ಕತೆ-ಕವನಗಳು

ಕವನ: ತಿರುಗುತಿರುವ ತೊಟ್ಟಿಲುಗಳು

ತಿರುಗುತಿರುವ ತೊಟ್ಟಿಲುಗಳು
ಬರಿದೆ ಆಟಕಿರುವುದಲ್ಲ.
ಕಿರಿದರಲ್ಲಿ ಹಿರಿಯ ಅರ್ಥ ಕಾಣದಿರುವುದೇ.
ಅರಿತುಕೊಂಡರಷ್ಟೆ ನಮಗೆ
ಮರೆಯಲಾರದಂಥ ಪಾಠ
ಸಾರಿ ಹೇಳುತಿರಲು ನಾವು ಕಲಿಯಬೇಕಿದೆ.

ಮನುಜ ತನ್ನ ಜೀವನದಲಿ
ದಿನವು ಏಳು ಬೀಳುವಾಗ
ತನ್ನ ಬದುಕು ತನ್ನ ಕಕ್ಷೆ ಮೀರದಂತೆಯೆ
ಮನಸಿನೊಳಗೆ ಸಮತೋಲನ
ಎನಿತು ಕೂಡ ಕಳಕೊಳ್ಳದೆ
ಧ್ಯಾನದಂತೆ ಏಕಾಗ್ರತೆ ನಿತ್ಯ ಬೇಕಿದೆ.

ಇಳಿಯುತಿರಲು ಏರಿದವನು
ಬೆಳೆಯುತಿರುವ ಕೆಳಗಿನವನು
ಆಳದಿಂದ ಎತ್ತರಕ್ಕೆ ಮತ್ತೆ ಮತ್ತೆ ಸುತ್ತುವಂತೆ
ಬಾಳು ತಿರುಗೊ ತೊಟ್ಟಿಲಂತೆ
ಕೀಳು ಮೇಲು ಅನುಭವಿಸುತ
ಬಾಳಬೇಕು ನಿತ್ಯ ಎಂದು ಹೇಳುವಂತಿದೆ.
*******
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

*ಸ್ಕಂದ ಮಾತೆ*

Harshitha Harish

ಚೌತಿಯ ಸಡಗರ (ಮಕ್ಕಳ ಕವನ)

Upayuktha

ನವರಾತ್ರಿ ಹಬ್ಬ

Harshitha Harish