ಚಂದನವನ- ಸ್ಯಾಂಡಲ್‌ವುಡ್

ಕೆಂಪೇಗೌಡ ಚಿತ್ರ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಪೊಲೀಸ್ ದಾಳಿ

ಬೆಂಗಳೂರು: ಗೋವಿಂದಪುರ ಡ್ರಗ್ ಕೇಸ್ ಸಂಬಂಧ ಪೊಲೀಸರು ಕೆಂಪೇಗೌಡ ಚಿತ್ರ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಡಾಲರ್ಸ್ ಕಾಲೋನಿ 3ನೇ ಮುಖ್ಯ ರಸ್ತೆಯಲ್ಲಿರುವ ನಿರ್ಮಾಪಕನ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈತನಿಗೆ ವಿದೇಶಿ ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿರುವ ಆರೋಪದ ಕಾರಣದಿಂದ ದಾಳಿ ನಡೆದಿದೆ.

ಗೋವಿಂದಪುರ ಠಾಣೆಯ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಸರ್ಚ್ ವಾರೆಂಟ್ ಪಡೆದು ಶಂಕರ್ ಗೌಡ ಅವರಿಗೆ ಸೇರಿದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಮೊದಲು ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ವಿಚಾರಣೆ ವೇಳೆ ಶಂಕರ್ ಗೌಡ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ದೊರಕಿದ್ದು ಈ ಕಾರಣದಿಂದ ದಾಳಿ ನಡೆದಿದೆ.

Related posts

ಕನ್ನಡದ ಯುವ ಚಿತ್ರನಟ ಚಿರಂಜೀವಿ ಸರ್ಜಾ ನಿಧನ

Upayuktha

ನಟಿ ರಮ್ಯಾ ಹುಟ್ಟುಹಬ್ಬ; ಶುಭಾಷಯ ಕೋರಿದ ಕಿಚ್ಚ ಸುದೀಪ್

Harshitha Harish

ಚೊಚ್ಚಲ ಸಿನಿಮಾದ ಮೂಲಕ ಟಾಲಿವುಡ್ ಗೆ ಕಾಲಿಟ್ಟ ನಟ ಚೇತನ್

Harshitha Harish