೆಯೆ ಬಂದು ಹೋಗುತಿದ್ದೆ.
ಜಲವಿರದೆ ನೆಲಬಿರಿದು ಕಂಗೆಡಿಸುತ
ಜೀವಕೋಟಿಗೆ ನೀನು ಭಯವ ತರುತ್ತಿದ್ದೆ.

ಬಸವಳಿದು, ಕರಮುಗಿದು, ಬೇಡಿದರು
ಈ ಜನರು ದೇವನಿಗೆ ಅಭಿಷೇಕ ಮಾಡಿದರು
ಕೃತಕ ಮೋಡವ ಬಿತ್ತಿ ಮಳೆ ಬಹಳ ಬರುವಂತೆ
ವಿಧವಿಧದಿ ನಿನ್ನನ್ನು ಮನವೊಲಿಸಲೆಂದು.

ಎಲ್ಲರ ಬಯಕೆಗಳಿಗೆ ಒಮ್ಮೆಲೇ ಸ್ಪಂದಿಸುತ
ಬೇಸರವೋ ಅನುಗ್ರಹವೋ ತೋಚಲಾರದು
ಮೊಗೆಮೊಗೆದು ಮೊಗೆಮೊಗೆದು ಕೊಡುತಿರುವೆ
ಮಕ್ಕಳಲ್ಲವೆ ನಾವು ಕರುಣೆ ತೋರೆಯ ನೀನು

ಈ ರೀತಿ ಕೋಪಿಸದೆ ಬದುಕುಗಳ ಮುಳುಗಿಸದೆ
ಎಷ್ಟು ಬೇಕಷ್ಟೆ ನೀ ಬಂದರೆಮಗೊಳಿತು
ರಚ್ಚೆ ಹಿಡಿದಂಥ ಮಗು ಹಣ್ಣು ಬೇಕೆಂದಾಗ
ಕೊಟ್ಟರಾದೀತೇ ದೇವ ಬಾಳೆಯ ಗೊನೆಯನ್ನು?

ಅತಿವೃಷ್ಟಿ ಬೇಕಿಲ್ಲ ಅನಾವೃಷ್ಟಿಯೂ ಸಲ್ಲ
ಹಿತವಾದ ಮಿತವಾದ ಇರಲಿ ಸಮತಾವಾದ
ನಮ್ಮ ಬದುಕು ಉಳಿಸು ನಮ್ಮ ಬದುಕಗೊಳಿಸು
ಬದುಕು ತೊರೆದು ಬದುಕುವ ಬದುಕು ಬೇಡ.

ಕೃಪೆ ತೋರು ಮಳೆರಾಯ ಕೃಪೆ ತೋರು
ಮತ್ತೊಮ್ಮೆ ಬೇಡುವೆವು ರುದ್ರ ನರ್ತನ ಬಿಡು
ಕಾರುಣ್ಯ ನೋಟವನು ನೀ ಹರಿಯಬಿಡು
ವರುಣ ದೇವನೆ ನೀನು ನಮ್ಮ ಕ್ಷಮಿಸಿ ಬಿಡು
************
-ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಹವ್ಯಕ ಕವಿತೆ: ಕಿರಿಕಿರಿ ಮುಗಿವಲಿಲ್ಲೆ!

Upayuktha

ಕವನ-ಗಾಯನ: ಮನದ ನೋವು

Upayuktha

ತಲೆಬೆಶಿ (ಹವ್ಯಕ ಪದ್ಯ)

Upayuktha

Leave a Comment