ಪುನಃ ಪುನಃ ಅದೇ
ಯೋಗ ನಿದ್ರೆಯಲ್ಲಿ
ಮೈಮರೆತು ಇರಬೇಡ..
ಬೆಳ್ಳಿಬೆಟ್ಟದ ಬುಡದಲ್ಲಿ
ಕೂಡಾ ಹಿಮಪಾತವಾಗಿ
ತಪೋಭಂಗವಾಗಬಹುದು..
ಕಾರಿರುಳ ಭಯಂಕರ
ವಿಷಮ ಸಮಯದಲ್ಲೂ
ಸಂಯಮ ಕಳೆದುಕೊಂಡು
ಉದಯರವಿಯ ಕಿರಣಕ್ಕೆ
ಮುಂಜಾನೆಯೇ ಕರಗುವ
ಮಂಜಿನ ಹನಿಯಾಗಬೇಡ..
ಅನವರತ ಹೊಳೆಯುವ
ರಜತ ದೀವಿಗೆಯಾಗು..
ನಾ ಕಿವಿಮಾತು ಹೇಳಿಲ್ಲ
ಎಂದು ಮತ್ತೆ ದೂರಬೇಡ…
ನಿನ್ನ ಮನದ ಬೆಳಕಿನ ಶಕ್ತಿ
ಸದಾ ನಿನ್ನವಳೇ ಕಣೋ…
-ಆತ್ಮಸಖಿ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ