*******
ಮ ನಸು ಮಲಿನವು ಆಗದಂತೆಯೆ
ಮಾ ಡ ಬೇಕಿದೆ ನಿತ್ಯ ಶೋಧವ
ಮಿ
ಮೀ ರದಂತೆಯೆ ಇರಲು ಮಾನವ.
ಮು ಕುಟ ತನುವಿಗೆ ಶುದ್ಧ ಮನಸೇ
ಮೂ ಲದಿಂದಲೆ ಹಿಡಿತ ಸಾಧಿಸಿ
ಮೃ ಗವ ಪಳಗಿಸಿ ಕೊಳ್ಳುವಂದದಿ
ಮೆ ಲ್ಲ ಮೆಲ್ಲನೆ ಛಲವ ಬಿಡದೆಯೆ.
ಮೇ ಲು ಪಂಕ್ತಿಯ ಬದುಕು ಕಟ್ಟಲು
ಮೈ ಯ ಮರೆಯದೆ ತಿಳಿಯಬೇಕಿದೆ
ಮೊ ದಲು ಬುದ್ಧಿಯ ಮಾತು ಕೇಳದೆ
ಮೋ ಸ ಹೋದರೆ ಕ್ಷಮೆಯು ಎಲ್ಲಿದೆ.
ಮೌ ಲ್ಯ ತುಂಬಿದ ಬದುಕು ಬಾಳಲು
ಮಂ ತ್ರ ದಂಡವೆ ಮನಸು ಆದರೆ
ಮಃ ದಾನಂದವ ಪಡೆದೆ ಪಡೆಯುವೆ
ಮ ತ್ತೆ ಆತ್ಮೋನ್ನತಿಯ ಹೊಂದುವೆ
************
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ